Drop


Thursday, March 5, 2015

20 ವರ್ಷಗಳ ನಂತರ 1 ರೂ. ನೋಟುಗಳ ಪುನರ್ ಮುದ್ರಣ

ಮುಂಬೈ, ಮಾ.5- ಸುಮಾರು 20 ವರ್ಷಗಳಿಗೂ ಹೆಚ್ಚು ಸುದೀರ್ಘ ಕಾಲದ ನಂತರ ಸರ್ಕಾರ, ಪುನಃ ಒಂದು ರೂಪಾಯಿ ನೋಟುಗಳ ಪುನರ್ ಮುದ್ರಣಕ್ಕೆ ಮುಂದಾಗಿದ್ದು, ಸದ್ಯದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಚಲಾವಣೆಗೆ ಬಿಡಲಿದೆ. ನೋಟುಗಳ ಮುದ್ರಣ ಕಾರ್ಯದ ಪ್ರಕ್ರಿಯೆಗಳು ಆರಂಭವಾಗಿದ್ದು, ಶೀಘ್ರದಲ್ಲಿಯೇ ಒಂದು ರೂಪಾಯಿ ನೋಟುಗಳು ಸಾರ್ವಜನಿಕರ ಬಳಕೆಗಾಗಿ ಚಲಾವಣೆಗೆ ಬರಲಿವೆ ಎಂದು ಆರ್‌ಬಿಐ ತಿಳಿಸಿದೆ. 2011ರ ಕಾಯ್ದೆ ಪ್ರಕಾರ, ಕಾನೂನುಬದ್ಧವಾಗಿ ಒಂದು ರೂ. ನೋಟುಗಳನ್ನು ಚಲಾವಣೆಗೆ ಬಿಡುತ್ತಿದ್ದು, ಈ ಹಿಂದೆ ಚಲಾವಣೆಯಲ್ಲಿದ್ದ ನೋಟುಗಳನ್ನೂ ಉಪಯೋಗಿಸಬಹುದು.
ಒಂದು ರೂ. ಸರಣಿಯ ನೋಟುಗಳು 9.76.3 ಸೆಂಟಿ ಮೀಟರ್ ಅಳತೆಯಲ್ಲಿದ್ದು, ಸಂಪೂರ್ಣವಾಗಿ ಹತ್ತಿಯಿಂದ ತಯಾರಾದ ಪೇಪರ್‌ನಲ್ಲೇ ಮುದ್ರಣಗೊಳ್ಳಲಿವೆ.

'ಸತ್ಯಮೇವ ಜಯತೇ' ಶಬ್ದದ ಬದಲಿಗೆ ಅಶೋಕ ಸ್ತಂಭದ ಚಿಹ್ನೆ ಹೊಂಇದ್ದು, ಮಧ್ಯದಲ್ಲಿ ಗೋಚರಿಸದಂತೆ ಸಂಖ್ಯೆಗಳಿರುತ್ತವೆ. ಹಾಗೆಯೇ ಭಾರತ್ ಎಂಬ ಶಬ್ದವೂ ಕಾಣದಂತೆ ಅಚ್ಚಾಗಿರುತ್ತದೆ. ನೋಟು 'ಪಿಂಕ್‌ಗ್ರೀನ್' ವರ್ಣದಲ್ಲಿರುತ್ತದೆ. ಜತೆಗೆ ಇತರ ವರ್ಣಗಳೂ ಮಿಳಿತಗೊಂಡಿರುತ್ತವೆ. ಹಣಕಾಸು ಖಾತೆ ಕಾರ್ಯದರ್ಶಿ ರಾಜೀವ್ ಮಹರ್ಷಿ ಅವರ ರುಜು ಇರುತ್ತದೆ. ಎರಡು ಭಾಷೆಗಳಲ್ಲಿ ಭಾರತ್ ಸರ್ಕಾರ್ ಹಾಗೂ ಗವರ್ನಮೆಂಟ್ ಆಫ್ ಇಂಡಿಯಾ ಎಂಬ ಬರಹವಿದ್ದು, ಕ್ಯಾಪಿಟಲ್ ಲೆಟರ್‌ಗಳಲ್ಲಿ 'ಸತ್ಯಮೇವ ಜಯತೇ' ಎಂದು ಮುದ್ರಿಸಲಾಗುತ್ತದೆ ಎಂದು ಆರ್‌ಬಿಐ ಹೇಳಿದೆ.