Drop


Wednesday, March 11, 2015

ಭೈರಪ್ಪಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋ ಗೌರವ


ಉದಯವಾಣಿ, Mar 11, 2015, 3:40 AM IST

ನವದೆಹಲಿ: ಕನ್ನಡದ ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ, ತೆಲುಗಿನ ಖ್ಯಾತ ಕವಿ ಸಿ.ನಾರಾಯಣ ರೆಡ್ಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋ ಗೌರವ ನೀಡಿದೆ. ಇದು ಸಾಹಿತ್ಯ ಅಕಾಡೆಮಿ ಸಾಹಿತಿಗಳಿಗೆ ನೀಡುವ ಅತ್ಯುನ್ನತ ಗೌರವ. ಒಮ್ಮೆಗೆ 21 ಜನ ಮಾತ್ರ ಈ ಗೌರವಕ್ಕೆ ಪಾತ್ರರಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. ಹಿಂದೆ ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಕಾರಂತ, ಪುತಿನ, ಅನಂತಮೂರ್ತಿ ಈ ಗೌರವಕ್ಕೆ ಪಾತ್ರರಾಗಿದ್ದರು.