First State to introduce BIKE AMBULANCE in India is Karnataka

ಪ್ರಥಮ ಚಿಕಿತ್ಸೆಗೆ ಬೈಕ್ ಆಂಬುಲೆನ್ಸ್
ಪ್ರಜಾವಾಣಿ ವಾರ್ತೆ
Thu , 04 /16/2015 - 01 : 44 Tweet 0
ವಿಧಾನಸೌಧದ ಮುಂಭಾಗದಲ್ಲಿ ಬೈಕ್ ಆಂಬುಲೆನ್ಸ್ಗೆ ಚಾಲನೆ
ನೀಡಲಾಯಿತು . 30 ಬೈಕ್ಗಳನ್ನು
ತರಬೇತಿಗೊಂಡ ಸವಾರರು ಚಲಾಯಿಸಿದರು . –
ಪ್ರಜಾವಾಣಿ ವಾರ್ತೆ
ಹೊಸ ವ್ಯವಸ್ಥೆಗೆ ಮುಖ್ಯಮಂತ್ರಿ
ಸಿದ್ದರಾಮಯ್ಯ ಚಾಲನೆ, ಮೊದಲ ರಾಜ್ಯ
ಕರ್ನಾಟಕ
ಬೆಂಗಳೂರು : ಅಪಘಾತದಲ್ಲಿ
ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ
ನೀಡುವ ಬೈಕ್ ಆಂಬುಲೆನ್ಸ್ ಸೇವೆಗೆ ಬುಧವಾರ
ಮುಖ್ಯಮಂತ್ರಿ ಸಿದ್ದ ರಾಮಯ್ಯ ಚಾಲನೆ
ನೀಡಿದರು.
ಬೈಕ್ ಆಂಬುಲೆನ್ಸ್ ಸೇವೆ ನಿರ್ವಹಣೆಯ ಜವಾಬ್ದಾರಿ
ಹೊತ್ತ ಕೃಷ್ಣರಾವ್ ಮತ್ತು ರಾಷ್ಟ್ರೀಯ
ಆರೋಗ್ಯ ಅಭಿಯಾನದ ನಿರ್ದೇಶಕ ಪಿ . ಎಸ್ . ವಸ್ತ್ರದ್ ಅವರಿಗೆ ಬೈಕ್
ಕೀ ಹಸ್ತಾಂತ ರಿಸಿದರು. ' ನಗರ ಪ್ರದೇಶದಲ್ಲಿ
ವಾಹನಗಳ ದಟ್ಟಣೆಯಿಂದ ಅಪಘಾತಗಳ ಸಂಖ್ಯೆ
ಹೆಚ್ಚಾಗಿದೆ . ಅನೇಕರು ರಕ್ತಸ್ರಾವ ದಿಂದಾಗಿ ಮೃತರಾಗುತ್ತಾರೆ .
ಆದರೆ, ಅಪಘಾತ ನಡೆದ ಹತ್ತು ನಿಮಿಷದೊಳಗೆ
ಗಾಯಾಳುವನ್ನು ಉಪಚರಿಸಿದರೆ ಜೀವ ಉಳಿಸಬಹುದು '
ಎಂದು ಹೇಳಿದರು .
' ಸರ್ಕಾರಿ ಬೈಕ್ ಆಂಬುಲೆನ್ಸ್ ಸೇವೆಯನ್ನು ಆರಂಭಿಸಿದ
ಮೊದಲ ರಾಜ್ಯ ಕರ್ನಾಟಕವಾಗಿದೆ' ಎಂದರು
' ಒಟ್ಟು 153 ಬೈಕ್ ಆಂಬುಲೆನ್ಸ್ಗಳಿಗೆ ಸರ್ಕಾರ ಅನುದಾನ
ನೀಡಿದೆ ' ಎಂದು ಸಿದ್ದರಾಮಯ್ಯ ಹೇಳಿದರು . ಈ
ಯೋಜನೆ ಫಲಪ್ರದವಾದರೆ ಮುಂದೆ ಇಡೀ ರಾಜ್ಯಕ್ಕೆ
ವಿಸ್ತರಿಸ ಲಾಗುವುದು ' ಎಂದರು .
ರಾಜ್ಯ ಆರೋಗ್ಯ ಖಾತೆಯ ಸಚಿವ ಯು . ಟಿ . ಖಾದರ್ ಅವರು
ಮಾತನಾಡಿ , ' ಆರೋಗ್ಯ ಕವಚ 108 ಯೋಜನೆಯಲ್ಲಿ 715
ಆಂಬುಲೆನ್ಸ್ ಗಳಿದ್ದು , ಇದಕ್ಕೆ ಪೂರಕವಾಗಿ ಬೈಕ್ ಆಂಬುಲೆನ್ಸ್
ಕಾರ್ಯ ನಿರ್ವಹಿಸಲಿದೆ ಎಂದರು . ಚಾಲಕರು ತುರ್ತು
ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸಿ ಯೋಜನೆ
ಯನ್ನು ಯಶಸ್ವಿ ಗೊಳಿಸಬೇಕು ' ಎಂದು ಖಾದರ್
ಅವರು ಮನವಿ ಮಾಡಿದರು .
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ
ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023