ವಿಶ್ವ ಶೂಟಿಂಗ್‌: ಜಿತು ರಾಯ್ ಕಂಚಿನ ಸಾಧನೆ

ವಿಶ್ವ ಶೂಟಿಂಗ್‌: ಜಿತು ರಾಯ್ ಕಂಚಿನ ಸಾಧನೆ
(PSG...)
ಚಾಂಗ್‌ವೊನ್‌, ದಕ್ಷಿಣ ಕೊರಿಯಾ(ಪಿಟಿಐ): ಭಾರತದ ಭರವಸೆಯ ಶೂಟರ್‌ ಜಿತು ರಾಯ್‌ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನ 10 ಮೀಟರ್‌ ಪುರುಷರ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಭಾನುವಾರ ಕಂಚಿನ ಸಾಧನೆ ತೋರಿದ್ದಾರೆ.

ಜಿತು ಅವರು ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪಡೆದ ಏಳನೇ ಪದಕ ಇದಾಗಿದೆ.ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಕೂಟಗಳಲ್ಲಿ ಬಂಗಾರ ಪದಕ ವಿಜೇತ ಜಿತು, ಒಟ್ಟು 181.1 ಪಾಯಿಂಟ್ಸ್‌ ಕಲೆ ಹಾಕಿ ಮೂರನೇ ಸ್ಥಾನ ತೃಪ್ತಿ ಪಟ್ಟರು. 0.4ಗಳಷ್ಟು ಪಾಯಿಂಟ್‌ಗಳ ಅತ್ಯಲ್ಪ ಅಂತರದಲ್ಲಿ ಅವರು ಕೊನೆಯ ಸುತ್ತಿಗೆ ಅರ್ಹತೆ ಪಡೆಯುವ ಅವಕಾಶ ಕೈತಪ್ಪಿತು.

ಸ್ಥಳೀಯ ಸ್ಪರ್ಧಿ ಜಿನ್‌ ಜೊಂಕೊಹ್ 206 ಪಾಯಿಂಟ್‌ ಗಳಿಸಿ ಚಿನ್ನದ ಪದಕ ಬಾಚಿದರು. ಮ್ಯಾನ್ಮಾರ್‌ನ ನವುಂಗ್‌ ಯೆ ತುನ್‌ ಅವರು 201 ಪಾಯಿಂಟ್‌ಗಳೊಂದಿಗೆ ಬೆಳ್ಳಿ ಸಾಧನೆ ತೋರಿದರು.

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ಪ್ರಕಾಶ್ ನಂಜಪ್ಪ ಮತ್ತು ಗುರುಪ್ರೀತ್ ಸಿಂಗ್ ಅವರು ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 18 ಹಾಗೂ 48ನೇ ಸ್ಥಾನ ಪಡೆದರು.

ಜಿತು ಅವರು 2014ರ ಸೆಪ್ಟೆಂಬರ್‌ನಲ್ಲಿಯೇ ಮುಂದಿನ ವರ್ಷ ರಿಯೋ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಶನಿವಾರವಷ್ಟೇ ಇದೇ ಟೂರ್ನಿಯ 10 ಮೀಟರ್‌ ಏರ್ ರೈಫಲ್‌ ವಿಭಾಗದಲ್ಲಿ ರಾಜಸ್ತಾನದ ಅಪೂರ್ವಿ ಚಾಂಡೇಲಾ ಕಂಚಿನ ಸಾಧನೆಗೈದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023