ಭಾರತೀಯರನ್ನೂ ಸಮ್ಮೋಹನಗೊಳಿಸಿದ ಕಾದಂಬರಿ

ಇತ್ತೀಚೆಗೆ ಬಿಡುಗಡೆಯಾದ ಇಂಗ್ಲಿಷ್‍ನ `ಫಿಫ್ಟಿ ಶೇಡ್ಸ್ ಆಫ್ ಗ್ರೇ' ಕಾದಂಬರಿ ಇಡೀ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿದೆ.  ಯುವದಂಪತಿಗಳ ಪ್ರಣಯದ ಸುತ್ತ ರಚನೆಯಾಗಿರುವ ಈ ಕಾದಂಬರಿ, ಪುಸ್ತಕಪ್ರೇಮಿಗಳನ್ನು ಸಮ್ಮೋಹನಗೊಳಿಸಿದೆ. ಕಾದಂಬರಿಯಲ್ಲಿ ಬರುವ ದಂಪತಿಗಳ ನಡುವಿನ `ಲೈಂಗಿಕ ಒಪ್ಪಂದ' ಇಂದು ಯುವಜೋಡಿಗಳ ಮೇಲೆ ಅಪಾರ ಪ್ರಭಾವ ಬೀರಿದ್ದು, ಬಹಳಷ್ಟು ಯುವಜೋಡಿಗಳು ಅಂತಹ `ಲೈಂಗಿಕ ಒಪ್ಪಂದ'ಕ್ಕೆ ಮುಂದಾಗಲು ಉತ್ಸುಕತೆ ತೋರುತ್ತಿದ್ದಾರೆ.   ಈ ಕುರಿತು ಸಮೀಕ್ಷೆ ನಡೆಸಿರುವ ಸಂಸ್ಥೆಯೊಂದು ಭಾರತೀಯ ಯುವಜನರೂ ಈ ವಿಚಾರದಲ್ಲಿ ಉದಾರವಾಗಿದ್ದಾರೆ ಎಂಬ ಚೇತೋಹಾರಿ ಅಂಶವನ್ನು ಹೊರಗೆಡವಿದೆ.   `ಫಿಫ್ಟಿ ಶೇಡ್ಸ್ ಆಫ್ ಗ್ರೇ' ಕಾದಂಬರಿ ಬಿಡುಗಡೆಯಾದ ದಿನದಿಂದಲೂ ಓದುಗರನ್ನು ಅಪಾರ ಸಂಖ್ಯೆಯಲ್ಲಿ ಸೆಳೆಯುತ್ತಿದೆ. ಈ ಕಾದಂಬರಿ ಅಪರೂಪದ ಥ್ರಿಲ್ಲರ್ ಕಾದಂಬರಿಯಾಗಿದ್ದು, ಚಿತ್ರದ ಕೇಂದ್ರ ಪಾತ್ರಗಳಾದ ದಂಪತಿಗಳು `ಗುಪ್ತ ಲೈಂಗಿಕ ಒಪ್ಪಂದ' ಮಾಡಿಕೊಂಡು ಸಾಂಸಾರಿಕ ಜೀವನ ನಡೆಸುತ್ತಿರುತ್ತಾರೆ. ಈ ಗುಪ್ತ ಲೈಂಗಿಕ ಒಪ್ಪಂದದ ಕಾರಣಕ್ಕೇ ಕಾದಂಬರಿಯಲ್ಲಿ ಅನೇಕ ಊಹಿಸಲಸದಳ ತಿರುವುಗಳಿದ್ದು, ಪುಸ್ತಕಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. 
ಇಲ್ಲಿಯವರೆಗೆ ಕೇವಲ ಕಾದಂಬರಿ ಮಾತ್ರವಾಗಿ ಓದುಗರಲ್ಲಿ ನಾನಾ ರಮ್ಯ ಕಲ್ಪನೆಗಳಿಗೆ ಕಾರಣವಾಗಿದ್ದ `ಫಿಫ್ಟಿ ಶೇಡ್ಸ್ ಆಫ್ ಗ್ರೇ' ಇನ್ನು ಕೆಲವೇ ದಿನಗಳಲ್ಲಿ ಚಲನಚಿತ್ರವಾಗಿಯೂ ಮೂಡಿ ಬರುತ್ತಿದ್ದು, `ಲೈಂಗಿಕ ಒಪ್ಪಂದ'ದ ಬಗೆಗಿನ ಒಗಟು ಕೆಲವೇ ದಿನಗಳಲ್ಲಿ ಬಿಡಿಸಿಕೊಳ್ಳಲಿದೆ. 
ಈ ಬಗ್ಗೆ ಭಾರತೀಯ ಯುವಜನರ ನಡುವೆ ನಡೆಸಲಾಗಿರುವ ಸಮೀಕ್ಷೆಯಲ್ಲಿ ಆಘಾತಕಾರಿ ಅಂಶ ಹೊರಬೀಳುವುದಕ್ಕಿಂತ ಚೇತೋಹಾರಿ ವಿಷಯವೇ ಹೊರಬಿದ್ದಿರುವುದು ಗಮನಾರ್ಹ. ಶೇ. 67ರಷ್ಟು ಭಾರತೀಯ ಯುವಜನರು `ಲೈಂಗಿಕ ಒಪ್ಪಂದ' ಮಾಡುವುದಕ್ಕೆ ಸಮ್ಮತಿ ಸೂಚಿಸಿದ್ದರೆ, ಶೇ. 23ರಷ್ಟು ಮಂದಿ ಈ ಆಯ್ಕೆಯನ್ನು ಪರಿಗಣಿಸಲು ಉತ್ಸುಕತೆ ತೋರಿದ್ದಾರೆ. ಕೆಲವೇ ಸಂಪ್ರದಾಯಸ್ಥ ಮಂದಿ ಮಾತ್ರ ಈ ಒಪ್ಪಂದದ ಬಗ್ಗೆ ತಮ್ಮ ಅಸಮ್ಮತಿಯನ್ನು ಸೂಚಿಸಿದ್ದಾರೆ.
ಈ ಮಂದಿ ಇಂತಹ ಆವಿಷ್ಕಾರಗಳು ಭಾರತೀಯ ಸಂಪ್ರದಾಯವನ್ನು ಪಾಶ್ಚಾತ್ಯ ರೀತಿರಿವಾಜುಗಳು ಅತಿಕ್ರಮಿಸುತ್ತಿರುವುದರ ಸೂಚನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಈ ಬಗ್ಗೆ ಇಂಗ್ಲೆಂಡ್‍ನಲ್ಲೂ ಸಮೀಕ್ಷೆ ನಡೆಸಲಾಗಿದ್ದು, ಮೂರನೆ ಎರಡರಷ್ಟು ಜನ `ಲೈಂಗಿಕ ಒಪ್ಪಂದ'ಕ್ಕೆ ಸಹಿ ಮಾಡಲು ಸಮ್ಮತಿ ಸೂಚಿಸಿದ್ದಾರೆ. 
ಆರೋಗ್ಯಕರ ಲೈಂಗಿಕತೆ ಬಗ್ಗೆ ಕಾಳಜಿ ಇರುವ ಮಂದಿ ಈ ಆಯ್ಕೆಯನ್ನೂ ಪರಿಗಣಿಸಬಹುದು...!
-ಸದಾನಂದ ಗಂಗನಬೀಡು

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023