Drop


Sunday, April 19, 2015

Dr. Nasim took charge as 20th chief election commissioner ..

ಮುಖ್ಯ ಚುನಾವಣಾ ಆಯುಕ್ತರಾಗಿ ಡಾ.ನಸೀಮ್ ಅಧಿಕಾರ
ಸ್ವೀಕಾರ
ನವದೆಹಲಿ, ಏ.19- ದೇಶದ 20ನೆ ಮುಖ್ಯ ಚುನಾವಣಾಧಿಕಾರಿಯಾಗಿ
(ಸಿಇಸಿ) ಡಾ.ನಸೀಮ್ ಝೈದಿ ಅವರು ಇಂದು ಅಧಿಕಾರ
ವಹಿಸಿಕೊಂಡರು. ನಿನ್ನೆ ನಿವೃತ್ತರಾದ
ಹರಿಶಂಕರ್ ಬ್ರಹ್ಮ ಅವರ ಸ್ಥಾನಕ್ಕೆ ನಸೀಮ್
ಝೈದಿ ನಿಯೋಜಿತರಾಗಿದ್ದರು. 2017ರ ಜುಲೈಗೆ ನಜೀಮ್
ತಮ್ಮ 65ನೆ ವಯಸ್ಸಿಗೆ ನಿವೃತ್ತರಾಗುವರು. ಚುನಾವಣಾ ಆಯೋಗಕ್ಕೆ
ಇನ್ನಿಬ್ಬರು ಆಯುಕ್ತರ ನೇಮಕವಾಗುವವರೆಗೆ ನಜೀಮ್
ಒಬ್ಬರೇ ಕಾರ್ಯನಿರ್ವಹಿಸುವರು. ಸಾಮಾನ್ಯವಾಗಿ ಚುನಾವಣಾ ಆಯೋಗದ
ಆಯುಕ್ತರ ಅವಧಿ ಆರು ವರ್ಷವಾಗಿರುತ್ತದೆ.
ಆದರೆ, ಆಯುಕ್ತರಿಗೆ 65 ವಷರ ತುಂಬಿದರೆ ಅವರು
ನಿವೃತ್ತರಾಗುತ್ತಾರೆ. 1976ನೆ ಉತ್ತರ ಪ್ರದೇಶ ಕೇದರ್ನ ಐಎಎಸ್
ಅಧಿಕಾರಿ ನಸೀಮ್. ನಾಗರಿಕ ವಿಮಾನಯಾನ ಖಾತೆಯ
ಕಾರ್ಯದರ್ಶಿಯಾಗಿದ್ದ ನಸೀಮ್ 2012ರ
ಜು.31ರಂದು ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರು.