Drop


Monday, July 21, 2014

ಮಧುರಚೆನ್ನ

***ಮಧುರಚೆನ್ನ***
ಜನನ -ಜುಲೈ ೩೧, ೧೯೦೩ ಹಿರೇಲೋಣಿ
ನಿಧನ -ಆಗಸ್ಟ್ ೧೫, ೧೯೫೩.
ಇದು ಚೆನ್ನಮಲ್ಲಪ್ಪ ಎಂಬ
ಮಹನೀಯರು ಮಧುರಚೆನ್ನಎಂಬ
ಎಲ್ಲರಿಗೂ ಬೇಕಾದ ವ್ಯಕ್ತಿಗಳಾಗಿ, ಮಧುರ ಕವಿಗಳಾದ ಹಿರಿಮೆಯ
ರೀತಿ.
ಮಧುರಚೆನ್ನರು ಕನ್ನಡ ನವೋದಯದ ಪ್ರಾರಂಭಿಕ
ಕಾಲದಲ್ಲಿನ ಮಹತ್ವದ ಬರಹಗಾರರೆಂದು ಪ್ರಸಿದ್ಧರಾಗಿದ್ದ
ಾರೆ. ಹಲಸಂಗಿ ಗೆಳೆಯರೆಂದು ಪ್ರಖ್ಯಾತರಾಗಿ ಜಾನಪದ
ಮತ್ತು ನವೋದಯ ಸಾಹಿತ್ಯಕ್ಕೆ ಮಹತ್ವದ
ಕೊಡುಗೆ ನೀಡಿದ ಸಕ್ರಿಯ ಸಾಹಿತ್ಯಿಕ
ಕ್ರಿಯಾಶೀಲ ತಂಡದಲ್ಲಿ
ಮಧುರಚೆನ್ನರೂ ಒಬ್ಬರು. ಈ ಗುಂಪಿನ ಇತರರಲ್ಲಿ
ಸಿಂಪಿ ಲಿಂಗಣ್ಣ, ಕಾಪಸೆ ರೇವಪ್ಪ, ಪಿ
ಧೂಲ್ಲಾ ಮುಂತಾದವರು ಪ್ರಮುಖರಾಗಿದ್ದರು.
ಜೀವನ
ಮಧುರಚೆನ್ನರೆಂದು ಖ್ಯಾತಿಪಡೆದ ಕವಿ ಹಲಸಂಗಿ
ಚೆನ್ನಮಲ್ಲಪ್ಪನವರು.ಇವರ ಪೂರ್ಣ ಹೆಸರು ಚೆನ್ನಮಲ್ಲಪ್ಪ
ಸಿದ್ಧಲಿಂಗಪ್ಪ ಗಲಗಲಿ. ಇವರು ಜನಿಸಿದ್ದುಹಲಸಂಗಿ
ಯಿಂದ ಪಶ್ಚಿಮಕ್ಕೆ ೬ ಮೈಲು ದೂರದಲ್ಲಿರುವ ಲೋಣಿ ಎನ್ನುವ
ಊರಿನಲ್ಲಿ. ಜನನ ದಿನಾಂಕ ೧೯೦೩ ಜುಲೈ ೩೧.
ಅವರು ಹುಟ್ಟಿದ ಊರು ಹಲಸಂಗಿಯ ನೆರೆ ಊರಾದ
ಹಿರೇಲೋಣಿಯಾದರೂ ಅವರು ಬದುಕೆಲ್ಲ
ಕಳೆದದ್ದು ಹಲಸಂಗಿಯಲ್ಲಿಯೇ.
ಅವರು 1921ರಲ್ಲಿ
ಮುಲ್ಕೀ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ
ಸ್ಥಾನ ಪಡೆದರಾದರೂ ಅವರ ಶಾಲೆಯ
ಓದು ಅಲ್ಲಿಗೇ ಮುಕ್ತಾಯಗೊಂಡಿತು. ಬಳಿಕ
ಬಿಜಾಪುರಕ್ಕೆ ಹೋಗಿ ಅಲ್ಲಿ
ಶ್ರೀ ಕೊಣ್ಣೂರು ಹಣಮಂತರಾಯರಿಂದ
ಸಾಧ್ಯವಾದಷ್ಟುಇಂಗ್ಲಿಷ್,ಸಂಸ್ಕೃತ
ಹಾಗು ಹಳಗನ್ನಡಗಳನ್ನು ಕಲಿತರು. ಅವರ ಸಂಶೋಧನೆ, ಜನಪದ
ಸಾಹಿತ್ಯದ ಅಧ್ಯಯನ, ಆಧ್ಯಾತ್ಮಿಕ ಸಾಹಿತ್ಯದ
ವ್ಯಾಸಂಗ, ಬಹುಭಾಷೆಗಳ ಅಭ್ಯಾಸ
ಮುಂತಾದವುಗಳೆಲ್ಲ ಅವರ ಅನನ್ಯವಾದ
ಸಾಹಿತ್ಯೋಪಾಸನೆಯ ಪ್ರತೀಕಗಳಾಗಿವೆ.
ಮಧುರಚನ್ನರ ವಿವಾಹ ಅವರ ೧೬ನೆಯ ವರ್ಷಕ್ಕೆಬಸಮ್ಮ
ಎನ್ನುವ ೧೨ ವರ್ಷದ ಕನ್ಯೆಯ ಜೊತೆಗೆ
ಆಯಿತು. ಅವರಿಗೆ ೬ ಹುಡುಗರು ಹಾಗೂ ಇಬ್ಬ್ಬರು ಹುಡುಗಿಯರು.
ಮಧುರಚೆನ್ನರು ತಮ್ಮ ೧೪ನೆಯ ವಯಸ್ಸಿನಲ್ಲಿಯೆ
ಸಾಹಿತ್ಯಸೃಷ್ಟಿಗೆ ತೊಡಗಿದರು. ೧೯ನೆಯ
ವಯಸ್ಸಿಗೆ ಶಿಲಾಶಾಸನಗಳ ಹಾಗು ಜನಪದ
ಸಾಹಿತ್ಯಸಂಶೋಧನೆಯಲ್ಲಿ ತೊಡಗಿದರು.
ಹಲಸಂಗಿಯಲ್ಲಿ ಗೆಳೆಯರ ಬಳಗವನ್ನು ಕಟ್ಟಿದರು. ಅನೇಕ
ಸಾಮಾಜಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಹಮ್ಮಿಕೊಂಡರು. ಆದರೆ
ಬಾಲ್ಯದಿಂದಲೂ ಅವರದು ಆಧ್ಯಾತ್ಮಿಕತೆಯ ಕಡೆಗೆ
ಒಲೆದ ಮನಸ್ಸು ಕೆಲಕಾಲ ನಾಸ್ತಿಕರಾಗಿದ್ದರೂ ಸಹ,
ಕೊನೆಗೊಮ್ಮೆ
ಶ್ರೀಅರವಿಂದರನ್ನು ತನ್ನ
ಗುರುಗಳೆಂದು ಭಾವಿಸಿದರು. ತೀವ್ರ
ಆಧ್ಯಾತ್ಮಸಾಧನೆಯ ನಂತರ ಮಧುರಚೆನ್ನರು ೧೯೫೩ರ
ಅಗಸ್ಟ ೧೫ರಂದು ದೇಹವಿಟ್ಟರು.
ಪತ್ರಿಕೆಯಲ್ಲಿ ಕಾರ್ಯ
ವಿಜಾಪುರದಲ್ಲಿ
ಶ್ರೀ ಕೊಣ್ಣೊರ
ಹಣಮಂತರಾಯರ ಸನ್ನಿಧಾನವನ್ನು ಕೆಲಕಾಲ ಪಡೆದ
ಮಧುರಚೆನ್ನರು ಕೊಣ್ಣೊರರು ಹೊರಡಿಸುತ್ತಿದ್ದ
'ಕಾವ್ಯಗುಚ್ಛ' ಪತ್ರಿಕೆಗೆ ಪ್ರಾಚೀನ ಕವಿತೆಗಳ
ಸರಳಾನುವಾದ ಬರೆದರು. ಈ
ಕಾಲದಲ್ಲಿಯೇ ಅವರು ಬೇಂದ್ರೆಯವರನ್ನು ಕಂಡದ್ದು.
'ಜಯಕರ್ನಾಟಕ; ಪತ್ರಿಕೆಯ
ಸಂಬಂಧವನ್ನು ಬೆಳೆಸಿಕೊಂಡದ್ದು.
ಇಲ್ಲಿಂದ ಪ್ರಾರಂಭವಾದ ಅವರ ಸಾಹಿತ್ಯಕ ಕಾರ್ಯ
ಅವರ ಜೀವನದುದ್ದಕ್ಕೂ ಬೆಳೆಯುತ್ತಾ ಹೋಯಿತು.
ಆಧ್ಯಾತ್ಮ ಸಾಹಿತ್ಯಗಳ ಮೇಳೈಕೆ
ಮಧುರ ಚೆನ್ನರ ಬದುಕಿನ
ಇನ್ನೊಂದು ಆಯಮವೆಂದರೆ ಅವರ
ಆಧ್ಯಾತ್ಮಿಕ ಸಾಧನೆ:ಹನ್ನೆರಡು ತುಂಬಿಲ್ಲ ಕನ್ನಕ್ಕಿ
ನಾನಂದುನನ್ನ ನಲ್ಲನ ಕತೆಗೆ
ಮರುಳುಗೊಂಡೆಇನ್ನೇ
ನು ಹೇಳುವೆನು ಇಂದಿಗಿಪ್ಪತ್ತಾರು
ಈಸೊಂದು ದಿನಕರಗಿ
ಗೊತ್ತುಗೊಂಡೆಎಂದು
'ನನ್ನನಲ್ಲ'ದಲ್ಲಿ ಮಧುರಚೆನ್ನರು ತಮ್ಮ
ಆತ್ಮಕಥೆಯನ್ನು ಹೇಳಿಕೊಂಡಿದ್ದಾರೆ.
ಅವರು ತಮ್ಮ ಹನ್ನೆರಡನೆಯ ವಯಸ್ಸಿನ ಸುಮಾರಿಗೆ
ದೇವರನ್ನು ಕಾಣುವ ಹಂಬಲವುಳ್ಳವರಾದರು.
ಸುಮಾರು ಹದಿನಾಲ್ಕು ವರ್ಷಗಳ ಸಾಧನೆಯಲ್ಲಿ ಹೋರಾಡಿ
ಅವನನ್ನು ಅರಿತುಕೊಂಡರು.
ಅನಂತರದಲ್ಲಿಯೂ ತಮ್ಮ
ಸಾಧನೆಯನ್ನು ಮುಂದುವರೆಸಿದ ಅವರು ತಮ್ಮ
ಧ್ಯೇಯವನ್ನು ಈಡೇರಿಸಿಕೊಂಡರು. ಅವರ
ಆಧ್ಯಾತ್ಮಿಕ ಸಾಧನೆಯ ಕಥನ ಅವರ ಗದ್ಯಕೃತಿಗಳಾದ
'ಪೂರ್ವರಂಗ', 'ಕಾಳರಾತ್ರಿ', 'ಬೆಳಗು'
ಮತ್ತು 'ಆತ್ಮಸಂಶೋಧನೆ' ಇವುಗಳಲ್ಲಿ ಮನೋಜ್ಞವಾಗಿ
ಪ್ರಕಟಗೊಂಡಿದೆ.ಮಧುರ ಚೆನ್ನರ
'ನನ್ನನಲ್ಲ' ಮರೆಯಲಾಗದ ಅನುಭಾವ ಗೀತ. ಈ
ಸಂಕಲನದಲ್ಲಿ 'ನನ್ನನಲ್ಲ', 'ಮಧುರಗೀತ'
ಎಂಬ ಎರಡು ಪ್ರಮುಖ ನೀಳ್ಗವಿತೆಗಳಿದ್ದು
ಉಳಿದದ್ದು ಭಾವಗೀತೆಗಳಾಗಿವೆ. 'ನನ್ನನಲ್ಲ' ಅವರ
ಹದಿನಾಲ್ಕು ವರ್ಷಗಳ ಆಧ್ಯಾತ್ಮಿಕ
ಸಾಧನೆಯನ್ನು ಚಿತ್ರಿಸುತ್ತದೆ.ಯಾರ ಕೇಳಿದರಿಲ್ಲ
ಯಾರು ಹೇಳಿದರಿಲ್ಲಯಾರ ಬಳಿಯಲಿ ಅತ್ತುಕರೆದರಿಲ್ಲಯಾರ
ಕಡೆಗೇನುಂಟು ಮೀರಿಮಿಕ್ಕಿದ ಮಾತುಯಾರ
ಬಳಿಗು ನೆಲೆಕಾಣಲಿಲ್ಲಹೀಗೆ ಸಾಗುವ ಅವರ ಹುಡುಕಾಟ
ಮುಂದೆ ಉತ್ಕಟ ಭಾವದ
ಅನುಭಾವವನ್ನು ಚಿತ್ರಿಸುವುದು ಹೀಗೆ:ಬಂತು ಬಂತೆಲೆ
ಬಂತು, ಬಂತು ಘನಸಿರಿ
ಬಂತುಬಂತೆಂದರೂ ಇದ್ದುದಿದ್ದೇ ಇತ್ತು,ಬಂತು ಬೆಳಗೆಂಬಂತೆ
ಬಂತು ಹೊಳೆ ಬಂದಂತೆಇದ್ದದ್ದೆ
ತುಂಬಿ ತುಳುತುಳುಕುತ್ತಿತ್ತು.ನಿಶ್ಯಬ್ದ ನಿಶ್ಯಬ್ದ
ಶಬ್ದದಾಚೆಯ ಶಬ್ದನಿಶ್ಯಬ್ದವಿದ
್ದರೂ ಮೌನವಲ್ಲ,ನಿಸ್ಸೀಮ ನಿಸ್ಸೀಮ
ಸೀಮದಲೆ ನಿಸ್ಸೀಮನಿಸ್ಸೀಮವ
ೆಂದರೂ ಶೂನ್ಯವಲ್ಲ.ಇಲ್ಲಿಯ ಅನುಭಾವದ ಅಭಿವ್ಯಕ್ತಿ
ಶಬ್ದಕ್ಕೆ ಮೀರಿದ ಅನುಭವವನ್ನು ವ್ಯಕ್ತಪಡಿಸುತ್ತದ
ೆ. ಈ ಕುರಿತು ಡಾ. ವಿ. ಕೃ. ಗೋಕಾಕರು ಹೇಳುತ್ತಾರೆ: ".... ಆತ್ಮದ
ದಿವ್ಯ ಅರುಣೋದಯದ
ಶ್ರೀಮದ್ಗಂಭೀರ ವರ್ಣನೆ ಈ
ಅದ್ಭುತ ಶಬ್ದ-ರಂಗದ ನಿಶ್ಯಬ್ದತೆಯನ್ನು
ಅನುಭವಿಸಿಯೇ ನೋಡಬೇಕು. ಇಲ್ಲಿ ಅನುಭವದ ಆಳ ದರ್ಶನ
ಧಬೆಧಬೆಯಾಗಿ ಧುಮ್ಮಿಕ್ಕಿದೆ. ಆ ಧವಲಗಂಗೆಯ
ಧಾವವನ್ನು ನಿಂತು ನೋಡಬೇಕು"ಮಧುರಚೆನ್ನರ
ಇನ್ನೊಂದು ನೀಳ್ಗವನ
ಮಧುರಗೀತ.
ಇಂದೊಂದು ಸ್ನೇಹಸೂಕ್ತ, ಸಖ್ಯಯೋಗ
ಗೀತ. ಈ ಕವಿತೆಯಲ್ಲಿ ಪ್ರೇಮ, ಮೋಹ ಗೆಳೆತನದ
ಆದರ್ಶ ಮುಂತಾದವುಗಳೆಲ್ಲ ನಿರೂಪಿತವಾಗಿವೆ.ದ
ೇವಲೀಲೆಯೋ ಕಾಣೆ ಕರ್ಮಜಾಲವೋ ಕಾಣೆಅದು ನಮ್ಮ
ಬುದ್ಧಿಯಾಚೆಗಿನ ಮಾತು,ಯಾವುದೇನೇ ಇರಲಿ
ಪ್ರೀತಿಯಂಥಾ ವಸ್ತುಭವದಲ್ಲಿ ಕಾಣೆ
ಮನಗಂಡ ಮಾತು.
ಮಧುರಚೆನ್ನರ 'ದೇವತಾ ಪೃಥಿವಿ' ದ.
ರಾ ಬೇಂದ್ರೆಯವರು ನುಡಿದಂತೆ ಕೃತಿ ಸತಿಯ ಶಿರೋರತ್ನ.
ಈ ಕವಿತೆಯ ವಸ್ತು – ಮಧುರಚೆನ್ನರು ತಮ್ಮ 'ಬೆಳಗು'
ಕೃತಿಯಲ್ಲಿ ತಿಳಿಸಿಕೊಟ್ಟಂತೆ
"ಪರ್ಯಾಯದಿಂದ (indirectly) ಈಶ
ಪ್ರೇರಕತ್ವವನ್ನು ಒಪ್ಪಿಕೊಂಡ
ಜೀವವು ಈಗ ತೀರ ಪ್ರತ್ಯಕ್ಷವಾಗಿ
(directly) ಮತ್ತು ಅವಿಚ್ಚಿನ್ನವಾಗಿ ಅದನ್ನು ಅನುಭವಿಸಲೆಳಸುತ್ತ
ಿದೆ" ಎಂಬ ಸಾಧನೆಯ
ಒಂದು ಹಂತವನ್ನು ಒಳಗೊಂಡಿದೆ.
ಅಂದರೆ ಪೃಥ್ವಿಯ ದೈವತ್ವ
ಮತ್ತು ತಾಯ್ತನಗಳನ್ನು ಶ್ರದ್ಧೆಯಿಂದ
ಒಪ್ಪಿಕೊಂಡ ಕವಿ
ಒಂದು ಹಸಿವೆಯನ್ನು ಹಿಂಗಿಸಿಕೊಂಡು ಇನ್ನೊಂದು ಹಸಿವೆಗೆ
(ಕೇವಲದ ಹಸಿವೆಗೆ) ಬಾಯ್ದೆರೆದಿದ್ದಾನೆ.ಹಸವೀಗಿ
ಮೊಲೆಯುಂಡೆ ಕಸಿವೀಸಿಗೇನುಳ್ಳೆ
ಹಾಲೊಲ್ಲೆ ಸಾಕು ಬಿಗಿದಪ್ಪೆ |
ತಾಯಮ್ಮಮಲಗಿರುವ ತಾಯಿ ಪೃಥಿವಿ||ಮೊಲೆಹಾಲು
ರುಚಿಗೊಂಡು ಮನದ್ಹಾಲ
ಬಯಸೀನಗುಟುಗುಟುಕಿಗೊಮ್ಮೆ ಮಿಕಿಮಿಕಿ
| ಏಳಮ್ಮಮಲಗಿರುವ ತಾಯಿ ಪೃಥಿವಿ ||ದೈವತ್ವದ
ಬಾಹ್ಯಸ್ವರೂಪದ ಸೌಂದರ್ಯವನ್ನು ಅನುಭವಿಸಿದ ಕವಿ,
ಅದಕ್ಕೆ ಮಿಗಿಲಾಗಿ ಅಂತರಂಗದ
ಐಸಿರಿಯನ್ನು ಕಾಣಲು ಹಂಬಲಿಸುತ್ತಿರುವುದು ಇಲ್ಲಿ
ಕಂಡುಬರುತ್ತದೆ.
ಭಾವಗೀತೆಗಳು
ಮಧುರಚೆನ್ನರ ಇನ್ನುಳಿದ ಭಾವಗೀತಗಳಲ್ಲಿ 'ಸಲಿಗೆಯ
ಸಲ್ಲಾಪ', 'ನೋಂಪಿ', 'ಕೆಸರೊಳಗಿನ ಕಮಲ',
'ಸುಖದುಃಖ', 'ಸುಖ ಜೀವನ', 'ಧ್ರುವ', 'ಉಷಾದೇವಿ',
'ರೋಹಿಣಿ', 'ಮಾವಿನಗೊಲ್ಲೆ'
ಮುಂತಾದವುಗಳು ಭಾವ, ಭಾಷೆ, ಲಯ
ಮುಂತಾದವುಗಳಿಂದ ಕನ್ನಡದ ಅತ್ಯುತ್ತಮ
ಭಾವಗೀತಗಳ ಮಾಲಿಕೆಗೆ ಸೇರುತ್ತವೆ.
"ಹೊಸಗನ್ನಡ ಕಾವ್ಯಕ್ಕೆ ಜಾನಪದ
ಸತ್ವವನ್ನು ತುಂಬಿ, ಆತ್ಮಚಿಂತನೆಯ ಅನುಭಾವ
ಮಾರ್ಗದಲ್ಲಿ ಅದನ್ನು ನಡೆಸಿಕೊಂಡು ಹೋಗಿ,
ಕೃತಕೃತ್ಯರಾದ
ಮಧುರಚೆನ್ನರು ಕೆಲವೇ ಕೃತಿಗಳನ್ನು ನೀಡಿದ್ದರೂ ಅವುಗಳ
ಚೆಲುವು ಎಂದಿಗೂ ಮಾಸದಂತಹುದು" ಎಂಬ
ಚೆನ್ನವೀರ ಕಣವಿಯರ ವಿಮರ್ಶೆ
ಸಕಲರೂ ಒಪ್ಪಿಕೊಳ್ಳುವಂತಹದಾಗಿದೆ.
ಗದ್ಯ ಕೃತಿಗಳು
ಮಧುರಚೆನ್ನರ ಗದ್ಯಕೃತಿಗಳಲ್ಲಿ 'ಪೂರ್ವರಂಗ'
'ಕಾಳರಾತ್ರಿ', 'ಬೆಳಗು' ಮತ್ತು 'ಆತ್ಮ ಸಂಶೋಧನೆ'
ಇವು ಆಧ್ಯಾತ್ಮಿಕ ಸಾಧನೆಯನ್ನು ಚಿತ್ರಿಸುವ
ಸೃಜನಶೀಲ ಕೃತಿಗಳೆಂದೆನಿಸಿವೆ. 'ಪೂರ್ಣಯೋಗದ
ಪಥದಲ್ಲಿ', 'ಕನ್ನಡಿಗರ ಕುಲಗುರು' ಇತ್ಯಾದಿಗಳು ಅವರ
ಚಿಂತನಶೀಲ ಗದ್ಯಕೃತಿಗಳು. 'ವಿಸರ್ಜನ'
ರವೀಂದ್ರನಾಥ ಠಾಗೂರರ ನಾಟಕದ ಅನುವಾದ.
'ಮಾತೃವಾಣಿ' ಶ್ರೀಮಾತೆಯವರ 'ವರ್ಡ್ಸ್ ಆಫ್ ದಿ
ಮದರ್' ಅನುವಾದವಾಗಿದೆ.
ಶಾಸನ ದರ್ಶನ
ಬೇರೆ ಬೇರೆ ಪತ್ರಿಕೆಗಳಲ್ಲಿ ಚದರಿಹೋದ ತಮ್ಮ
ಸಂಶೋಧನಾತ್ಮಕವಾದ
ಒಟ್ಟು ಹದಿನಾಲ್ಕು ಲೇಖನಗಳನ್ನು ಮಧುರಚೆನ್ನರು ಪ್ರಕಟಿಸಿದ್ದು,
'ವಿಜಾಪುರ ಶಾಸನ', 'ಅಭಿನವ ಪಂಪ ಮಹಾಕವಿ ಬರೆದ ವಿಜಾಪುರ
ಶಿಲಾಲಿಪಿ', 'ಪ್ರಾಚೀನ ಕಾಲದ ಒಬ್ಬ ನಟಶ್ರೆಷ್ಟ
ಹಾಗೂ ಒಬ್ಬ ಕವಿ', 'ಅರ್ಜುನವಾಡದ ಶಾಸನ' ಈ
ಮುಂತಾದವುಗಳು ನಮ್ಮ ಸಾಹಿತ್ಯ ಚರಿತ್ರೆಯ ಮೇಲೆ
ಹೊಸ ಬೆಳಕು ಬೀರಿವೆ. ಅರವಿಂದ
ಸಾಹಿತ್ಯ, ಶರಣ ಸಾಹಿತ್ಯ, ಜನಪದ ಸಾಹಿತ್ಯ, ಭಾಷಾಶಾಸ್ತ್ರ
ಇತ್ಯಾದಿ ವಿಷಯಗಳನ್ನು ಕುರಿತು ಅವರು ಬರೆದ
ಹಲವು ಲೇಖನಗಳು ಆಯಾ ಕ್ಷೇತ್ರಗಳಲ್ಲಿ ಕಾರ್ಯಮಾಡುವವರಿಗೆ
ಅತ್ಯಂತ ಉಪಯುಕ್ತ ಸಾಮಗ್ರಿಯಾಗಿವೆ.