Drop


Wednesday, April 8, 2015

ಸಣ್ಣ ಉದ್ದಿಮೆದಾರ ಆಶಾಕಿರಣ 'ಮುದ್ರಾ ಬ್ಯಾಂಕ್'

ಗೆ ಮೋದಿ
ಚಾಲನೆ
ನವದೆಹಲಿ,ಏ.8-ನಮ್ಮ ಸರ್ಕಾರ ಸಣ್ಣ ಸಣ್ಣ ಉದ್ಯಮಿಗಳು
ಹಾಗೂ ರೈತರ ಪರ ಸರ್ಕಾರವಗಿದೆ ಎಂದು ಪ್ರಧಾನಿ ನರೇಂದ್ರ
ಮೋದಿ ಹೇಳಿದರು. ಇಲ್ಲಿನ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ
ಕಾರ್ಯಕ್ರಮದಲ್ಲಿ ಸಣ್ಣಪುಟ್ಟ ಉದ್ಯಮಿಗಳಿಗೆ ಅನುಕೂಲ
ಕಲ್ಪಿಸುವ ಮುದ್ರಾ ಬ್ಯಾಂಕ್(ಮೈಕ್ರೋ ಯೂನಿಟ್ಸ್
ಡೆವಲಪ್ಮೆಂಟ್ ರೀಫೈನಾನ್ಸ್ ಏಜೆನ್ಸಿ)ಗೆ ಚಾಲನೆ
ನೀಡಿ ಅವರು ಮಾತನಾಡಿದರು. ಗುಜರಾತ್ನಲ್ಲಿ ಗಾಳಿಪಟ
ಉದ್ಯಮದಲ್ಲಿ ಈ ರೀತಿಯ ಮುದ್ರಾ ಬ್ಯಾಂಕ್
ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿ ಪರೀಕ್ಷೆ
ಮಾಡಿದ್ದೇನೆ.
ಗಾಳಿಪಟ ಉದ್ಯಮ ಈಗ ಅಂತಾರಾಷ್ಟ್ರೀಯ
ಮಟ್ಟದಲ್ಲಿ ಬೆಳೆದು ಅಭಿವೃದ್ದಿ ಹೊಂದಿದೆ.
ಭಾರೀ ಉದ್ದಿಮೆಗಳಿಗಿಂತ ದೇಶದ ಅಭಿವೃದ್ಧಿ,
ಉದ್ಯೋಗವಕಾಶಗಳಲ್ಲಿ ಸಣ್ಣ ಉದ್ದಿಮೆಗಳ ಪಾತ್ರ
ಮಹತ್ವದ್ದಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ಇಂದಿನ ಈ ಮುದ್ರಾ ಬ್ಯಾಂಕ್ ಯೋಜನೆಯಿಂದ
ದೇಶದಲ್ಲಿ 5.77 ಕೋಟಿ ಮೈಕ್ರೊ ಬ್ಯಾಂಕ್ಗಳು
ಕಾರ್ಯಾರಂಭ ಮಾಡಲಿದ್ದು, ಹಲವಾರು ಕೋಟಿ ಸಣ್ಣ
ಉದ್ದಿಮೆದಾರರಿಗೆ ಇದರಿಂದ ಅನುಕೂಲವಾಗಲಿದೆ ಎಂದು
ಮೋದಿ ಹೇಳಿದ್ದಾರೆ.
ರೈತರ ಕಲ್ಯಾಣಕ್ಕಾಗಿ ನಾವು ಮಾರ್ಗಸೂಚಿಗಳಲ್ಲಿ ಹಲವು
ಬದಲಾವಣೆಗಳನ್ನು ತಂದಿದ್ದೇವೆ. ಈ ಬದಲಾವಣೆಯಿಂದಾಗಿ
ಅತಿವೃಷ್ಟಿ-ಅನಾವೃಷ್ಟಿ ಸೇರಿದಂತೆ ವಿವಿಧ ಬಗೆಯ ಪ್ರಕೃತಿ
ವಿಕೋಪಗಳಿಂದುಂಟಾಗುವ ಬೆಳೆ ನಾಶಕ್ಕೆ ಸೂಕ್ತ ಪರಿಹಾರ
ನೀಡಲು ಅನುಕೂಲವಾಗಲಿದೆ.
ಶೇ.33ರಷ್ಟು ಬೆಳೆ ಹಾಳಾದರೂ ಅಂತಹ ರೈತರಿಗೆ ಈಗ ಪರಿಹಾರ
ನೀಡಬಹುದಾಗಿದೆ. ಈ ಹಿಂದೆ ಶೇ.50ರಷ್ಟು ಬೆಳೆ
ನಾಶವಾಗಿದ್ದರೆ ಮಾತ್ರ ಪರಿಹಾರದ ಲಭ್ಯತೆ ಇರುತ್ತಿತ್ತು. ಮಾರ್ಗಸೂಚಿ
ಬದಲಾವಣೆಯಿಂದ ಇದು ಸಾಧ್ಯವಾಗುತ್ತದೆ ಎಂದು ಪ್ರಧಾನಿ
ಮೋದಿ ತಿಳಿಸಿದ್ದಾರೆ.
ಬ್ಯಾಂಕ್ಗಳು ರೈತರು ಮತ್ತು ಸಣ್ಣ ಉದ್ದಿಮೆಗಳಿಗೆ ಸಾಲ
ನೀಡುವ ವಿಷಯದಲ್ಲಿ ತಮ್ಮ ಪದ್ಧತಿಯನ್ನು
ಬದಲಾಯಿಸಿಕೊಳ್ಳಬೇಕು. ಅತಿವೃಷ್ಟಿ-
ಅನಾವೃಷ್ಟಿಗಳಿಂದ ಬೆಳೆ ನಾಶವಾದ ರೈತರಿಗೆ ಸೂಕ್ತ ಸಮಯದಲ್ಲಿ
ನೆರವು ಒದಗುವಂತೆ ಮಾಡಬೇಕು ಎಂದು ಮೋದಿ
ಬ್ಯಾಂಕ್ಗಳಿಗೆ ಕರೆ ನೀಡಿದರು.
ಮೈಕ್ರೋ ಪೈನಾನ್ಸ್ನಲ್ಲಿ ಶಿಶು, ಅಶೋಕ್ ಹಾಗೂ ತರುಣ್ ಎಂದು ಮೂರು
ವಿಭಾಗಗಳ್ನು ಮಾಡಲಾಗಿದೆ. ಶಿಶು ವಿಭಾಗದಲ್ಲಿ 50 ಸಾವಿರ ರೂ.ಗಳವರೆಗೆ
ಕಿಶೋರ್ ವಿಭಾಗದಲ್ಲಿ 50 ಸಾವಿರದಿಂದ 5 ಲಕ್ಷ ರೂ.ವರೆಗೆ ಹಾಗೂ
ತರುಣ್ ಯೋಜನೆಯಡಿ5ರಿಂದ 10 ಲಕ್ಷ ರೂ.ಗಳವರೆಗೆ
ಬ್ಯಾಂಕ್ ಸಾಲ ಲಭ್ಯವಾಗಲಿದೆ ಎಂದು ಕೇಂದ್ರ
ಹಣಕಾಸು ಖಾತೆ ಕಚೇರಿ ತಿಳಿಸಿದೆ.