Drop


Sunday, March 29, 2015

ಇಸ್ರೋಗೆ ಗಾಂಧಿ ಶಾಂತಿ ಪ್ರಶಸ್ತಿ-೨೦೧೪ ಗೌರವ

ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ), ಪ್ರತಿಷ್ಟಿತ ಗಾಂಧಿ ಶಾಂತಿ ಪ್ರಶಸ್ತಿ-೨೦೧೪ ಅನ್ನು ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ, ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಎಚ್ ಎಲ್ ದತ್ತು, ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಸದಸ್ಯ ಎಲ್ ಕೆ ಅಡ್ವಾಣಿ ಮತ್ತು ಗೋಪಾಲ ಕೃಷ್ಣ ಗಾಂಧಿ ಇವರುಗಳನ್ನು ಒಳಗೊಂಡ ತೀರ್ಪುಗಾರರ ಸಂಘ ಈ ಪ್ರಶಸ್ತಿ ಘೋಷಿಸಿದೆ.

"ಬಾಹ್ಯಾಕಾಶವನ್ನು ದೇಶದ ಮತ್ತು ಸಾಮಾನ್ಯ ಪ್ರಜೆಯ ಸೇವೆಗಾಗಿ ಬಳಸಿದ ಇಸ್ರೋ ಸೇವೆಯನ್ನು ಅಭಿನಂದಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಇಸ್ರೋ ವಿಶ್ವದ ಆರು ಅತಿ ದೊಡ್ಡ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದಾಗಿದೆ" ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಇಸ್ರೋ ಸಂಸ್ಥೆ ಇತ್ತೀಚೆಗೆ ಮಾರ್ಸ್ ಮೇಲೆ ಬಾಹ್ಯಾಕಾಶ ಯಾನವನ್ನು ಕಳುಹಿಸಿ, ಭಾರತವನ್ನು ಈ ಸಾಧನೆಗೈದ ನಾಲ್ಕನೇ ದೇಶವನ್ನಾಗಿಸಿತು.

Posted by: Guruprasad Narayana | Source: TNIE