Drop


Tuesday, April 7, 2015

ಸಂಪೂರ್ಣ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ಸ್ಕಾರ್ಪಿಯನ್ ಸೇರ್ಪಡೆ:


ಮುಂಬೈನ ಮಜಗಾಂವ್ ಹಡಗುಕಟ್ಟೆಯಲ್ಲಿ
ಸೋಮವಾರ ಮೊದಲ ದೇಶಿ ನಿರ್ಮಿತ
ಜಲಾಂತರ್ಗಾಮಿ 'ಸ್ಕಾರ್ಪಿಯನ್'ನ್ನು
ನೌಕಾಪಡೆಗೆ ಸೇರ್ಪಡೆ ಮಾಡುವಾಗ
ಅದರ ಮೇಲೆ ನಿಂತು ಸಂಭ್ರಮಿಸಿದ ಕಾರ್ಮಿಕರು
ಮತ್ತು ಎಂಜಿನಿಯರ್ಗಳು ಪಿಟಿಐ ಚಿತ್ರ
ಮುಂಬೈ (ಐಎಎನ್ಎಸ್): ಮೊದಲ ದೇಶಿ ನಿರ್ಮಿತ
ಜಲಾಂತರ್ಗಾಮಿ (ಸಬ್ಮರಿನ್) 'ಸ್ಕಾರ್ಪಿಯನ್' ಅನ್ನು ರಕ್ಷಣಾ
ಸಚಿವ ಮನೋಹರ್ ಪರಿಕ್ಕರ್ ಅವರು ಸೋಮವಾರ ಮಜಗಾಂವ್ ಹಡಗು­
ಕಟ್ಟೆಯಲ್ಲಿ ನೌಕಾಪಡೆಗೆ
ಹಸ್ತಾಂತರಿಸಿದರು.
ಭಾರತೀಯ ನೌಕಾದಳದ
ಮಹತ್ವಾಕಾಂಕ್ಷೆಯ 'ಜಲಾಂತರ್ಗಾಮಿ 75
ಯೋಜನೆ'ಯ ಭಾಗವಾಗಿ ಫ್ರಾನ್ಸ್ ಸಹಯೋಗದಲ್ಲಿ ₹
23,000
ಕೋಟಿ ವೆಚ್ಚದಲ್ಲಿ ಒಟ್ಟು ಆರು 'ಸ್ಕಾರ್ಪಿಯನ್'­
ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದೆ.
ಡೀಸೆಲ್– ವಿದ್ಯುತ್ ಚಾಲಿತ 'ಸ್ಕಾರ್ಪಿಯನ್'
ಸರಣಿ ಜಲಾಂತರ್ಗಾಮಿ ಗಳಲ್ಲಿ ಇದು
ಮೊದಲನೆಯದಾಗಿದ್ದು, 2018ರ
ವೇಳೆಗೆ ಇನ್ನೂ
ಐದು ಸ್ಕಾರ್ಪಿಯನ್ ಜಲಾಂತರ್ಗಾಮಿಗಳು ಭಾರತೀಯ
ನೌಕಾದಳಕ್ಕೆ ಸೇರ್ಪಡೆಯಾಗಲಿವೆ.
ಫ್ರಾನ್ಸ್ನ ಡಿಸಿಎನ್ಎಸ್ ಕಂಪೆನಿ
ವಿನ್ಯಾಸಗೊಳಿಸಿರುವ ಸ್ಕಾರ್ಪಿಯನ್
ಜಲಾಂತರ್ಗಾಮಿಗಳು ಮುಂಬೈನ ಮಜಗಾಂವ್
ಬಂದರಿನಲ್ಲಿ ನಿರ್ಮಾಣವಾಗುತ್ತಿವೆ.
ಮಜಗಾಂವ್ ಬಂದರಿನಲ್ಲಿ ಪಶ್ಚಿಮ ನೌಕಾ ಕಮಾಂಡ್
ಕೈಗೆತ್ತಿಕೊಂಡಿರುವ ಜಲಾಂತ­
ರ್ಗಾಮಿ 75 ಯೋಜನೆ ಮತ್ತು 15 ಬಿ
ದರ್ಜೆಯ ವಿನಾಶಕ ಹಡುಗು ನಿರ್ಮಾಣ
ಯೋಜನೆಯ ಪ್ರಗತಿಯನ್ನು ಪರಿಕ್ಕರ್ ಇದೇ
ವೇಳೆ ಪರಿಶೀಲಿಸಿದರು.
ಇಲ್ಲಿಯ ಮಜಗಾಂವ್ ಹಡಗುಕಟ್ಟೆಯಲ್ಲಿ
ನಡೆದ ಸಮಾರಂಭದಲ್ಲಿ ನೌಕಾಪಡೆ
ಮುಖ್ಯಸ್ಥ ಆ್ಯಡ್ಮಿರಲ್ ಆರ್.ಕೆ. ಧೋವನ್,
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ
ಫಡಣವೀಸ್ ಪಾಲ್ಗೊಂಡಿದ್ದರು.
*
ಜಲಾಂತರ್ಗಾಮಿಯ ವೈಶಿಷ್ಟ್ಯಗಳು
* ಪ್ರಾಯೋಗಿಕ ಪರೀಕ್ಷೆಯ ಎಲ್ಲ
ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರ
ಸ್ಕಾರ್ಪಿಯನ್ ಸೆಪ್ಟೆಂಬರ್ 2016ರಲ್ಲಿ
ಅಧಿಕೃತ ಕಾರ್ಯಾರಂಭ.
* ₹ 5 ಸಾವಿರ ಕೋಟಿ ಬಜೆಟ್
ಕೊರತೆಯಿಂದ
ಜಲಾಂತರ್ಗಾಮಿಗಳ ನಿರ್ಮಾಣ ವಿಳಂಬ.
* ಸ್ಕಾರ್ಪಿಯನ್ ಸರಣಿಯ ಹೊರತಾಗಿ ಇನ್ನೂ ಆರು
ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ₹ 50 ಸಾವಿರ ಕೋಟಿ
ಟೆಂಡರ್ ಕರೆದ ಕೇಂದ್ರ.
* ಸಾಗರದಲ್ಲಿ ಪರೀಕ್ಷೆ
ನಡೆಸುತ್ತಿರುವ ಸ್ವದೇಶಿ ನಿರ್ಮಿತ ಅಣ್ವಸ್ತ್ರಸಜ್ಜಿತ
ಐಎನ್ಎಸ್–ಅರಿಹಂತ ಅಧಿಕೃತವಾಗಿ 2016ಕ್ಕೆ
ನೌಕಾಪಡೆಗೆ ಸೇರ್ಪಡೆ.
* ಲಾರ್ಸೆನ್ ಆ್ಯಂಡ್ ಟರ್ಬೊ
ಕಂಪೆನಿಗೆ ಇನ್ನೆರಡು
ಅಣ್ವಸ್ತ್ರ ಜಲಾಂತರ್ಗಾಮಿ ನಿರ್ಮಿಸುವ ಗುತ್ತಿಗೆ
ನೀಡಲಾಗಿದೆ.
* ನೌಕಾದಳದಲ್ಲಿ ಸದ್ಯ 30 ವರ್ಷದಷ್ಟು ಹಳೆಯ
ರಷ್ಯಾ ನಿರ್ಮಿತ 10 ಮತ್ತು ಜರ್ಮನ್ ನಿರ್ಮಿತ 4 ಸಾಂಪ್ರ­
ದಾಯಿಕ
ಡೀಸೆಲ್ – ವಿದ್ಯುತ್ ಚಾಲಿತ
ಜಲಾಂತರ್ಗಾಮಿಗಳಿವೆ. ಈ ಪೈಕಿ ಅರ್ಧ ಮಾತ್ರ
ಕಾರ್ಯನಿರ್ವಹಿಸುತ್ತಿವೆ.
*
ಪ್ರತಿ 9 ತಿಂಗಳಿಗೆ
ಒಂದರಂತೆ ಒಟ್ಟು ಇನ್ನೂ ಐದು ಸ್ಕಾರ್ಪಿಯನ್
ಸರಣಿ ಜಲಾಂತರ್ಗಾಮಿಗಳು 2018ರವೇಳೆಗೆ
ನೌಕಾಪಡೆಗೆ
ಸೇರ್ಪಡೆಯಾಗಲಿವೆ.
- ಮನೋಹರ್ ಪರಿಕ್ಕರ್,
ರಕ್ಷಣಾ ಸಚಿವ