ಭಾರತೀಯನಿಗೆ 'ಜಲ ನೊಬೆಲ್' ಪ್ರಶಸ್ತಿ:


ಸ್ಟಾಕ್‌ಹೋಂ, ಸೋಮವಾರ, 23 ಮಾರ್ಚ್ 2015 (09:27 IST)

ಪ್ರಖ್ಯಾತ ಪರಿಸರವಾದಿ ಮತ್ತು ಜಲಸಂರಕ್ಷಣಾ ಹೋರಾಟಗಾರ ರಾಜೇಂದ್ರಸಿಂಗ್ ಪ್ರತಿಷ್ಠಿತ ಸ್ಟಾಕ್‌ಹೋಂ ಜಲಪ್ರಶಸ್ತಿ  ಗೌರವ ಲಭಿಸಿದೆ. ರಾಜಸ್ಥಾನದವರಾದ ಸಿಂಗ್ ಮರುಭೂಮಿ ಪ್ರದೇಶದಲ್ಲಿ ಜಲಸಂರಕ್ಷಣೆಗೆ ಶ್ರಮಿಸಿದ್ದಾರೆ. ಈ ಮೊದಲು ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ದೊರಕಿತ್ತು. 

ಈ  ಪ್ರಶಸ್ತಿಯನ್ನು 'ಜಲ ನೊಬೆಲ್' ಎಂದೇ ಕರೆಯಲಾಗುತ್ತಿದ್ದು, ನೀರಿನ ರಕ್ಷಣೆ ಕುರಿತು ವಿವಿಧ ವಿಧಾನಗಳನ್ನು ಪರಿಚಯಿಸುವುದರ ಮೂಲಕ ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೆ ವಿಶಿಷ್ಠ ಕೊಡುಗೆಗಳನ್ನು ನೀಡಿರುವ ರಾಜೇಂದ್ರರವರ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಪ್ರಶಸ್ತಿ ಸಮಿತಿ ತಿಳಿಸಿದೆ. 

 

ತಮ್ಮ ಪ್ರಶಸ್ತಿಯನ್ನು ಭಾರತದ ಸಾಂಪ್ರದಾಯಿಕ ಜಲಸಂರಕ್ಷಣಾ ತಂತ್ರಗಳಿಗೆ ಅರ್ಪಿಸಿರುವ ಸಿಂಗ್, ಪ್ರಶಸ್ತಿಯಿಂದ ತಮ್ಮ ಉತ್ಸಾಹ, ಮನೋಬಲ ಇಮ್ಮಡಿಸಿದೆ ಎಂದಿದ್ದಾರೆ.  

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023