Drop


Monday, May 26, 2014

ಭವ್ಯ ಭಾರತ ಕಂಡ ಹದಿನಾಲ್ಕು ಪ್ರಧಾನಮಂತ್ರಿಗಳು

1/14
1. ಪಂ. ಜವಹರಲಾಲ್ ನೆಹರೂ
ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಿಯಾಗಿ ಆಯ್ಕೆಯಾದ ನೆಹರೂ ಕಾಂಗ್ರೆಸ್ ಟಿಕೆಟಿನಿಂದ ಪುಲ್ಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದವರು. 15.08.1947ರಲ್ಲಿ ಪ್ರಧಾನಿ ಪಟ್ಟಕ್ಕೇರಿದ ನೆಹರೂ, ಸತತ 16 ವರ್ಷ 286 ದಿನ ಪ್ರಧಾನಿಯಾಗಿ ಅಧಿಕಾರ ನಿರ್ವಹಿಸಿ 27.05.1964ರಲ್ಲಿ ನಿಧನರಾದರು.

2/14
2. ಲಾಲ್ ಬಹಾದುರ್ ಶಾಸ್ತ್ರಿ
ಭಾರತವನ್ನು ಸ್ವಾಭಿಮಾನಿ ರಾಷ್ಟ್ರವನ್ನಾಗಿ ಕಟ್ಟುವಲ್ಲಿ ಶಾಸ್ತ್ರಿಗಳ ಸೇವೆ ಅವಿಸ್ಮರಣೀಯ. ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಶಾಸ್ತ್ರಿಗಳು ಅಲಹಾಬಾದ್ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದರೂ ಕೂಡಾ. ಇವರ ಅವಧಿಯಲ್ಲಿ ಭೀಕರ ಬರಗಾಲ ಎದುರಾದಾಗ ಒಂದು ದಿನದ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹವಾಗುತ್ತೆ ಎಂದು ಲೆಕ್ಕಾಚಾರ ಮಾಡಿ ಸೋಮವಾರ ರಾತ್ರಿ ಊಟ ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. 09.06.1964 ರಿಂದ 11.01.1966ರ ಅವಧಿಯಲ್ಲಿ ಶಾಸ್ತ್ರಿ ಪ್ರಧಾನಿಯಾಗಿದ್ದರು. 11.01.1966ರಲ್ಲಿ ಶಾಸ್ತ್ರಿ ನಿಧನ ಹೊಂದಿದರು.

3/14
3. ಇಂದಿರಾ ಗಾಂಧಿ
ಶಾಸ್ತ್ರಿಯವರ ಹಠಾತ್ ನಿಧನದಿಂದ ಇಂದಿರಾ ಗಾಂಧಿ 24.01.1966ರಲ್ಲಿ ಪ್ರಧಾನಿ ಹುದ್ದೆಗೇರಿದರು. ಜುಲೈ 1969ರಲ್ಲಿ ಬ್ಯಾಂಕುಗಳನ್ನು ರಾಷ್ಟೀಕರಣ ಮಾಡಿದ ಇಂದಿರಾ ಗಾಂಧಿ 1971ರಲ್ಲಿ ಲೋಕಸಭಾ ಚುನಾವಣೆ ಗೆದ್ದ ನಂತರ ಎರಡನೇ ಅವಧಿಗೂ ಪ್ರಧಾನಿಯಾಗಿ ಆಯ್ಕೆಯಾದರು. ಜೂನ್ 26, 1975ರಂದು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಇವರು ರಾಯ್ ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಇಂದಿರಾ 24.01.1966 ರಿಂದ 24.03.1977ರ ವರೆಗೆ ಮತ್ತು 14.01.1980 ರಿಂದ 31.10.1984 ಅವಧಿಯಲ್ಲಿ ಪ್ರಧಾನಿಯಾಗಿದ್ದರು. ಅಕ್ಟೋಬರ್ 31, 1984ರಂದು ಇಂದಿರಾ ಹತ್ಯೆಯಾಯಿತು.

4/14
4. ಮೊರಾರ್ಜಿ ದೇಸಾಯಿ
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮೊರಾರ್ಜಿ ದೇಸಾಯಿ ದೇಶದ ನಾಲ್ಕನೇ ಪ್ರಧಾನಿಯಾಗಿದ್ದವರು. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಂಗ್ರೇಸೇತರ ಪ್ರಧಾನಿಯಾಗಿದ್ದ ಮೊರಾರ್ಜಿ ಜನತಾ ಪಕ್ಷವನ್ನು ಪ್ರತಿನಿಧಿಸುತ್ತಿದ್ದರು. ಸೂರತ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮೊರಾರ್ಜಿ 24.03.1977 ರಿಂದ 28.07.1979 ಅವಧಿಯಲ್ಲಿ ದೇಶದ ಪ್ರಧಾನಿಯಾಗಿದ್ದರು. 10.04.1995 ದಿನಾಂಕದಂದು ಮೊರಾರ್ಜಿ ನಿಧನ ಹೊಂದಿದರು.

5/14
5. ಚೌಧುರಿ ಚರಣ್ ಸಿಂಗ್
ಭಾರತೀಯ ಲೋಕದಳವನ್ನು ಪ್ರತಿನಿಧಿಸುತ್ತಿದ್ದ ಚರಣ್ ಸಿಂಗ್, ಮೊರಾರ್ಜಿ ಪ್ರಧಾನಿಯಾಗಿದ್ದಾಗ ಉಪಪ್ರಧಾನಿಯಾಗಿದ್ದರು. ಉತ್ತರಪ್ರದೇಶದ ಭಾಗಪತ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಚರಣ್ ಸಿಂಗ್, 28.07.1979 ರಿಂದ 14.01.1980ರ ಅವಧಿಯಲ್ಲಿ ದೇಶದ ಐದನೇ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದರು. 29.05.1987ರಲ್ಲಿ ಚರಣ್ ಸಿಂಗ್ ನಿಧನ ಹೊಂದಿದರು.

6/14
6. ರಾಜೀವ್ ಗಾಂಧಿ
ಭಾರತದ ಮೊದಲ ಯುವ ಪ್ರಧಾನಿ ಎನ್ನುವ ಗೌರವಕ್ಕೆ ಪಾತ್ರರಾದ ರಾಜೀವ್ ಗಾಂಧಿ ದೇಶದ ಆರನೇ ಪ್ರಧಾನಿಯಾಗಿ 31.10.1984 ರಿಂದ 02.12.1989ರ ವರೆಗೆ ಪ್ರಧಾನಿಯಾಗಿದ್ದರು. 21.05.1991ರಂದು ಅವರ ಹತ್ಯೆಯಾಗಿತ್ತು. ಬೊಫೋರ್ಸ್ ಹಗರಣ ರಾಜೀವ್ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆಯಾಗಿತ್ತು.

7/14
7. ವಿಶ್ವನಾಥ್ ಪ್ರತಾಪ್ ಸಿಂಗ್
ವಿ ಪಿ ಸಿಂಗ್ ಎಂದೇ ಜನಪ್ರಿಯರಾಗಿದ್ದ ಇವರು ಅಲಹಾಬಾದ್ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿದರು. ರಾಜೀವ್ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದ ಸಿಂಗ್, ನಂತರ ಜನತಾದಳದ ಮೂಲಕ 02.12.1989 ರಿಂದ 10.11.1990 ಅವಧಿಯಲ್ಲಿ ಪ್ರಧಾನಿಯಾಗಿದ್ದರು. 27.11.2008ರಲ್ಲಿ ವಿ ಪಿ ಸಿಂಗ್ ನಿಧನರಾದರು.

8/14
8. ಚಂದ್ರಶೇಖರ್
ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ್ 10.11.1990 ರಿಂದ 21.06.1991ರ ಅವಧಿಯಲ್ಲಿ ಪ್ರಧಾನಿಯಾಗಿದ್ದವರು. ಸಮಾಜವಾದಿ ಜನತಾ ಪಾರ್ಟಿ ಮೂಲಕ ಬಲಿಯಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಚಂದ್ರಶೇಖರ್ ದೇಶದ ಎಂಟನೇ ಪ್ರಧಾನಿ, ಇವರು 08.07.2007ರಲ್ಲಿ ನಿಧನರಾದರು.

9/14
9. ಪಿ ವಿ ನರಸಿಂಹ ರಾವ್
ಸ್ವಾತಂತ್ರ್ಯ ಚಳುವಳಿ ಮೂಲಕ ರಾಜಕೀಯ ಜೀವನ ಆರಂಭಿಸಿದ ಪಿವಿಎನ್, ಭಾರತದ ಒಂಬತ್ತನೇ ಪ್ರಧಾನಿ. ಹದಿನೇಳು ಭಾಷೆಗಳ ಜ್ಞಾನವನ್ನು ಹೊಂದಿದ್ದ ಇವರು 21.06.1991 ರಿಂದ 16.05.1996 ಅವಧಿಯಲ್ಲಿ ಪ್ರಧಾನಿಯಾಗಿದ್ದರು. ಇವರ ಅವಧಿಯಲ್ಲಿ ನಡೆದ ಪ್ರಮುಖ ಘಟನೆಯೆಂದರೆ ಬಾಬ್ರಿ ಮಸೀದಿ ಧ್ವಂಸ. ಇವರು 23.12.2004ರಲ್ಲಿ ನಿಧನರಾದರು.

10/14
10. ಅಟಲ್ ಬಿಹಾರಿ ವಾಜಪೇಯಿ
ಕಾಂಗ್ರೇಸೇತರ ಪ್ರಧಾನಿಯಾಗಿ ದೇಶವನ್ನು ಐದು ವರ್ಷ ಆಳಿದ ಹೆಗ್ಗಳಿಕೆಯ ರಾಜಕೀಯ ರಂಗದ ಅಜಾತಶತ್ರು ವಾಜಪೇಯಿ ಎರಡು ಸಲ ಪ್ರಧಾನಿಯಾದವರು. ಲಕ್ನೋ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅಟಲ್ 16.05.1996 ರಿಂದ 01.06.1996 ಮತ್ತು 19.03.1998 ರಿಂದ 19.05.2004ರ ಅವಧಿಯಲ್ಲಿ ಪ್ರಧಾನಿಯಾಗಿದ್ದರು. ಅನಾರೋಗ್ಯದ ಹಿನ್ನಲೆಯಲ್ಲಿ ಸಕ್ರಿಯ ರಾಜಕೀಯದಿಂದ ಅಟಲ್ ಸದ್ಯ ದೂರ ಸರಿದಿದ್ದಾರೆ.
11/14

12/14
12. ಇಂದ್ರ ಕುಮಾರ್ ಗುಜ್ರಾಲ್
ಕಾಂಗ್ರೆಸ್ ಬಾಹ್ಯ ಬೆಂಬಲದಿಂದ ಪ್ರಧಾನಿಯಾದ ಗುಜ್ರಾಲ್ 21.04.1997 ರಿಂದ 19.03.1998ರ ಅವಧಿಯಲ್ಲಿ ದೇಶದ ಹನ್ನೆರಡನೇ ಪ್ರಧಾನಿಯಾಗಿದ್ದವರು. ಆದರ್ಶವಾದಿ ರಾಜಕಾರಣಿ ಎಂದೇ ಹೆಸರಾಗಿದ್ದ ಐ ಕೆ ಗುಜ್ರಾಲ್ ಪರಿಶುದ್ದವಾದ ರಾಜಕೀಯ ಜೀವನವನ್ನು ಹೊಂದಿದ್ದವರು. ಗಂಭೀರ ಸ್ವರೂಪದ ಎದೆ ಸೋಂಕಿಗೆ ಗುರಿಯಾಗಿ ಗುಜ್ರಾಲ್ 30.11.2012ರಂದು ನಿಧನರಾದರು.

13/14
13. ಡಾ. ಮನಮೋಹನ್ ಸಿಂಗ್
ಸತತವಾಗಿ ಎರಡು ಅವಧಿಗೆ ಪ್ರಧಾನಿಯಾದ ಮನಮೋಹನ್ ಸಿಂಗ್ ಮೂಲತಃ ಆರ್ಥಿಕ ತಜ್ಞ. ರಾಜ್ಯಸಭೆಯ ಮೂಲಕ ಕಾಂಗ್ರೆಸ್ ಪಕ್ಷ ಪ್ರತಿನಿಧಿಸುವ ಸಿಂಗ್, ಆರ್ಥಿಕ ವ್ಯವಸ್ಥೆಯ ಸುಧಾರಣೆಯ ಶಿಲ್ಪಿ ಎಂದು ಹೆಸರು ಪಡೆದಿದ್ದರು. 22.05.2004ರಿಂದ ಎರಡು ಅವಧಿಗೆ ಸಿಂಗ್ ದೇಶದ ಹದಿಮೂರನೇ ಪ್ರಧಾನಿಯಾಗಿದ್ದಾರೆ. ಹದಿನಾಲ್ಕನೇ ಪ್ರಧಾನಿಯಾಗಿ ನರೇಂದ್ರ ಮೋದಿ ಸೋಮವಾರ (26.05.2014) ಪ್ರಮಾಣವಚನ ಸ್ವೀಕರಿಸಲಿದ್ದಾರೆ.