Drop


Tuesday, March 31, 2015

9 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಪ್ರಜಾವಾಣಿ ವಾರ್ತ


Tue, 03/31/2015 - 01:00
ಬೆಂಗಳೂರು: ರಾಜ್ಯದ ಪ್ರಾಥಮಿಕ ಶಾಲೆಗಳಿಗೆ 9 ಸಾವಿರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಮಾರ್ಚ್‌ 26ರ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

ಇದಕ್ಕೆ ಅನುಗುಣವಾಗಿ ಒಂದು ವಾರದ ಒಳಗಾಗಿ ಅಧಿಕೃತವಾಗಿ ಅರ್ಜಿ ಆಹ್ವಾನಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್‌ ಮೊಹ್ಸೀನ್‌ 'ಪ್ರಜಾವಾಣಿ'ಗೆ  ತಿಳಿಸಿದ್ದಾರೆ.

ಅರ್ಜಿ ಶುಲ್ಕ
* ಪ.ಜಾತಿ, ವರ್ಗದ ಅಭ್ಯರ್ಥಿ ಗಳು ಎರಡೂ ಹುದ್ದೆ ಗಳಿಗೆ  ಅರ್ಜಿ ಶುಲ್ಕ ₨400
*ಇತರ ಎಲ್ಲ ಅಭ್ಯರ್ಥಿಗಳಿಗೆ  ಒಂದು ಪರೀಕ್ಷೆಗೆ  ₨500
*ಎರಡೂ ಪರೀಕ್ಷೆಗೆ ₨800
ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಇಲಾಖೆಯು ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಿದೆ.

ಪರೀಕ್ಷೆ: ಮೇ 23ರಂದು ಬೆಳಿಗ್ಗೆ  1ರಿಂದ 5ನೇ ತರಗತಿ ವರೆಗಿನ ಶಿಕ್ಷಕರ ಹುದ್ದೆಗಳಿಗೆ ಪರೀಕ್ಷೆ  ನಡೆಯಲಿದೆ. ಅದೇ ದಿನ ಮಧ್ಯಾಹ್ನ 'ಪೇಪರ್‌–1' (6ರಿಂದ 8ನೇ ತರಗತಿವರೆಗೆ ಶಿಕ್ಷಕರಾಗುವ ಅಭ್ಯರ್ಥಿಗಳಿಗೆ) ಪರೀಕ್ಷೆ ನಡೆಯಲಿದೆ.

ಮೇ 24ರಂದು ಬೆಳಿಗ್ಗೆ ಸಾಮಾನ್ಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ 6 ರಿಂದ 8ನೇ ತರಗತಿವರೆಗಿನ ಬೋಧಕ  ಅಭ್ಯರ್ಥಿಗಳಿಗಾಗಿ 'ಪೇಪರ್‌–2'  ಮತ್ತು ಅದೇ ದಿನ ಮಧ್ಯಾಹ್ನ, ಇಂಗ್ಲಿಷ್‌  ಮಾಧ್ಯಮ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ  6 ರಿಂದ 8ನೇ ತರಗತಿಯ ಶಿಕ್ಷಕರ ಅಭ್ಯರ್ಥಿಗಳಿಗಾಗಿ 'ಪೇಪರ್‌–2' ಪರೀಕ್ಷೆ ನಡೆಯಲಿದೆ. ಪ್ರತಿ ಪರೀಕ್ಷೆ 150 ಅಂಕಗಳಿಗೆ ನಡೆಯಲಿವೆ.

6ರಿಂದ 8ನೇ ತರಗತಿಗೆ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವವರು 'ಪೇಪರ್‌–1' ಮತ್ತು 'ಪೇಪರ್‌–2' ಪರೀಕ್ಷೆಗಳನ್ನೂ ಬರೆಯುವುದು ಕಡ್ಡಾಯ.

ವಿವರ: ಸಂವಿಧಾನದ ಕಲಂ 371 (ಜೆ) ಅಡಿಯಲ್ಲಿ ಹೈದರಾಬಾದ್‌ ಕರ್ನಾಟಕದ ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಿರಿಸಿದ (ಶೇ 80ರಷ್ಟು) ಹುದ್ದೆಗಳನ್ನು ಹಂಚಿಕೆ ಮಾಡಿರುವ   ವಿವರಗಳನ್ನೂ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಕೊನೆ ಎಂದು: ಏಪ್ರಿಲ್‌ 27,  ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ. ಮೇ 23, 24 ಸ್ಪರ್ಧಾತ್ಮಕ ಪರೀಕ್ಷೆ