Drop


Thursday, April 9, 2015

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು.09-04-2015

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು.09-04-2015

01.ಅಕ್ಟೋಬರ್ 1959 ರಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಯಾವ ರಾಜ್ಯದಲ್ಲಿ ಜಾರಿಗೊಳಿಸಲಾಯಿತು ?
A. ಕರ್ನಾಟಕ
B. ರಾಜಸ್ತಾನ ■■■
C. ಕೇರಳ
D. ಮಹಾರಾಷ್ಟ್ರ

02. ಈ ಕೆಳಗಿನ ಜೋಡಿಗಳಲ್ಲಿ ಯಾವುದು/ವು ಸರಿಯಾಗಿ ಹೊಂದಿಕೆಯಾಗಿದೆ
    1ಮೃಚ್ಛಕಟಿಕ          -     ಶೂದ್ರಕ
    2ಬುದ್ಧಚರಿತ          -     ವಸುಬಂಧು
    3ಮುದ್ರಾರಾಕ್ಷಸ      -     ವಿಶಾಖದತ್ತ
    4ಹರ್ಷಚರಿತ          -      ಬಾಣಬಟ್ಟ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
A. 1, 3 ಮತ್ತು 4■■■
B. 1, 2 ಮತ್ತು 3
C. 2, 3 ಮತ್ತು 4
D. ಮೇಲಿನ ಎಲ್ಲವೂ

03. ಬ್ಯಾಂಕುಗಳು ತಮ್ಮ ನಗದು ಹಣ ಮತ್ತು ಒಟ್ಟು ಆಸ್ತಿಗಳ ನಡುವೆ ಹೊಂದಿರಲೇಬೇಕಾದ ಅನುಪಾತವನ್ನು ಈ ರೀತಿ ಕರೆಯುತ್ತಾರೆ.
A. ಶಾಸನೀಯ ಬ್ಯಾಂಕ್ ಅನುಪಾತ (Statutory Bank Ratio)
B. ಶಾಸನೀಯ ದ್ರವ್ಯತ್ವ ಅನುಪಾತ (Statutory Liquid Ratio)
C. ನಗದು ಮೀಸಲು ಅನುಪಾತ (Cash Reserve Ratio)■■■
D. ಕೇಂದ್ರ ದ್ರವ್ಯತ್ವ ಮೀಸಲು (Central Liquid Reserve)

04. ಮನುಷ್ಯನ ಮೂತ್ರಪಿಂಡದಲ್ಲಿ ಉಂಟಾಗುವ ಹರಳುಗಳು (ಕಿಡ್ನಿ ಕಲ್ಲು) ಮುಖ್ಯವಾಗಿ ಈ ಕೆಳಗಿನ ಯಾವ ರಾಸಾಯನಿಕದ ಸಂಯುಕ್ತವಾಗಿದೆ
A. ಕ್ಯಾಲ್ಸಿಯಂ ಕಾರ್ಬೋನೆಟ್
B. ಯೂರಿಕ್ ಆಮ್ಲ
C. ಕ್ಯಾಲ್ಸಿಯಂ
D. ಕ್ಯಾಲ್ಸಿಯಂ ಅಕ್ಸಲೇಟ್■■■

05. ಈ ಕೆಳಗೆ ಕೊಟ್ಟಿರುವ ಭಾಷೆಗಳಲ್ಲಿ ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳು ಯಾವುವು
    1ಇಂಗ್ಲೀಷ್
    2ಜಪಾನಿ
    3ಜರ್ಮನಿ
    4ಚೀನಿ
    5ಅರೇಬಿಕ್ಉತ್ತರಗಳು:-
A. 1, 3 ಮತ್ತು 5
B. 1, 2 ಮತ್ತು 4
C. 1, 4 ಮತ್ತು 5■■■
D. 3, 4 ಮತ್ತು 5

06. ಭಾರತದ ಆರ್ಥಿಕ ಸಮೀಕ್ಷೆಯನ್ನು ಪ್ರತಿವರ್ಷವು ಅಧಿಕೃತವಾಗಿ ಪ್ರಕಟಿಸುವ ಸಂಸ್ಥೆ ಯಾವುದು?
A. ಭಾರತ ಸರ್ಕಾರದ ಹಣಕಾಸು ಮಂತ್ರಾಲಯ■■■
B. ಭಾರತೀಯ ರಿಸರ್ವ್ ಬ್ಯಾಂಕ್
C. ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ
D. ಭಾರತದ ಯೋಜನಾ ಆಯೋಗ

07. ಸಾಮಾನ್ಯವಾಗಿ ಅಂತರಿಕ್ಷದಲ್ಲಿನ ಆಕಾಶಕಾಯಗಳ ನಡುವಿನ ದೂರವನ್ನು ಖಗೋಳ ಏಕಮಾನದ ಮೂಲಕ ಅಳೆಯುತ್ತೇವೆ. ಒಂದು ಖಗೋಳ ಏಕಮಾನವು (Astronomical Unit) ಇವುಗಳ ನಡುವಣ ಸರಾಸರಿ ದೂರವಾಗಿರುತ್ತದೆ
A. ಭೂಮಿ ಮತ್ತು ಚಂದ್ರ■■■
B. ಸೂರ್ಯ ಮತ್ತು ಚಂದ್ರ
C. ಭೂಮಿ ಮತ್ತು ಆಕಾಶ
D. ಭೂಮಿ ಮತ್ತು ಸೂರ್ಯ

08. ಇತ್ತೀಚಿನ ದಿನಗಳಲ್ಲಿ ಭಾರತದ ರೂಪಾಯಿ ಮೌಲ್ಯ ಅಮೆರಿಕಾದ ಡಾಲರ್ ಎದುರು ಅಪಮೌಲ್ಯಗೊಳ್ಳುತ್ತಿದೆ, ಇದಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣದ ಮೌಲ್ಯವನ್ನು (ಬೆಲೆಯನ್ನು) ಯಾರು ನಿರ್ಧರಿಸುತ್ತಾರೆ.
    1.ವಿಶ್ವ ಬ್ಯಾಂಕ್
    2.ಸರಕು/ಸೇವೆಗಳ  ಬೇಡಿಕೆಯನ್ನು ಒದಗಿಸುವ ಸಂಬಂಧಿತ ದೇಶ
    3.ಅಮೆರಿಕಾದ ಫೆಡರಲ್ ಬ್ಯಾಂಕ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್
    4.ಸಂಬಂಧಿತ ದೇಶದ ಸರ್ಕಾರದ ಸ್ಥಿರತೆ
 ಈ ಹೇಳಿಕೆಗಳಲ್ಲಿ ಯಾವುದು ಸರಿ
A. 1 ಮತ್ತು 3
B. 2 ಮತ್ತು 4■■■
C. 1 ಮತ್ತು 4
D. ಮೇಲಿನ ಎಲ್ಲವೂ

09.ವಿದ್ಯುತ್ ಒದಗಿಸುವ ವ್ಯವಸ್ಥೆಯಲ್ಲಿ ಒಂದು ಫ್ಯೂಸ್ ಅನ್ನು ರಕ್ಷಣಾಯುಕ್ತಿಯಾಗಿ ಉಪಯೋಗಿಸುತ್ತಾರೆ. ಫ್ಯೂಸ್ ನ ಬಗ್ಗೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ
A. ಅದಕ್ಕೆ ಅಲ್ಪ ದ್ರವೀಕರಣ ಬಿಂದು ಇರಬೇಕು■■■
B. ಅದನ್ನು ಮುಖ್ಯವಾಗಿ ಬೆಳ್ಳಿಯ ಮಿಶ್ರ ಲೋಹಗಳಿಂದ ಮಾಡಿರುತ್ತಾರೆ
C. ಅದಕ್ಕೆ ಅತೀ ಹೆಚ್ಚಿನ ರೋಧತೆ ಇರಬೇಕು
D. ಅದಕ್ಕೆ ಅತೀ ಹೆಚ್ಚಿನ ವಿದ್ಯುತ್ ಹೀರುವ ಶಕ್ತಿ ಇರಬೇಕು

10. ಒಬ್ಬ ಗಗನಯಾತ್ರಿ ಭೂಮಿಯಿಂದ ಆಕಾಶಕ್ಕೆ ಯಾತ್ರೆ ಕೈಗೊಂಡಾಗ ಈ ಕೆಳಗೆ ಕೊಟ್ಟಿರುವ ಯಾವ ವಾಯುಮಂಡಲದ ಪದರಗಳ ಮೂಲಕ ಅನುಕ್ರಮವಾಗಿ ಸಂಚಾರಿಸುತ್ತಾನೆ
A. ಹವಾಗೋಳ, ಸ್ತರಗೋಳ, ಮಧ್ಯಗೋಳ, ಅಯಾನುಗೋಳ■■■
B. ಹವಾಗೋಳ, ಮಧ್ಯಗೋಳ, ಸ್ತರಗೋಳ, ಅಯಾನುಗೋಳ
C. ಸ್ತರಗೋಳ, ಮಧ್ಯಗೋಳ, ಹವಾಗೋಳ, ಅಯಾನುಗೋಳ
D. ಸ್ತರಗೋಳ, ಹವಾಗೋಳ, ಅಯಾನುಗೋಳ, ಮಧ್ಯಗೋಳ

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ