Follow by Email

Tuesday, April 7, 2015

2014ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ


ಬೆಂಗಳೂರು, ಏ.7- ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ
ಪತ್ರಕರ್ತರಿಗೆ ನೀಡಲಾಗುವ ಕರ್ನಾಟಕ ಮಾಧ್ಯಮ
ಅಕಾಡೆಮಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2014ನೆ ಸಾಲಿನ
ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ
ಪ್ರಶಸ್ತಿಯನ್ನು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ
ವಿಜಯಕರ್ನಾಟಕ ವರದಿಗಾರ ಸಿದ್ಧಲಿಂಗ ಸ್ವಾಮಿ,
ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ
ಪ್ರಶಸ್ತಿಯನ್ನು ರಾಯಚೂರು ವಾಣಿ, ಮಾನವೀಯ
ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ
ಪ್ರಶಸ್ತಿಯನ್ನು ,
ಉತ್ತರ ಕನ್ನಡ ಜಿಲ್ಲೆಯ ಲೋಕ ದುನಿ ದಿನಪತ್ರಿಕೆಯ ವರದಿಗಾರ
ಶ್ರೀಧರ ಅವರಿಗೆ ನೀಡಲಾಗಿದೆ. ಕರ್ನಾಟಕ
ಮಾಧ್ಯಮ ಅಕಾಡೆಮಿ ಅಧ್ಯಕ್ಷ
ಎಂ.ಎ.ಪೊನ್ನಪ್ಪ ಅಧ್ಯಕ್ಷತೆಯಲ್ಲಿ
ನಡೆದ ಸಭೆಯಲ್ಲಿ 2014ನೇ ಸಾಲಿನ ವಿಶೇಷ ಹಾಗೂ ವಾರ್ಷಿಕ ಪ್ರಶಸ್ತಿ
ಈ ಕೆಳಕಂಡವರಿಗೆ ನೀಡಲಾಗಿದೆ. ಪ್ರಶಸ್ತಿ ಪ್ರದಾನ
ಸಮಾರಂಭ ಇದೇ ತಿಂಗಳ 16ರಂದು ವಿಧಾನಸೌಧ
ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದ್ದು , ಪ್ರಶಸ್ತಿ
ಪುರಸ್ಕೃತರಿಗೆ 20,000 ನಗದು ಹಾಗೂ ಪ್ರಶಸ್ತಿ ಫಲಕ ನೀಡಿ
ಸನ್ಮಾನಿಸಲಾಗುವುದು.
ಪ್ರಶಸ್ತಿ ಪುರಸ್ಕೃತರ ಪಟ್ಟಿ
2014ರ ವಿಶೇಷ ಪ್ರಶಸ್ತಿ
ಎಂ.ಎಸ್. ಪ್ರಭಾಕರ್ (ಕಾಮರೂಪಿ)- (ಕೋಲಾರ)
2014ನೇ ಸಾಲಿನ ವಾರ್ಷಿಕ ಪ್ರಶಸ್ತಿ
1.ಕೋಟಿಗಾನಹಳ್ಳಿ ರಾಮಯ್ಯ - (ಕೋಲಾರ)
2. ಎಂ.ಕೆ. ಭಾಸ್ಕರರಾವ್ - (ಶಿವಮೊಗ್ಗ)
3. ಎಂ. ನಾಗರಾಜ - (ಮೈಸೂರು)
4. ಕೆ.ಬಿ. ರಾಮಪ್ಪ - (ಶಿವಮೊಗ್ಗ)
5.ಬಿ. ಹೊನ್ನಪ್ಪ ಭಾವಿಕೇರಿ - (ಅಂಕೋಲ-ಉ.ಕ)
6.ಗಾಯತ್ರಿ ನಿವಾಸ್ - (ಮಂಗಳೂರು)
7.ಲೀಲಾವತಿ - (ಹಾಸನ)
8.ಲಿಂಗೇನಹಳ್ಳಿ ಸುರೇಶ್ಚಂದ್ರ - (ಬೆಂಗಳೂರು)
9.ಇಫ್ತಿಕಾರ್ ಅಹಮದ್ ಶರೀಫ್ - (ಬೆಂಗಳೂರು)
10.ವೀರೇಂದ್ರ ಶೀಲವಂತ -
(ಬಾಗಲಕೋಟೆ)
11.ರಿಜ್ವಾನ್ ಉಲ್ಲಾ ಖಾನ್ - (ಬೆಂಗಳೂರು)
12.ಬಿ.ಎಸ್. ಪ್ರಭುರಾಜನ್ - (ಮೈಸೂರು)
13. ಎಸ್. ನಾಗೇಂದ್ರ (ನೇತ್ರರಾಜು) - (ಮೈಸೂರು)
14.ದೇವೇಂದ್ರಪ್ಪ ಹೆಚ್. ಕಪನೂರಕರ್ - (ಕಲಬುರ್ಗಿ)
15.ಬಿ.ವಿ.ಗೋಪಿನಾಥ್ - (ಕೋಲಾರ)
16.ರೋನ್ಸ್ ಬಂಟ್ವಾಳ್ - (ಮುಂಬೈ) -
ಹೊರನಾಡ ಕನ್ನಡಿಗರು
17.ಗಂಧರ್ವ ಸೇನಾ - (ಬೀದರ್)
18.ಶಿವಕುಮಾರ ಅಡಿವೆಪ್ಪ ಭೈಜಶೆಟ್ಟರ - (ಧಾರವಾಡ)
19.ಶಿವಾನಂದ ತಗಡೂರು - (ಹಾಸನ)
20. ವಿ.ನಂಜುಂಡಪ್ಪ - (ಬೆಂಗಳೂರು)
21. ಎಚ್.ಟಿ. ಅನಿಲ್ - (ಕೊಡಗು)
22. ಆಸ್ಟ್ರೋಮೋಹನ್ - (ಉಡುಪಿ)
23. ಬಸವರಾಜ ಹೊಂಗಲ್ - (ಧಾರವಾಡ)
24. ಸಿ.ಎನ್. ರಾಜು (ಮಣ್ಣೆರಾಜು) - (ತುಮಕೂರು)
25. ನಾಗಲಕ್ಷ್ಮಿ ಬಾಯಿ - (ದಾವಣಗೆರೆ)
26.ನಾಯಕ ಗಂಗೊಳ್ಳಿ - (ಉಡುಪಿ)
27.ಎನ್.ರವಿಕುಮಾರ್ - (ಶಿವಮೊಗ್ಗ)
28.ವಿಲಾಸ್ ಮೇಲಗಿರಿ - (ಹಾವೇರಿ)
29.ಮಂಜುನಾಥ ಎಂ. ಅದ್ದೆ - (ಬೆಂಗಳೂರು)
30.ಲೈಕ್ ಎ. ಖಾನ್ - (ಮೈಸೂರು)
31.ರಕ್ಷಾ ಕಟ್ಟೆಬೆಳಗುಳಿ - (ಹಾಸನ)
32.ಎಸ್.ಲಕ್ಷ್ಮೀನಾರಾಯಣ - (ಕೋಲಾರ)
33.ಸಾಹುಕಾರ್ ಚಂದ್ರಶೇಖರ್ ರಾವ್ (ಸಾಚ) - (ಚಿಕ್ಕಮಗಳೂರು)
34.ಬಂಗ್ಲೆ ಮಲ್ಲಿಕಾರ್ಜುನ - (ಬಳ್ಳಾರಿ)
ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ
ಪ್ರಶಸ್ತಿ
2014ನೆ ಸಾಲಿನ ಆಂದೋಲನ ಪ್ರಶಸ್ತಿ , ರಾಯಚೂರು ವಾಣಿ ಪತ್ರಿಕೆ
ರಾಯಚೂರು.
ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ
ಪ್ರಶಸ್ತಿ
ಸಿದ್ದಲಿಂಗ ಸ್ವಾಮಿ, ವಿಜಯ ಕರ್ನಾಟಕ, ಕುಣಿಗಲ್ ತಾಲ್ಲೂಕು ,
ತುಮಕೂರು ಜಿಲ್ಲೆ
ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ
ಮೈಸೂರು ದಿಗಂತ ಪ್ರಶಸ್ತಿ
ಶ್ರೀಧರ , ಮಂಗಳೂರು, ಲೋಕ ದಿನಪತ್ರಿಕೆ, ಸಿರಸಿ