KPSC Gazeted Probationary (KAS) =440 Posts(read vijayakarnataka 22/1/15) *Qualification: Any Degree *Online Aplication: 22-1-2015 to 20-2-2015 *Fees: 300Rs SC/ST/C1 =25Rs *Age Limit: GM=21-35yrs OBC=38yrs SC/ST/C1=40yrs *Degree Final year iddavru kuda Prlms exam Bareyalu Avakash.!! *Abhyartigalige 2 Hechhvari Chance & Age nalli 2varsha Sadilike Needide *Preliminary Exam: 19-4-2015 *Website: www.kpsc.kar.nic.in


440 ಗೆಜೆಟೆಡ್‌ ಹುದ್ದೆಗಳಿಗೆ ಕೆಪಿಎಸ್‌ಸಿ ಅಧಿಸೂಚನೆ





ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ‘ಎ’ ಮತ್ತು ‘ಬಿ’ ಶ್ರೇಣಿಯ 440 ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ­ಗಾಗಿ ಬುಧವಾರ ಅಧಿಸೂಚನೆ ಹೊರಡಿಸಿದೆ. ಏಪ್ರಿಲ್‌ 19ರಂದು ಪೂರ್ವಭಾವಿ ಪರೀಕ್ಷೆ ನಡೆಯ­ಲಿದೆ. ಆನ್‌ಲೈನ್‌ ಮೂಲಕ ಫೆಬ್ರುವರಿ 20ರ ರಾತ್ರಿ 11.45ರ ವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಮನೋಜ್‌ ಕುಮಾರ್‌ ಮೀನಾ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷಾ ಶುಲ್ಕ: ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ–1ರ  ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರಿಗೆ ₨ 25 ಹಾಗೂ ಇತರರಿಗೆ ₨ 300 ಪರೀಕ್ಷಾ ಶುಲ್ಕ ನಿಗದಿ ಪಡಿಸಲಾಗಿದೆ. ಶುಲ್ಕ ಪಾವತಿಗೆ ಫೆಬ್ರುವರಿ 21 ಕಡೇ ದಿನ. ಅಭ್ಯರ್ಥಿಗಳು ರಾಜ್ಯದಲ್ಲಿರುವ ಗಣಕೀಕೃತ ಅಂಚೆ ಕಚೇರಿಗಳಲ್ಲಿ ಮಾತ್ರ ಶುಲ್ಕ ಪಾವತಿಸಬಹುದು.

ವಯೋಮಿತಿ: ಸಾಮಾನ್ಯ ವರ್ಗಕ್ಕೆ ಸೇರಿದ ಕನಿಷ್ಠ 21ರಿಂದ ಗರಿಷ್ಠ 35 ವರ್ಷ ವಯಸ್ಸಿನ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅರ್ಹರು. 2ಎ/2ಬಿ/3ಎ/3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38 ವರ್ಷ. ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ–1ಕ್ಕೆ ಸೇರಿದ ಗರಿಷ್ಠ 40 ವರ್ಷ ವಯಸ್ಸಿನ ಅಭ್ಯರ್ಥಿಗಳು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಮಾಜಿ ಸೈನಿಕರಿಗೆ ನಿಯಮಾನುಸಾರ ವಯೋ­ಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. ಅಂಗ­ವಿ­ಕಲರು ಮತ್ತು ವಿಧವೆಯರಿಗೆ 10 ವರ್ಷಗಳ ಸಡಿಲಿಕೆ ಇದೆ. ಕಳೆದ ಡಿಸೆಂಬರ್‌ 5ರಂದು ಸರ್ಕಾರ ಹೊರಡಿ­ಸಿರುವ ಆದೇಶದ ಅನ್ವಯ, ನಿಯಮಗಳ ಅನುಸಾರ ಅರ್ಹತೆ ಹೊಂದಿರುವ ಎಲ್ಲ ಅಭ್ಯರ್ಥಿಗಳಿಗೆ 2 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ ಎಂದು ಮೀನಾ ತಿಳಿಸಿದ್ದಾರೆ. ವಿವರಗಳಿಗೆ ಆಯೋಗದ ವೆಬ್‌ಸೈಟ್‌ಗೆ (http://kpsc.kar.nic.in/) ಭೇಟಿ ನೀಡಬಹುದು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023