Drop


Monday, March 9, 2015

ಯೋಜನೆ ಆಯೋಗ ರದ್ದು – ನೀತಿ ಆಯೋಗ ರಚನೆ: -ಡಾ|| ಫಕೀರಪ್ಪ ಕಾಗಿನೆಲಿ

ಯೋಜನೆ ಆಯೋಗ ರದ್ದು – ನೀತಿ ಆಯೋಗ ರಚನೆ: ಆರೂವರೆ ದಶಕಗಳ ಹಿಂದೆ ಅಂದರೆ 15 ಮಾರ್ಚ್ 1950ರಂದು ದೇಶದ ಪ್ರಥಮ ಪ್ರಾಧಾನಿ ಜವಾಹರ್‌ಲಾಲ್ ನೆಹರು ಅವರ ಕಾಲದಲ್ಲಿ ರಚಿಸಲಾಗಿದ್ದ ಯೋಜನಾ ಆಯೋಗ (planning commission) ವನ್ನು ರದ್ದು ಪಡಿಸಿ ಅದರ ಬದಲಾಗಿ ನೀತಿ ಆಯೋಗವನ್ನು ಆಸ್ತಿತ್ವಕ್ಕೆ ತಂದಿದೆ. 11.2.2015 ರಂದು  ಭಾರತ ಪರಿವರ್ತನಾ ರಾಷ್ಟ್ರೀಯ ಸಂಸ್ಥೆ ( ನ್ಯಾಷನಲ್ ಇನ್‌ಸ್ಟಿಟ್ಯೂಷನ್‌ ಫಾರ್‌ ಟ್ರಾನ್ಸ್‌ರ್ಫಾರ್ಮಿಂಗ್ ಇಂಡಿಯಾ– NITI (Aayog) ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರಾತಿನಿಧಿಕ ನೀತಿ ನಿರೂಪಣಾ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು.

ಮೋದಿ ಅವರು ಆಡಳಿತದ ಚುಕ್ಕಾಣಿ ಹಿಡಿದ ಮೂರೇ ದಿನದಲ್ಲಿ ಅಜಯ್‌ ಚಿಬ್ಬರ್ ಎಂಬ ತಜ್ಞ  ಸಲ್ಲಿಸಿದ ವರದಿ ಆಧಾರದ ಮೇಲೆ ಯೋಜನಾ ಆಯೋಗವನ್ನು ರದ್ದುಗೊಳಿಸಿತು. ನೀತಿ ಆಯೋಗದಲ್ಲಿ ಪ್ರಧಾನಿ ಅಧ್ಯಕ್ಷರಾಗಿರುತ್ತಾರೆ. ಉಳಿದ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗೌರ್ನರ್‌, ಕೇಂದ್ರ ಸಂಪುಟ ದರ್ಜೆಯ ನಾಲ್ವರು ಸಚಿವರು ವಿವಿಧ ಕ್ಷೇತ್ರಗಳ ತಜ್ಞರು ಸದಸ್ಯರಾಗಿರುತ್ತಾರೆ.

ಸದಸ್ಯರ ಪೈಕಿ ಕೆಲವರು ಪೂರ್ಣಾವಧಿ ಮತ್ತು ಅಲ್ಪಾವಧಿ ಸದಸ್ಯರು, ಕೇಂದ್ರ ಸಂಪುಟ ಸಚಿವರು ಪದನಿವಿತ್ತ (EX-OFFICIO) ಸದಸ್ಯರಾದರೆ, ವಿವಿಧ ಕ್ಷೇತ್ರಗಳ ತಜ್ಞರು ಆಹ್ವಾನಿತ ಸದಸ್ಯರಾಗಿರುತ್ತಾರೆ. ಆಯೋಗದಲ್ಲಿ ಉಪಾಧ್ಯಕ್ಷರು ಒಳಗೊಂಡಂತೆ ಕಾರ್ಯ ನಿರ್ವಹಣಾಧಿಕಾರಿ (CEO) ಎಂಬ ಹೊಸ ಹುದ್ದೆ ಸೃಷ್ಟಿಸಿದ್ದಾರೆ.

ನೀತಿ ಆಯೋಗದ ಈಗಿನ ಸದಸ್ಯರು
1. ಅಧ್ಯಕ್ಷರು: ಪ್ರಧಾನಿ ನರೇಂದ್ರ ಮೋದಿ
2. ಉಪಾಧ್ಯಕ್ಷರು: ಅರವಿಂದ ಪನಗರಿಯಾ
3. ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಸಿಂಧುಶ್ರೀ ಕುಲ್ಲಾರ್
4. ಪದನಿಮಿತ್ತ ಸದಸ್ಯರು: ರಾಜನಾಥ ಸಿಂಗ್, ಅರುಣ್‌ ಜೇಟ್ಲಿ. ಸುರೇಶ್ ಪ್ರಭು, ರಾಧಾ ಮೋಹನ ಸಿಂಗ್
5. ಪೂರ್ಣಾವಧಿ ಸದಸ್ಯರು: ವಿವೇಕ್‌ ದೇವರಾಯ್, ವಿ.ಕೆ. ಸಾರಸ್ವತ್
6. ಆಡಳಿತ ಮಂಡಳಿ: ಎಲ್ಲ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್‌ಗಳು
*ನೀತಿ ಆಯೋಗದ ವಿಶೇಷ ಆಹ್ವಾನಿತ ಸದಸ್ಯರಾಗಿ ಸಚಿವರಾದ ನಿತಿನ್ ಗಡ್ಕರಿ, ಸ್ಮೃತಿ ಇರಾನಿ ಮತ್ತು ತಾವರ ಚಂದ ಗೆಹ್ಲೋಟ್ ಆಯ್ಕೆಯಾಗಿದ್ದಾರೆ.

ಯೋಜನಾ ಆಯೋಗ ಹಾಗೂ ನೀತಿ ಆಯೋಗದ ಹೋಲಿಕೆಗಳು
*ನೀತಿ ಆಯೋಗವು ಕೇವಲ ಚಿಂತಕರ ಚಾವಡಿಯಂತೆ ಕೆಲಸ ಮಾಡುತ್ತದೆ. ರಾಜ್ಯಗಳಿಗೆ ಹಣಕಾಸಿನ ಹಂಚಿಕೆ ವಿಷಯವು ಹಣಕಾಸು ಸಚಿವರ ಪರಿಧಿಯಲ್ಲೆ ಇರುತ್ತದೆ. ಆದರೆ ಯೋಜನಾ ಆಯೋಗವು ರಾಜ್ಯಗಳಿಗೆ ನಿಧಿ ಹಂಚಿಕೆ ವಿಷಯದಲ್ಲೂ ಅಧಿಕಾರವನ್ನು ಹೊಂದಿತ್ತು.

*ನೀತಿ ಆಯೋಗದಲ್ಲಿ ಪೂರ್ಣಾವಧಿ ಸದಸ್ಯರ ಸಂಖ್ಯೆ ಯೋಜನೆ ಆಯೋಗದಲ್ಲಿದ್ದ ಸದಸ್ಯರ ಸಂಖ್ಯೆ  ಕಡಿಮೆ. ಈಗಿನ ನೀತಿ ಆಯೋಗದಲ್ಲಿ ಪೂರ್ಣಾವಧಿ ಸದಸ್ಯರ ಸಂಖ್ಯೆ ಎರಡು ಆದರೆ ಈ ಹಿಂದಿನ ಯೋಜನಾ ಆಯೋಗದಲ್ಲಿ 8 ಜನ ಪೂರ್ಣಾವಧಿ ಸದಸ್ಯರಿದ್ದರು.

*ನೀತಿ ಆಯೋಗದಲ್ಲಿ ರಾಜ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ ಯೋಜನಾ ಆಯೋಗದಲ್ಲಿ ರಾಜ್ಯಗಳು ಕೇವಲ ರಾಷ್ಟ್ರೀಯ ಅಭಿವೃದ್ಧಿ ನಿಗಮ (national development council) ದ ಭಾಗವಹಿಸುವುದಕ್ಕೆ  ಮಾತ್ರ ಸೀಮಿತವಾಗಿತ್ತು.

*ನೀತಿ ಆಯೋಗದಲ್ಲಿ ಅಲ್ಪಾವಧಿ ಸದಸ್ಯರಿರುತ್ತಾರೆ. ಆದರೆ ಯೋಜನಾ ಆಯೋಗದಲ್ಲಿ ಅಲ್ಪಾವಧಿ ಸದಸ್ಯರಿಲ್ಲ

*ನೀತಿ ಆಯೋಗದಲ್ಲಿ ಹೊಸದಾಗಿ ಸೃಷ್ಟಿಸಲಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳನ್ನೊಳಗೊಂಡಂತೆ. ಉಪಾಧ್ಯಕ್ಷರು ಐದು ಜನ ಪೂರ್ಣಾವಧಿ ಮತ್ತು ಇಬ್ಬರು ಅಲ್ಪಾವಧಿ ಸದಸ್ಯರು, ನಾಲ್ಕು ಜನ ಕ್ಯಾಬಿನೆಟ್ ದರ್ಜೆಯ ಸಚಿವರು ( ಪದನಿಮಿತ್ತ) ಇರುತ್ತಾರೆ. ಆದರೆ ಯೋಜನಾ ಆಯೋಗವು ಉಪಾಧ್ಯಕ್ಷರು, ಸದಸ್ಯ ಕಾರ್ಯದರ್ಶಿ ಹಾಗೂ ಕೆಲವು ಪೂರ್ಣಾವಧಿ ಸದಸ್ಯರನ್ನೊಳಗೊಂಡಿತ್ತು.