Drop


Thursday, April 30, 2015

ಜಾತಿ ಗಣತಿ ಬೆಂಗಳೂರಿನಲ್ಲಿ ಮೇ 5, ರಾಜ್ಯಾದ್ಯಂತ ಮೇ 3ರವರೆಗೆ ವಿಸ್ತರಣೆ


Published: 30 Apr 2015 05:09 PM IST

ಜಾತಿ ಗಣತಿ ಮಾಡುತ್ತಿರುವ ಸಿಬ್ಬಂದಿ (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾತಿ ಗಣತಿಯ ಕೊನೆಯ ದಿನಾಂಕವನ್ನು ಮೇ 5ರವರೆಗೆ ವಿಸ್ತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೆಯ ಅವರು ಗುರುವಾರ ಹೇಳಿದ್ದಾರೆ.

ರಾಜ್ಯಾದ್ಯಂತ ಶೇ.90. 7ರಷ್ಟು ಹಾಗೂ ಬೆಂಗಳೂರಿನಲ್ಲಿ ಶೇ.62 ರಷ್ಟು ಮಾತ್ರ ಜಾತಿ ಗಣತಿಯಾಗಿದೆ. ಹೀಗಾಗಿ ಜಾತಿಗಣತಿ ಅವಧಿಯನ್ನು ಬೆಂಗಳೂರಿನಲ್ಲಿ ಮೇ 5ರವರೆಗೆ ಹಾಗೂ ರಾಜ್ಯಾದ್ಯಂತ ಮೇ 3ರವರೆಗೆ ವಿಸ್ತರಿಸಲಾಗಿದೆ ಎಂದು ಆಂಜನೇಯ ಅವರು ತಿಳಿಸಿದ್ದಾರೆ. ಅಲ್ಲದೆ ಮೇ 5ರ ನಂತರ ಯಾವುದೇ ಕಾರಣಕ್ಕೂ ಅವಧಿಯನ್ನು ವಿಸ್ತರಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮುಂಚೆ ಜಾತಿ ಗಣತಿಗೆ ಏಪ್ರಿಲ್ 30 ಅಂತಿಮ ದಿನವಾಗಿತ್ತು.

ಏಪ್ರಿಲ್ 12ರಿಂದ ಪ್ರಾರಂಭವಾಗಿರುವ ಸಮೀಕ್ಷೆ ಕಾರ್ಯ ಶೇ.90.7ರಷ್ಟು ಮುಗಿದಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೊನೆಯ ಸ್ಥಾನದಲ್ಲಿದೆ.

ನಿನ್ನೆಯಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿಯ ಅವಧಿಯನ್ನು 10ದಿನ ವಿಸ್ತರಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದ್ದರು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ, ಯಾವುದೇ ಕಾರಣಕ್ಕೂ ಸಮೀಕ್ಷೆ ಅಪೂರ್ಣವಾಗಬಾರದು. ಎಲ್ಲಾ ನಿವಾಸಿಗಳ ಗಣತಿ ಮಾಡಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದರು.

Posted by: Lingaraj Badiger | Source: Online Desk