Thursday, October 30, 2014

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಟ್ಟ -ಪಂಕಜಗೆ


ಪಂಕಜ್ ಅಡ್ವಾಣಿಗೆ ಬಿಲಿಯಡ್ರ್ಸ್ ಚಾಂಪಿಯನ್ ಪಟ್ಟ

ಲಂಡನ್, ಅ.30-ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತದ ಅಗ್ರಮಾನ್ಯ ಬಿಲಿಯಡ್ರ್ಸ್ ಆಟಗಾರ ಪಂಕಜ್ ಅಡ್ವಾಣಿ ವಿಶ್ವ ಬಿಲಿಯಡ್ರ್ಸ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.  ಕಳೆದ ರಾತ್ರಿ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ (ಟೈಮ್ ಫಾರ್ಮೆಟ್)ಇಂಗ್ಲೆಂಡ್‍ನ  ರಾಬರ್ಟ್ ಹಾಲ್ ವಿರುದ್ಧ 1,928-893 ಪಾಯಿಂಟ್‍ಗಳ ಅಂತರದಿಂದ ಪರಾಭವಗೊಳಿಸಿ ಪಂಕಜ್ ಅಡ್ವಾಣಿ ಅದ್ಭುತ ಸಾಧನೆ ಮಾಡಿದ್ದಾರೆ.  ಪಂಕಜ್ ಅಡ್ವಾಣಿ ಅವರಿಗೆ ಇದು 12ನೇ ಚಾಂಪಿಯನ್ ಶಿಪ್ ಪಟ್ಟವಾಗಿದ್ದು, ಕಳೆದ 2005, 2008 ಮತ್ತು ಪ್ರಸ್ತುತ 2014ರ ಈ ಸಾಧನೆ ಮಾಡಿ ವಿಶ್ವ ಮಟ್ಟದಲ್ಲಿ ಮತ್ತೊಂದು ಹೊಸ ಕೀರ್ತಿ ಪತಾಕೆ ಹಾರಿಸಿದ್ದಾರೆ.   ಮೊದಲಾರ್ಧದಲ್ಲಿ ಮುನ್ನಡೆ ಸಾಧಿಸಿ ಎದುರಾಳಿ ವಿರುದ್ಧ ಹಿಡಿತ ಸಾಧಿಸಿದ್ದ ಅಡ್ವಾಣಿ ಯಾವ ಹಂತದಲ್ಲೂ ವಿಚಲಿತರಾಗದೆ ಅಂತಿಮವಾಗಿ ಭಾರೀ ಅಂತರದಲ್ಲಿ ಗೆಲ್ಲುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು.

ಕಳೆದ 2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಗ್ರ್ಯಾಂಡ್ ಡಬಲ್ ಸ್ಪರ್ಧೆಯಲ್ಲಿ ಇಂತಹ ಸಾಧನೆ ಮಾಡಿದ್ದೆ. ಆದರೆ ವಿದೇಶಿ ನೆಲದಲ್ಲಿ ಈ ಜಯ ನನಗೆ ಹೊಸ ಸ್ಫೂರ್ತಿ ಹಾಗೂ ಖುಷಿ ಕೊಟ್ಟಿದೆ ಎಂದು ಅಡ್ವಾಣಿ ಹೇಳಿದ್ದಾರೆ.  ನನಗಾಗುತ್ತಿರುವ ಆನಂದವನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಹಲವು ದಿನಗಳಿಂದ ಸಾಕಷ್ಟು ಪ್ರಯಾಸ ಮತ್ತು ಕಠಿಣ ಶ್ರಮದಿಂದ ಇಂದು ವರ್ಷದ ಕೊನೆಯಲ್ಲಿ ಬಹುದೊಡ್ಡ ಟೋರ್ನಮೆಂಟ್‍ನಲ್ಲಿ ಪ್ರಶಸ್ತಿ ಗೆದ್ದಿರುವುದು ಹೇಗೆ ಹೇಳಬೇಕೆಂಬುದೇ ತೋಚುತ್ತಿಲ್ಲ ಎಂದು ಹೇಳುವ ಮೂಲಕ ಸಂಭ್ರಮಿಸಿದ್ದಾರೆ.