ವಿವಿಧ ಲೇಖನ ಚಿಹ್ನೆಗಳು

ಪೂರ್ಣ ವಿರಾಮ ( Full stop) (.)
ಪೂರ್ಣ ಅರ್ಥಕೊಡುವ ಒಂದು ಸಂಪೂರ್ಣ
ವಾಕ್ಯ ಕೊನೆಯಾದಾಗ ವಾಕ್ಯದ
ಕೊನೆಗೆ ಪೂರ್ಣ ವಿರಾಮ ಹಾಕಬೇಕು,
ಹಾಗೆಯೇ ವಾಕ್ಯವೃಂದದ ಕೊನೆಯಲ್ಲಿ
ಮತ್ತು ಲೇಖನವೊಂದರ
ಕೊನೆಯ ವಾಕ್ಯದ ಕೊನೆಯ
ಪೂರ್ಣ ವಿರಾಮವನ್ನು ಹಾಕಬೇಕು. ಪೂರ್ಣ ವಿರಾಮದ ನಂತರ
ಹೊಸ ವಾಕ್ಯವನ್ನು ಪ್ರಾರಂಭಿಸಬೇಕು.
ಇನ್ನು ಇದನ್ನು ಇಂಗ್ಲೀಷ ಭಾಷೆಯಲ್ಲಿ
ಬಳಸುವಾಗ ಮೊದಲನೆ ಅಕ್ಷರ
ದೊಡ್ಡ ಅಕ್ಷರದಿಂದಲೆ
ಬರೆಯಬೇಕು.ಓದುವಾಗ ಮತ್ತು ಬರೆಯುವಾಗ ಪೂರ್ಣ ವಿರಾಮ
ಅನುಸರಿಸಿ ಓದಬೇಕು ಬರೆಯಬೇಕು.
ಅಲ್ಪವಿರಾಮ ( Comma) (,)
ಓದುವಾಗ ಅಲ್ಪವಿರಾಮಗಳು ನಿಲುಗಡೆಯ ತಾನಗಳನ್ನು ಅನುಸರಿಸಿ
ನಿಂತು ಓದುವಂತೆ ಸೂಚಿಸುತ್ತವೆ. ವಿಷಯಕ್ಕೆ ಅನುಗುಣವಾಗಿ
ಓದುವ ದಿಕ್ಕನ್ನು ಬದಲಾಯಿಸಲು ಧ್ವನಿ ಏರಿಳಿತ ಅನುಸರಿಸಲು,
ಓದುವ ಶೈಲಿಯನ್ನು ಅನುಸರಿಸಲು ಸೂಚಿಸುತ್ತವೆ.
ಅಲ್ಪವಿರಾಮವನ್ನು ಒಂದು ಸಂಯುಕ್ತ ವಾಕ್ಯ
ಅಥವಾ ಅತಿ ಉದ್ದವಾದ ವಾಕ್ಯದಲ್ಲಿ ಹಲವು ಉಪ
ಅಂಶಗಳು ಸೇರಿದ್ದು ಆ
ಪ್ರತಿಯೊಂದು ಅಂಶವನ್ನು ಓದುಗನಿಗೆ
ಸ್ಪಷ್ಟವಾಗಿ ತಲುಪಿಸುವ ಉದ್ದೇಶದಿಂದ , ಸುಸಷ್ಟವಾಗಿ ಅರ್ಥ
ನೀಡುವ ಹಾಗೆ ಅಲ್ಪವಿರಾಮಗಳನ್ನು ಹಾಕಬೇಕು.
ಅರ್ಧವಿರಾಮ ( Semi Colon) ( ; )
ಅರ್ಧ ನಿಲುಗಡೆಯ ತಾನಗಳನ್ನು ಅಲವಡಿಸಿ
ಓದಲು ಅರ್ಧವಿರಾಮಗಳನ್ನು ಹಾಕಲಾಗುತ್ತದೆ.
ದೊಡ್ಡದಾದ ವಾಕ್ಯಗಳಲ್ಲಿ ಹಲವು ನಿರ್ಧಿಷ್ಟ
ಅಂಶಗಳು ನಿರಂತರವಾಗಿ ಮುಂದುವರೆದಿದ್ದರೆ,
ಅಥವಾ ವಾಕ್ಯದಲ್ಲಿ ಸೇರಿಕೊಂಡಿದ್ದರೆ
ಪ್ರತಿಯೊಂದು ನಿರ್ದಿಷ್ಟ ಅಂಶದ
ನಂತರ ಅರ್ಧವಿರಾಮ ಹಾಕಬೇಕು. ಓದುವಾಗಲು ಅರ್ಧವಿರಾಮ
ಚಿನ್ಹೆಯನ್ನು ಅನುಸರಿಸಿ ನಿಲ್ಲಿಸಿ ಓದಬೇಕು.
ವಿವರಣಾತ್ಮಕ ಚಿನ್ಹೆ (Colon) ( : )
ಒಂದು ದೊಡ್ಡ ವಾಕ್ಯದಲ್ಲಿ
ಅಥವಾ ವಾಕ್ಯವೃಂದದಲ್ಲಿ
ಹಲವು ಅಂಶಗಳನ್ನು ವಿವರಿಸಲ್ಪಡುವಂತೆ ಬರೆಯುವಾಗ
ಪ್ರತಿ ಅಂಶ ಬರೆದ ನಂತರ
ಹೇಳಿಕೆಗಳನ್ನು ಬರೆಯುವಾಗಲೂ ಈ ಚಿನ್ಹೆ
ಹಾಕಲಾಗುತ್ತದೆ. ಓದುಗರ ಗಮನ ಸೆಳೆಯುವ
ಒಂದು ತಂತ್ರವನ್ನಾಗಿಯೂ ವಿವರಣಾತ್ಮಕಚಿ
ನ್ಹೆಗಳನ್ನು ಹಾಕಲಾಗುತ್ತದೆ.
ಪ್ರಶ್ನಾರ್ಥಕ ಚಿಹ್ನೆ ( Question mark) ( ? )
ವಾಕ್ಯವು ಪ್ರಶ್ನೆಯ ರೀತಿಯಲ್ಲಿದ್ದರೆ,
ಪ್ರಶ್ನಾರ್ಥಕವಾಗಿದ್ದರೆ,ಪ್ರಶ್ನಾರ್ಥಕ ಚಿನ್ಹಡಯಿಂದ
ಕೊನೆಗೊಳ್ಳುತ್ತದೆ.
ಏನು,ಏಕೆ,ಹೇಗೆ,ವಿವರಿಸಿ,ಯಾರು,ಎಲ್ಲಿ,ಯಾವಾಗ ಇತ್ಯಾದಿ
ಪದಗಳಿಂದ ಪ್ರಾರಂಭವಾಗುವ ಅಥವಾ ನುಕ್ತಾಯವಾಗುವ
ವಾಕ್ಯಗಳಿಗೆ ಪ್ರಶ್ನಾರ್ಥಕ ಚಿನ್ಹೆಗಳನ್ನು ಹಾಕಲಾಗುತ್ತದೆ.
ಆಶ್ಚರ್ಯ/ಭಾವಸೂಚಕ ಚಿನ್ಹೆ ( Exclamation Mark) ( ! )
ಆವೇಶದ,ಉದ್ಗಾರದ,ಆಶ್ಚರ್ಯ ಸೂಚಿಸುವ
ಪದಗಳು,ವಾಕ್ಯಗಳು ಮತ್ತು ನುಡಿಗಟ್ಟುಗಳಿಗೆ ಆಶ್ಚರ್ಯ ಸೂಚಕ
ಚಿನ್ಹೆಗಳನ್ನು ಹಾಕಲಾಗುತ್ತದೆ. ಪದದ ಅಥವಾ ವಾಕ್ಯದ
ಭಾವನೆಯನ್ನು ಅದರ ತೀರ್ವತೆಯ
ಮಟ್ಟವನ್ನು ಸೂಚಿಸಲು ಎರಡು ಚಿನ್ಹೆಗಳನ್ನು ( !! )
ಹಾಕಲಾಗುತ್ತದೆ .
ಉದ್ಧರಣ ಚಿನ್ಹೆಗಳು ( Inverted Commas) ( " " )
ವಾಕ್ಯವೃಂದದಲ್ಲಿ ಅಥವಾ ಒಂದು ಲೇಖನದಲ್ಲಿ
ಕೆಲವು ಮುಖ್ಯ
ಪದಗಳನ್ನು ,ಹೇಳಿಕೆಗಳನ್ನು ಎತ್ತಿತೋರಿಸಲು ( Focus)
ಮಾಡಲು ಮತ್ತು ಓದುಗನ ಗಮನವನ್ನು ಸೆಳೆಯಲು ಉದ್ಧರಣ
ಚಿನ್ಹೆಗಳನ್ನು ಹಾಕಲಾಗುತ್ತದೆ. ಬರಹದಲ್ಲಿ ನುಡಿಗಟ್ಟುಗಳು ,
ಮುಖ್ಯ ಪದಗಳು ,ಹೇಳಿಕೆಗಳನ್ನು ವಿಶೇಷ ಗಮನದಿಂದ
ಓದಲು ಈ ಚಿನ್ಹೆಗಳು ಸೂಚಿಸುತ್ತವೆ.
ಆವರಣ ಚಿನ್ಹೆಗಳು ( Brackets) ( () )
ಬರವಣಿಗೆಯಲ್ಲಿ ಕೆಲವು ಪದಗಳಿಗೆ ಪೂರಕ ಅರ್ಥ
ನೀಡಲು ,ವಿರುದ್ಧ
ಅರ್ಥನೀಡಲು ವಾಕ್ಯವನ್ನು ಬೆಂಬಲಿಸುವ
ಪದಗಳನ್ನು ಬರೆಯಲು ,ಆಧಾರಗ್ರಂಥ ,ಲೇಖಕನ
ಹೆಸರು ಬರೆಯಲು , ಭಾಷಾಂತರ ಪದ ಅಥವಾ ವಾಕ್ಯ
ಬರೆಯಲು , ಓದುಗನಿಗೆ ಸೂಚನೆ ನೀಡಲು ,
ಸಂದರ್ಭವನ್ನು ಸ್ಮರಿಸಲು ಇತ್ಯಾದಿಗಳನ್ನು ಬರೆಯಲು
ಆಯಾ ಪದ , ಅಥವಾ ವಾಕ್ಯಕ್ಕೆ ಸಂಬಂಧಿಸಿದ
ಆವರಣ ಚಿನ್ಹೆಯೊಳಗಿನ
ಬರಹವನ್ನು ಅಲ್ಲಿಯೆ ಬರೆಯಬೇಕು.
ಸಂಯೋಜಕ ಅಥವಾ ವಿಭಜಕ ಚಿನ್ಹೆಗಳು ( Hyphen) ( - )
ಎರಡು ಪುಟ್ಟ
ಪದಗಳನ್ನು ಸಂಯೋಜಿಸಲು ಅಥವಾ ಎರಡು ಅಂಶಗಲಿರುವ
ಒಂದು ಪದವನ್ನು ವಿಭಜಿಸಿ ಅರ್ಥನೀಡಲು ಹಾಕುವ
ಚಿನ್ಹೆಗಳಿಗೆ ಸಂಯೋಜಕ ಚಿನ್ಹೆಗಳು ಎನ್ನುವರು.
ಒಂದು ಸಾಲಿನ ಕೊನೆಯಲ್ಲಿ
ಒಂದು ಪದ ಅಪೂರ್ಣವಾಗಿ ಮುಕ್ತಾಯವಾಗುವಾಗಲೂ ಆ ಸಾಲಿನ
ಕೊನೆಯಲ್ಲಿ ಅರ್ಧ ಪದದ ನಂತರ
ಸಂಯೋಜಕ ಚಿನ್ಹೆ ಹಾಕಿ ನಂತರದ ಸಾಲಿನಲ್ಲಿ
ಉಳಿದರ್ಧ ಪದವನ್ನು ಮುಂದುವರೆಸಿ ಬರೆಯಲಾಗುತ್ತದೆ. ಈ
ರೀತಿ ಅರ್ಧ ಪದಕ್ಕೆ ಸಂಯೋಜನಾ ಚಿನ್ಹೆ ಹಾಕುವಾಗ
ಸಾಲಿನ
ಕೊನೆಯಲ್ಲಿಯೇ ಹಾಕಬೇಕೆಂಬುದು ಗಮನಾರ್ಹ
.
ಅಡ್ಡಗೆರೆಗಳು ( Dashes) ( _ )
ಸಂಯೋಜಕ ಅಥವಾ ವಿಭಜಕ ಚಿನ್ಹೆಗಳ
ಹಾಗೆಯೇ ಅಡ್ಡಗೆರೆಗಳನ್ನು ಹಾಕಲಾಗುತ್ತದೆ. ಒಂದು ವಾಕ್ಯ
ಮುಗಿದು ಅದಕ್ಕೆ ಸಂಬಂಧಿಸಿದ ವಿವಿಧ
ಅಂಶಗಳನ್ನು ಬರೆಯುವ ಮುನ್ನ ವಾಕ್ಯ ಅತವ ಹೇಳಿಕೆಯ
ನಂತರ ಅಡ್ಡಗೆರೆ ಹಾಕಿ ವಿವಿಧ
ಅಂಶಗಳನ್ನು ಬರೆಯುವ ಮುನ್ನ ವಾಕ್ಯದ
ಅಥವಾ ಹೇಳಿಕೆಯ ನಂತರ ಅಡ್ಡಗೆರೆ ಹಾಕಿ ವಿವಿಧ
ಅಂಶಗಳನ್ನು ಬರೆಯಲಾಗುತ್ತದೆ.
ಸಾಲಿನ ಅಡ್ಡಗೆರೆ ( Underline) ( ___________ )
ಒಂದು ವಾಕ್ಯದಲ್ಲಿ ಮುಖ್ಯವಾದ ಪದಕ್ಕೆ
ಅಥವಾ ಒಂದು ವಾಕ್ಯವೃಂದಲ್ಲಿ ಮುಖ್ಯ ಎನಿಸುವ
ವಾಕ್ಯಕ್ಕೆ ಅಥವಾ ಹಲವು ವಾಕ್ಯಗಳಿಗೆ ಸಾಲುಗಳಿಗೆ ಹಾಕುವ
ಅಡ್ಡಗೆರೆಗಳು ಉದ್ಧರಣ ಚಿನ್ಹೆಗಳ ರಿತಿ ಕೆಲಸ ಮಾಡುತ್ತವೆ.
ಮುಖ್ಯ ವಿಷಯಗಳಿಗೆ
ಒತ್ತು ಕೊಡಲು ಮತ್ತು ಓದುಗನ ಗಮನ
ಸೆಳೆಯಲು ಈ ರೀತಿ ಸಾಲುಗಳಿಗೆ
ಅಡ್ಡಗೆರೆಗಳನ್ನು ಹಾಕಲಾಗುತ್ತದೆ.
ಹೀಗೆ ಒಬ್ಬ ಕನ್ನಡ ಬರೆಯುವವನು ಈ
ಮೇಲಿನವು ಗಮನದಲ್ಲಿಟ್ಟು ಬರೆಯಬೇಕು ಹಾಗೆ
ಇಂದು ಕಲಿಸುತ್ತಿರುವ ಶಿಕ್ಷಕರೆಲ್ಲಾ ತಮ್ಮ ಕನ್ನಡ
ಪಾಠದಲ್ಲಿ ಇವುಗಳನ್ನು ಸರಿಯಾಗಿ ತಮ್ಮ ಮಕ್ಕಳಿಗೆ ಕಲಿಸಿ
ಅವರ ಕನ್ನಡ
ಭಾಷೆಯನ್ನು ಸುಂದರಗೊಳಿಸಬೇಕಾದ
ಬಹುದೊಡ್ಡ ಅಗತ್ಯವಿದೆ ಎನಿಸುತ್ತದೆ. ಅದಕ್ಕಾಗಿ
ನಾವೆಲ್ಲ ಕನ್ನಡ ಭಾಷೆಯ
ವಿಚಾರಗಳನ್ನು ತಿಳಿದುಕೊಳ್ಳಬೇಕಾದ ಅವಶ್ಯಕತೆ
ಇದೆ ಎನಿಸುತ್ತದೆ.

Comments

Post a Comment

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023