ವಿಶ್ವ ವಿಜೇತ ಆಸ್ಟ್ರೇಲಿಯಾ

ವಿಶ್ವ ವಿಜೇತ ಆಸ್ಟ್ರೇಲಿಯಾ

Posted PSGadyal

- ಕಿವೀಸ್ ಕಿವಿ ಹಿಂಡಿದ ಆಸೀಸ್ ಬೌಲರ್‍ಗಳು
- ಏಕದಿನ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ ಮೈಕಲ್ ಕ್ಲಾರ್ಕ್
- ತವರಿನ ಹುಲಿಗಳಿಗೆ ವಿಶ್ವಕಪ್

VISHWA CHAMPION

ಮೆಲ್ಬರ್ನ್: ತವರಿನಲ್ಲಿ ವಿಶ್ವಕಪ್ ಗೆಲ್ಲುವ ಆಸ್ಟ್ರೇಲಿಯಾದ ಕನಸು ನನಸಾಗಿದೆ. ಅಜೇಯ ನ್ಯೂಜಿಲ್ಯಾಂಡ್‍ನ್ನು ಫೈನಲ್‍ನಲ್ಲಿ  7ವಿಕೆಟ್‍ಗಳಿಂದ ಬಗ್ಗು ಬಡಿಯುವ ಮೂಲಕ 5ನೇ ಬಾರಿ ವಿಶ್ವಕಪ್‍ನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ.  ಗೆಲ್ಲಲು 184 ರನ್ ಸುಲಭದ ಸವಾಲನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 33.1 ಓವರ್‍ಗಳಲ್ಲಿ  186 ರನ್‍ಗಳಸಿವ ಮೂಲಕ ಗುರಿ ಮುಟ್ಟಿತು.
ಆರಂಭದಲ್ಲೇ ಆರೋನ್ ಫಿಂಚ್ ಬೌಲ್ಟ್ ಎಸೆದಲ್ಲಿ ಅವರಿಗೆ ಕ್ಯಾಚ್ ನೀಡಿ ಔಟಾದಾಗ ನ್ಯೂಜಿಲ್ಯಾಂಡ್ ಪೈಪೋಟಿ ನೀಡುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ನಂತರ ಎರಡನೇ ವಿಕೆಟ್ ವಾರ್ನರ್ ಮತ್ತು ಸ್ವೀವನ್ ಸ್ಮಿತ್ 61 ರನ್ ಕಲೆ ಹಾಕುವ ಮೂಲಕ ಆಸ್ಟ್ರೇಲಿಯಾದ ಚೇತರಿಕೆಗೆ ಕಾರಣರಾದರು.
ವಾರ್ನರ್ 45ರನ್(46 ಎಸೆತ, 7 ಬೌಂಡರಿ)ಗಳಿಸಿ ಹೆನ್ರಿಗೆ ವಿಕೆಟ್ ಒಪ್ಪಿಸಿದಾಗ ಆಸ್ಟ್ರೇಲಿಯಾ ತಂಡದ ಸ್ಕೋರ್ 63 ಆಗಿತ್ತು. ನಂತರ ಸ್ಮಿತ್ ಮತ್ತು ಮೈಕಲ್ ಕ್ಲಾರ್ಕ್  ಮೂರನೇ ವಿಕೆಟ್‍ಗೆ 18.5 ಓವರ್‍ಗಳಲ್ಲಿ 118 ರನ್ ಜೊತೆಯಾಟ ಆಡಿ ಆಸ್ಟ್ರೇಲಿಯಾಗೆ ಗೆಲುವು ತಂದುಕೊಟ್ಟರು. ನ್ಯೂಜಿಲ್ಯಾಂಡ್ ಪರವಾಗಿ ಬೌಲ್ಟ್ 1 ವಿಕೆಟ್ ಪಡೆದರೆ, ಹೆನ್ರಿ 2 ವಿಕೆಟ್ ಪಡೆದರು.

ಅಬ್ಬರಿಸಲಿಲ್ಲ ಮೆಕ್ಕಲಂ: ಆರಂಭದಿದಂಲೇ ನ್ಯೂಜಿಲ್ಯಾಂಡ್ ಕುಸಿತ ಕಂಡಿತ್ತು. 39 ರನ್ ಗಳಿಸುವಷ್ಟರಲ್ಲೇ  3 ಜನ ಅಗ್ರ ಬ್ಯಾಟ್ಸ್‍ಮ್ಯಾನ್‍ಗಳು ಪೆವಿಲಿಯನ್ ಸೇರಿದ್ದರು. ನಾಯಕ ಬ್ರೆಂಡನ್ ಮೆಕ್ಕಲಂ ಮೊದಲ ಓವರ್‍ನ ಐದನೇ ಎಸೆತದಲ್ಲಿ ಶೂನ್ಯಕ್ಕೆ ಸ್ಟ್ರಾಕ್ ಬೌಲಿಂಗ್‍ಗೆ ಬೌಲ್ಡ್ ಆದರೆ, 15 ರನ್‍ಗಳಿಸಿದ್ದ ಗುಪ್ಟಿಲ್‍ರನ್ನು ಮ್ಯಾಕ್ಸ್‍ವೆಲ್ ಬೌಲ್ಡ್ ಮಾಡಿದರು.
ಕೇನೆ ವಿಲಿಯಮ್ಸ್ 12 ರನ್‍ಗಳಿಸಿ ಮಿಕೆಲ್ ಜಾನ್ಸನ್ ಬೌಲಿಂಗ್‍ನಲ್ಲೇ ಅವರಿಗೆ ಕ್ಯಾಚ್ ನೀಡಿ ಹೊರನಡೆದಾಗ ನ್ಯೂಜಿಲ್ಯಾಂಡ್ ಪತನ ಆರಂಭವಾಯಿತು ಎಂದೇ ನಿರೀಕ್ಷಸಲಾಗಿತ್ತು. ಆದರೆ 4 ನೆ ವಿಕೆಟ್‍ಗೆ ರೋಸ್ ಟೈಯ್ಲರ್ ಮತ್ತು ಗ್ರ್ಯಾಂಟ್ ಇಲಿಯಟ್ 137 ಎಸೆತಗಳಲ್ಲಿ 111 ರನ್ ಕಲೆ ಹಾಕುವ ಮೂಲಕ ಚೇತರಿಕೆ ನೀಡಿದರು.
ಯಾವಾಗ ರೋಸ್ ಟೈಯ್ಲರ್ 40 ರನ್(72 ಎಸೆತ, 2 ಬೌಂಡರಿ,)ïಗಳಿಸಿದ್ದಾಗ ಔಟಾದರೋ ಅಲ್ಲಿಂದ ಮತ್ತೆ ನ್ಯೂಜಿಲ್ಯಾಂಡ್ ಕುಸಿತ ಆರಂಭವಾಯಿತು. ಗ್ರ್ಯಾಂಟ್ ಇಲಿಯಟ್ 83 ರನ್(82 ಎಸೆತ, 7 ಬೌಂಡರಿ,1 ಸಿಕ್ಸರ್) ಬಾರಿಸಿ ಫಾಲ್ಕೂನರ್ ಎಸೆತದಲ್ಲಿ ಹ್ಯಾಡಿನ್‍ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.ಕೊನೆ ಕ್ರಮಾಂಕದಲ್ಲಿ ಯಾರು ಚೆನ್ನಾಗಿ ಆಡದ ಕಾರಣ ನ್ಯೂಜಿಲ್ಯಾಂಡ್ 45 ಓವರ್‍ಗಳಲ್ಲಿ 183 ರನ್‍ಗಳಿಗೆ ಅಲೌಟ್ ಆಯಿತು.

ಶೂನ್ಯ ಸಾಧಕರು: ನ್ಯೂಜಿಲ್ಯಾಂಡ್ ಪರವಾಗಿ 5 ಜನ ಬ್ಯಾಟ್ಸ್‍ಮ್ಯಾನ್‍ಗಳು ಶೂನ್ಯಕ್ಕೆ ಔಟಾಗಿದ್ದಾರೆ. ಆರಂಭದಲ್ಲಿ ನಾಯಕ ಬ್ರೆಂಡನ್ ಮೆಕ್ಕಲಂ, ಕೋರೆ ಆಂಡರ್‍ಸನ್, ಲ್ಯೂಕ್ ರಾಂಚಿ, ಬೌಲರ್‍ಗಳಾದ ಹೆನ್ರಿ ಮತ್ತು ಟೀಂ ಬೌಲ್ಟ್  0 ರನ್‍ಗಳಿಸಿ ಔಟಾಗಿದ್ದಾರೆ.

ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ಸಾಧನೆ
1975 – ಫೈನಲ್
1979 – ಲೀಗ್
1983 – ಲೀಗ್
1987 – ಚಾಂಪಿಯನ್ಸ್
1992 – ಲೀಗ್
1996 – ಫೈನಲ್
1999 – ಚಾಂಪಿಯನ್ಸ್
2003 – ಚಾಂಪಿಯನ್ಸ್
2007 – ಚಾಂಪಿಯನ್ಸ್
2011 – ಕ್ವಾರ್ಟರ್ ಫೈನಲರ್
2015 – ಚಾಂಪಿಯನ್ಸ್

ವಿಶ್ವಕಪ್ ಗೆದ್ದು ಕೊಟ್ಟ ನಾಯಕರು 
 
ವಿಶ್ವಕಪ್ 1987- ಅಲನ್ ಬಾರ್ಡರ್
ವಿಶ್ವಕಪ್ 1999- ಸ್ಟೀವ್ ವ್ಹಾ
ವಿಶ್ವಕಪ್ 2003, 2007- ರಿಕಿ ಪಾಂಟಿಂಗ್
ವಿಶ್ವಕಪ್ 2015- ಮೈಕೆಲ್ ಕ್ಲಾರ್ಕ್

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023