2011-CENSUS Abstract Data of k,taka

ಬೆಂಗಳೂರು, ಮೇ 23:
ಕರ್ನಾಟಕ ಜನಗಣತಿ
ಕಾರ್ಯಪಡೆ ನಿರ್ದೇಶಕ
ಅನಿಲ್ ಕುಮಾರ್ ಅವರು
ಬೆಂಗಳೂರಿನಲ್ಲಿಂದು
ಬಿಡುಗಡೆ ಮಾಡಿರುವ
2011ರ ಜನಗಣತಿ
ಮಾಹಿತಿಯ ಪ್ರಕಾರ
ರಾಜ್ಯದಲ್ಲಿ ಇರುವ
ಒಟ್ಟು ಜನಸಂಖ್ಯೆ
6,10,95,297. ದೇಶದ
ಒಟ್ಟು ಜನಸಂಖ್ಯೆ 121
ಕೋಟಿ.
ರಾಜ್ಯದ
ಒಟ್ಟು ಆರು ಕೋಟಿ
ಜನಸಂಖ್ಯೆ ಪೈಕಿ
ಪುರುಷರ ಸಂಖ್ಯೆ
3,೦9,66,657, ಮಹಿಳೆಯರ
ಜನಸಂಖ್ಯೆ 3,01,28,640.
ರಾಜ್ಯದಲ್ಲಿರುವ ಎಸ್ಸಿ
ಜನಾಂಗ
ಒಟ್ಟು ಜನಸಂಖ್ಯೆ
ಒಂದು ಕೋಟಿ
ನಲವತ್ತು ಲಕ್ಷ. ಎಸ್ಟಿ
ಜನಸಂಖ್ಯೆ 42,48,987.
ಅತಿ ಹೆಚ್ಚು ಜನಸಂಖ್ಯೆ
ಹೊಂದಿರುವ ರಾಜ್ಯಗಳ
ಪೈಕಿ ಕರ್ನಾಟಕಕ್ಕೆ
ಒಂಬತ್ತನೇ ಸ್ಥಾನ
ಸಿಕ್ಕಿದೆ.
ಬೆಂಗಳೂರು ನಗರದಲ್ಲಿ
ಅತೀ ಹೆಚ್ಚು ಜನಸಂಖ್ಯೆ
ಇದೆ. ಇಲ್ಲಿ ಇರುವ
ಜನಸಂಖ್ಯೆ 96,27,551
ಅತಿ ಕಡಿಮೆ ಜನಸಂಖ್ಯೆ
ಕೊಡಗು ಜಿಲ್ಲೆಯದು,
ಇಲ್ಲಿನ ಜನಸಂಖ್ಯೆ
5,54,519.
ಮಹಾನಗರ
ಪಾಲಿಕೆವಾರು
ಜನಸಂಖ್ಯೆ ವಿವರ :
*
ಬೆಂಗಳೂರು ಮಹಾನಗರ
ಪಾಲಿಕೆ : 84,43,675
* ಬೆಳಗಾವಿ: 4,88,157
* ಹುಬ್ಬಳ್ಳಿ-
ಧಾರವಾಡ : 9,43,788,
* ಬಳ್ಳಾರಿ:4,10,445,
* ದಾವಣಗೆರೆ: 4,34,971,
* ಮಂಗಳೂರು:
4,85,968,
* ಮೈಸೂರು : 8,93,062
* ಗುಲ್ಬರ್ಗಾ : 5,33,
587.
2011ರ ಜನಗಣತಿ
ಪ್ರಕಾರ
ಅತೀ ಹೆಚ್ಚು ಜನಸಂಖ್ಯೆ
ಹೊಂದಿರುವ 3
ಜಿಲ್ಲೆಗಳು
* ಬೆಂಗಳೂರು ನಗರ
-96,21,551,
* ಬೆಳಗಾವಿ -47,79,661,
* ಮೈಸೂರು-30,01,127.
ಅತಿ ಕಡಿಮೆ ಜನಸಂಖ್ಯೆ
ಹೊಂದಿರುವ 3
ಜಿಲ್ಲೆಗಳು
* ಕೊಡಗು-5,56,519,
* ಬೆಂಗಳೂರು
ಗ್ರಾಮಾಂತರ-9,90,923
,
* ಚಾಮರಾಜನಗರ-
10,20,179.
ಒಟ್ಟು ಸಾಕ್ಷರತೆಯ
ಪ್ರಮಾಣ 2011 ರಲ್ಲಿ
75.04 ಈ ಪ್ರಮಾಣ
20೦1ರಲ್ಲಿ
ಶೇ.66.06ರಷ್ಟಿತ್ತು. ಈ
ಹತ್ತು ವರ್ಷದ
ಅವಧಿಯಲ್ಲಿ ಶೇ.8.8
ರಷ್ಟು ಸಾಕ್ಷರತೆ
ಹೆಚ್ಚಳವಾಗಿದೆ. ಈಗ
ರಾಜ್ಯದಲ್ಲಿ 4,6,47,322
ಮಂದಿ
ಸಾಕ್ಷರರಿದ್ದಾರೆ.
2011ರ ಜನಗಣತಿ
ವರದಿಯಲ್ಲಿ ಸಾಕ್ಷರರ
ಸಂಖ್ಯೆ 3,04,34,962
ಇತ್ತು.
ಜಿಲ್ಲಾವಾರು
ಸಾಕ್ಷರತೆ ಪ್ರಮಾಣ :
* ದಕ್ಷಿಣ ಕನ್ನಡ ಜಿಲ್ಲೆ
ಪ್ರಥಮ ಸ್ಥಾನ
ಪಡೆದುಕೊಂಡಿದ್ದು
ಇಲ್ಲಿನ ಸಾಕ್ಷರತೆ
ಪ್ರಮಾಣ ಶೇ.88.57.
* ಬೆಂಗಳೂರುನಗರ
2ನೇ ಸ್ಥಾನದಲ್ಲಿದ್ದು,
87.67,
* ಉಡುಪಿ-86.64,
* ಚಾಮರಾಜನಗರ-
ಶೇ.61.43,
* ಯಾದಗಿರಿ ಜಿಲ್ಲೆ
ಸಾಕ್ಷರತೆಯಲ್ಲಿ ಕೊನೆಯ
ಸ್ಥಾನದಲ್ಲಿದ್ದು,
ಇಲ್ಲಿನ ಪ್ರಮಾಣ
ಶೇ.51.83ರಷ್ಟಿದೆ.
ಇನ್ನು ಪ್ರತಿ ಸಾವಿರ
ಜನಸಂಖ್ಯೆಗೆ ಮಹಾನಗರ
ಪಾಲಿಕೆ ವ್ಯಾಪ್ತಿಯಲ್ಲಿ
ಲೈಂಗಿಕ ಅನುಪಾತದ
ಸಂಖ್ಯೆ :
* ಬೆಳಗಾವಿ 988,
* ಹುಬ್ಬಳ್ಳಿ-
ಧಾರವಾಡ-989,
* ದಾವಣಗೆರೆ-971,
* ಬಳ್ಳಾರಿ-991,
* ಬಿಬಿಎಂಪಿ
ಬೆಂಗಳೂರು-923,
* ಮಂಗಳೂರು-1006,
* ಮೈಸೂರು-999,
ಗುಲ್ಬರ್ಗಾ-964.
ಸಾವಿರ ಪುರುಷ
ಜನಸಂಖ್ಯೆಗೆ ಈಗ
ಮಹಿಳಾ ಸಂಖ್ಯೆ 973.
ಕಳೆದ 2001ರ
ಜನಗಣತಿಯಲ್ಲಿ ಸಾವಿರ
ಪುರುಷರಿಗೆ 965
ಮಹಿಳೆಯರ ಸಂಖ್ಯೆ
ಇತ್ತು. ಈಗ ಪುರುಷರ
ಸಂಖ್ಯೆಗೆ ಹೋಲಿಸಿದರೆ
ಸ್ವಲ್ಪ ಮಟ್ಟಿಗೆ
ಮಹಿಳಾ ಸಂಖ್ಯೆ
ಹೆಚ್ಚಾಗಿರುವುದು
ಜನಗಣತಿಯಲ್ಲಿ
ಕಂಡು ಬಂದಿದೆ.
ಈಗ ದೇಶದ
ಒಟ್ಟು ಜನಸಂಖ್ಯೆ 121
ಕೋಟಿ 05,69,573
ಅತೀ ಹೆಚ್ಚಿನ
ಜನಸಂಖ್ಯೆ ಹೊಂದಿರುವ
ರಾಜ್ಯಗಳ ಪೈಕಿ
ಉತ್ತರಪ್ರದೇಶ
ಅಗ್ರಸ್ಥಾನದಲ್ಲಿದೆ.
ಇಲ್ಲಿನ ಜನಸಂಖ್ಯೆ 19
ಕೋಟಿ 98,12,341.
ಅತೀ ಕಡಿಮೆ ಜನಸಂಖ್ಯೆ
ಹೊಂದಿರುವ ಪ್ರದೇಶ
ಎಂದರೆ ಲಕ್ಷದ್ವೀಪ.
ಇಲ್ಲಿನ ಜನಸಂಖ್ಯೆ
ಕೇವಲ 64,473.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023