Drop


Wednesday, March 25, 2015

ಮಾಜಿ ಪ್ರಧಾನಿ ಅಟಲ್‌ಗೆ ಮಾ.27ರಂದು 'ಭಾರತ ರತ್ನ' ಪ್ರದಾನ


Published: 25 Mar 2015 06:50 PM IST

ಅಟಲ್ ಬಿಹಾರಿ ವಾಜಪೇಯಿ

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಮಾರ್ಚ್ 27ರಂದು ಪ್ರದಾನ ಮಾಡಲಾಗುತ್ತಿದೆ.

27ರಂದು ಸ್ವತಃ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಅಟಲ್ ನಿವಾಸಕ್ಕೆ ತೆರಳಿ, ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಡಿ. 25 ವಾಜಪೇಯಿ ಅವರ ಜನ್ಮದಿನ. ಜನ್ಮದಿನದ ಮುನ್ನಾದಿನವೇ ಕೇಂದ್ರ ಸರ್ಕಾರ ವಾಜಪೇಯಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ದಿ. ಪಂಡಿತ್ ಮದನ್ ಮೋಹನ್ ಮಾಳವೀಯಾ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿತ್ತು.