ಮೌಲಾನಾ ಅಬುಲ್ ಕಲಾಂ ಆಜಾದ್

(ನವೆಂಬರ್ ೧೧ , ೧೮೮೮ - ಫೆಬ್ರುವರಿ ೨೨,
೧೯೫೮ ) ಅಪ್ರತಿಮ ಸ್ವಾತಂತ್ರ್ಯ
ಹೋರಾಟಗಾರರಾಗಿ, ಭಾರತ ಸರ್ಕಾರದ
ಶಿಕ್ಷಣ ಮಂತ್ರಿಗಳಾಗಿ
ಪ್ರಸಿದ್ಧರೆನಿಸಿದ್ದಾರೆ. ಅವರ
ಜನ್ಮದಿನವಾದ ನವೆಂಬರ್ ೧೧
ದಿನಾಂಕವನ್ನು ಭಾರತದ ರಾಷ್ಟ್ರೀಯ
ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ.

*ಜೀವನ:

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ
ಮಹಾತ್ಮಗಾಂಧಿಯವರ ಜೊತೆಗಾರರಾಗಿದ್ದ
ಪ್ರಮುಖರಲ್ಲಿ ಮೌಲಾನಾ ಅಬುಲ್
ಕಲಾಂ ಒಬ್ಬರು.
ಅವರು ಜನಿಸಿದ್ದು ನವೆಂಬರ್ ೧೧,
೧೮೮೮ರಲ್ಲಿ.

*ಉರ್ದು ವಿದ್ವಾಂಸರು:

ಉರ್ದು ವಿದ್ವಾಂಸರಾಗಿದ್ದ ಅವರು ತಮ್ಮ
ಬರವಣಿಗೆಗಾಗಿ 'ಆಜಾದ್' ಎಂಬ
ನಾಮಾಂಕಿತವನ್ನು ಬಳಸುತ್ತಿದ್ದರು.
ಹೀಗಾಗಿ ಅವರು ಮೌಲಾನಾ ಆಜಾದ್
ಎಂದೇ ಪ್ರಸಿದ್ದರು.
ಸ್ವಾತಂತ್ರ್ಯ ಚಳುವಳಿಯಲ್ಲಿ
ಪತ್ರಕರ್ತರಾಗಿ ಬ್ರಿಟಿಷ್ ಆಡಳಿತ ವಿರುದ್ಧ
ಬರೆಯುತ್ತಿದ್ದ ಲೇಖನಗಳಿಂದ
ಮೌಲಾನಾ ಆಜಾದರು ಪ್ರಸಿದ್ಧಿ ಪಡೆದಿದ್ದರು.
ಖಿಲಾಫತ್ ಚಳುವಳಿಯ ನೇತೃತ್ವ ವಹಿಸಿದ್ದ
ಆಜಾದರು ಮಹಾತ್ಮ ಗಾಂಧೀಜಿಯವರ
ನಿಕಟವರ್ತಿಗಳಾದರು.
ಮಹಾತ್ಮರು ಆಯೋಜಿಸಿದ್ದ ಅಸಹಕಾರ
ಚಳುವಳಿಯಲ್ಲಿ ಅತ್ಯಂತ ಕ್ರಿಯಾಶೀಲ
ಯುವಕ ಎಂದು ಹೆಸರಾದರು.
ಗಾಂಧೀಜಿಯವರ 'ಸ್ವದೇಶಿ', 'ಸ್ವರಾಜ್'
ಚಿಂತನೆಗಳಿಗೆ ಮಾರು ಹೋಗಿ ಅವರ ಜೊತೆ
ನಿರಂತರವಾಗಿದ್ದ ಅಬ್ದುಲ್ ಕಲಾಂ ೧೯೨೩ರ
ವರ್ಷದಲ್ಲಿ ತಮ್ಮ
೩೫ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ
ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ
ಅತ್ಯಂತ ಕಿರು ವಯಸ್ಸಿನವರಾಗಿದ್ದರು.
೧೯೩೧ರ ವರ್ಷದಲ್ಲಿ 'ದರ್ಶನ
ಸತ್ಯಾಗ್ರಹ'ದ ಪ್ರಮುಖ
ಆಯೋಜಕರಾಗಿದ್ದ ಮೌಲಾನ
ಹಲವಾರು ಕಠಿಣ ಸೆರೆವಾಸಗಳನ್ನು ಕಂಡರು.
ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ
ಮೂರು ವರ್ಷಗಳ ಕಾಲ ಸತತವಾಗಿ
ಸೆರೆಯಲ್ಲಿಯೇ ಇದ್ದರು. ಸ್ವಾತಂತ್ರ್ಯದ
ಸಮಯದಲ್ಲಿ ದೇಶದ ವಿಭಜನೆಯ
ಕೂಗನ್ನು ಬೆಂಬಲಿಸದಿದ್ದ ಅವರು ಭಾರತದ
ಪರವಾಗಿಯೇ ಇದ್ದರು. ಸ್ವಾತಂತ್ರ್ಯಕ್ಕೆ
ಮುಂಚೆಯೇ, ಪಾಕಿಸ್ತಾನ ರಾಷ್ಟ್ರವಾದರೆ
ಅಲ್ಲಿ ಪ್ರಜಾಪ್ರಭುತ್ವ ನಿರ್ಮಾಣವಾಗದೆ
ಮಿಲಿಟರಿ ಆಡಳಿತವೇ ಗತಿಯಾಗುತ್ತದೆ ಎಂಬ
ಎಚ್ಚರಿಕೆ ಸಹಾ ನೀಡಿದ್ದರು.
ರಾಷ್ಟ್ರೀಯ ಶಿಕ್ಷಣ ದಿನ
ಸ್ವತಂತ್ರ ಭಾರತದಲ್ಲಿ ಶಿಕ್ಷಣ
ಸಚಿವರಾಗಿದ್ದ ಅಬ್ದುಲ್
ಕಲಾಂ ಅವರು ಹುಟ್ಟಿದ ಈ
ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನ
ಎಂದು ಆಚರಣೆಗೆ ತರಲಾಗಿದೆ.

*ವಿದಾಯ:

ಮೌಲಾನಾ ಅಬ್ದುಲ್ ಕಲಾಂ ಅವರು ಫೆಬ್ರವರಿ
೨೨, ೧೯೫೮ರ ವರ್ಷದಲ್ಲಿ ನಿಧನರಾದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023