Drop


Thursday, April 30, 2015

CNR RAO AND TKA NAIR WILL BE AWARDED WITH "THE ORDER OF RAISING SUN" from Japan

ಜಪಾನ್ ಗೌರವ ಪಡೆಯಲಿರುವ ಸಿ ಎನ್ ಆರ್ ರಾವ್ ಮತ್ತು ಟಿ ಕೆ ಎ ನಾಯರ್

Published: 29 Apr 2015 04:12 PM IST

ಸಿ ಎನ್ ಆರ್ ರಾವ್

ನವದೆಹಲಿ: ಭಾರತರತ್ನ ಪುರಸ್ಕೃತ ವಿಜ್ಞಾನಿ ಸಿ ಎನ್ ಆರ್ ರಾವ್ ಮತ್ತು ಪ್ರಧಾನ ಮಂತ್ರಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ಟಿ ಕೆ ಎ ನಾಯರ್ ಅವರಗಳನ್ನು ಒಳಗೊಂಡಂತೆ ನಾಲ್ಕು ಭಾರತೀಯರು ಜಪಾನ್ ಗೌರವ 'ಸ್ಪ್ರಿಂಗ್ ಇಂಪೀರಿಯಲ್ ಡೆಕೊರೇಶನ್ಸ್' ಪಡೆಯುತ್ತಿದ್ದಾರೆ. ಈ ಗೌರವ ಸ್ವೀಕರಿಸುವ ಒಟ್ಟು ೮೫ ವಿದೇಶಿಯರ ಹೆಸರುಗಳನ್ನು ಜಪಾನ್ ಸರ್ಕಾರ ಬುಧವಾರ ಘೋಷಿಸಿದೆ.

ತಮ್ಮ ಪರಿಣಿತಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವ್ಯಕ್ತಿಗಳಿಗೆ ಈ 'ದ ಆರ್ಡರ್ ಆಫ್ ರೈಸಿಂಗ್ ಸನ್' ಪ್ರಶಸ್ತಿ ನೀಡಲಾಗುತ್ತದೆ.

ಮೇ ೮ ರಂದು ಟೋಕಿಯೋದ ಇಂಪೀರಿಯಲ್ ಅರಮನೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜಪಾನ್ ರಾಜನ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಲಗುತ್ತದೆ ಎಂದು ಜಪಾನ್ ರಾಯಭಾರಿ ಕಚೇರಿ ತಿಳಿಸಿದೆ.

ಈ ಪ್ರಶಸ್ತಿಯನ್ನು ಪಡೆಯುತ್ತಿರುವ ಇನ್ನಿಬ್ಬರು ಭಾರತೀಯರು ನಿಕುಂಜ್ ಪರೇಕ್ ಮತ್ತು ಟೋಪ್ಗೆ ಭುಟಿಯಾ.