Bank of Baroda announces the recruitment of 1200 Probationary Officer Vacancies


Posted by: Mahesh
Updated: Wednesday, March 11, 2015, 14:50 [IST]
FacebookTwitterGoogle+CommentsMailWhatsApp
ಬೆಂಗಳೂರು, ಮಾ.11: ಬ್ಯಾಂಕ್ ಆಫ್ ಬರೋಡಾದಲ್ಲಿ 1200 ಪ್ರೊಬೆಷನರಿ ಅಧಿಕಾರಿಗಳ ಹುದ್ದೆಗಳು ನೇಮಕಾತಿ ನಡೆಯುತ್ತಿದೆ. ಜ್ಯೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಹುದ್ದೆಗಳು ಖಾಲಿ ಇವೆ. ಅರ್ಹ ಅಭ್ಯರ್ಥಿಗಳಿಗೆ ಬ್ಯಾಂಕ್ ಪರೀಕ್ಷೆ ನಡೆಸಿ ಆಯ್ಕೆ ಮಾಡಲಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನ ಮಣಿಪಾಲ್ ಸ್ಕೂಲ್ ಆಫ್ ಬ್ಯಾಂಕಿಂಗ್ ಅಥವಾ ಇತರೆ ಸಂಸ್ಥೆಗಳಲ್ಲಿ 1 ವರ್ಷದ ಬ್ಯಾಂಕಿಂಗ್ ಹಾಗೂ ಫೈನಾನ್ಸ್ ನಲ್ಲಿ ಪಿಜಿ ಡಿಪ್ಲೋಮಾಗೆ ಸೇರಿಸಲಾಗುವುದು. ಮಾ.3ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಮಾ.17, 2015ರಂದು ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ.
ಹುದ್ದೆ ಹಂಚಿಕೆ:
* ಒಟ್ಟಾರೆ ಹುದ್ದೆಗಳು: 1200
* ಸಾಮಾನ್ಯ ವರ್ಗ: 606
* ಹಿಂದುಳಿದ ವರ್ಗ: 324
* ಪರಿಶಿಷ್ಟ ಜಾತಿ : 180
* ಪರಿಶಿಷ್ಟ ವರ್ಗ: 90

ಅರ್ಹತೆ:
* ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಸಾಮಾನ್ಯ ವರ್ಗಕ್ಕೆ 60% (SC/ST ವರ್ಗಕ್ಕೆ 55%)
* ವಯೋಮಿತಿ 20-28 ವರ್ಷವಾಗಿರಬೇಕು 18/3/1987 ರಿಂದ 17/3/1995.
ಅರ್ಜಿ ಶುಲ್ಕ:
* ಎಸ್ ಟಿ/ಎಸ್ ಸಿ- 100 ರು.
* ಸಾಮಾನ್ಯ ವರ್ಗ/ಹಿಂದುಳಿದ ವರ್ಗ- 600 ರು.
ಆಯ್ಕೆ ಪ್ರಕ್ರಿಯೆ:
* ಆನ್ ಲೈನ್ ಪರೀಕ್ಷೆ
* ಸಮೂಹ ಸಂವಹನ ಚರ್ಚೆ
* ಸಂದರ್ಶನ
* ಆಸಕ್ತ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ಕಿಸಿ
* ಬ್ಯಾಂಕ್ ಆಫ್ ಬರೋಡಾ ಅರ್ಜಿ ಜಾಹೀರಾತು ನೋಡಲು ಈ ಲಿಂಕ್ ಕ್ಲಿಕ್ಕಿಸಿ

ಪ್ರಮುಖ ದಿನಗಳು:

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 17ನೇ ಮಾರ್ಚ್.

ಅರ್ಜಿ ಶುಲ್ಕ ಸಲ್ಲಿಸಲು ಕೊನೆ ದಿನಾಂಕ : 17ನೇ ಮಾರ್ಚ್.

ಕಾಲ್ ಲೆಟರ್ ಡೌನ್ ಲೋಡ್ ಆರಂಭ: 7ನೇ ಏಪ್ರಿಲ್

ಪರೀಕ್ಷಾ ದಿನಾಂಕ: 18ನೇ ಏಪ್ರಿಲ್

ಒನ್ ಇಂಡಿಯಾ ಸುದ್ದಿ
  Read in English: 1200 posts vacant in Bank of Baroda
Story first published: Wednesday, March 11, 2015, 13:28 [IST]
English Summary
Bank of Baroda announces the recruitment of 1200 Probationary Officer Vacancies. The vacancies lies in Junior Management Grade/ Scale-I. To fill in the vacancy the bank will conduct an examination to hire the most eligible candidates for their banks

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023