Drop


Tuesday, March 3, 2015

ಕೊಹ್ಲಿ ದಾಖಲೆ ಮುರಿದ ಹಶೀಂ ಆಮ್ಲಾ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದ.ಆಫ್ರಿಕಾ ಆಟಗಾರನ ದಾಖಲ

ಕ್ಯಾನ್‌ಬೆರಾ: ದಕ್ಷಿಣ ಆಫ್ರಿಕಾದ ಆಟಗಾರ ಹಶೀಂ ಆಮ್ಲಾ ಭಾರತದ ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಇಂದು ಐರ್ಲೆಂಡ್ ತಂಡದೊಂದಿಗೆ ಸೆಣಸುತ್ತಿರುವ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಹಶೀಂ ಆಮ್ಲಾ ಬರೋಬ್ಬರಿ 159 ರನ್ ಸಿಡಿಸಿದರು. ಇದು ಆಮ್ಲಾ ಅವರ 20 ನೇ ಏಕದಿನ ಶತಕವಾಗಿದ್ದು, ಕೇವಲ 108 ಇನ್ನಿಂಗ್ಸ್‌ಗಳಲ್ಲಿ ಆಮ್ಲಾ 20 ಶತಕ ಸಿಡಿಸಿದ್ದಾರೆ. ಇದೇ 20 ಶತಕ ಸಿಡಿಸಲು ಭಾರತದ ವಿರಾಟ್ ಕೊಹ್ಲಿ ಅವರು 133 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಇದೀಗ ಆಮ್ಲಾ ಈ ದಾಖಲೆಯನ್ನು ಮೆಟ್ಟಿನಿಂತಿದ್ದಾರೆ.
ಇನ್ನು ಈ ಹಿಂದೆ 2014ರಲ್ಲಿ ಇದೇ ಆಮ್ಲಾ ಅವರು 17ನೇ ಶತಕ ಸಿಡಿಸಿದಾಗಲೂ ವಿರಾಟ್ ಕೊಹ್ಲಿ ಅವರ ಶತಕ ದಾಖಲೆಯನ್ನು ಹಿಂದಿಕ್ಕಿದ್ದರು. ತ್ವರಿತವಾಗಿ 5000 ರನ್ ಗಳಿಸಿದ ದಾಖಲೆಯಲ್ಲಿಯೂ ಆಮ್ಲಾ ಕೊಹ್ಲಿ ಅವರನ್ನು ಈ ಹಿಂದೆ ಹಿಂದಿಕ್ಕಿದ್ದರು. 5000 ರನ್ ಗಳಿಸಿಲು ಕೊಹ್ಲಿ 114 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಅವರು ಕೂಡ 5 ಸಾವಿರ ರನ್ ಗಳಿಕೆಗಾಗಿ 114 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.
ಅತಿವೇಗದ 20 ಶತಕಗಳನ್ನು ಸಿಡಿಸಿದ ಖ್ಯಾತಿಗೆ ಪಾತ್ರರಾದ ಆಟಗಾರರು ಶತಕ ಸಾಧನೆಗೆ ತೆಗೆದುಕೊಂಡ ಇನ್ನಿಂಗ್ಸ್ ಗಳು
* ಹಶೀಂ ಆಮ್ಲಾ -108
* ವಿರಾಟ್ ಕೊಹ್ಲಿ- 133
* ಎಬಿ ಡಿ ವಿಲೆಯರ್ಸ್-175
* ಸಚಿನ್ ತೆಂಡೂಲ್ಕರ್-197
* ಸೌರವ್ ಗಂಗೂಲಿ-214