FREEGKSMS ನಲ್ಲಿ ಪ್ರಕಟವಾದ ಇಂದಿನ 11 ಪ್ರಶ್ನೆಗಳಿಗೆ ಸರಿ ಉತ್ತರಗಳು. 10/04/2015

FREEGKSMS ನಲ್ಲಿ ಪ್ರಕಟವಾದ ಇಂದಿನ 11 ಪ್ರಶ್ನೆಗಳಿಗೆ ಸರಿ ಉತ್ತರಗಳು. 10/04/2015

01. ಭಾರತೀಯ ಷೇರು ವಿನಿಮಯ ಕೇಂದ್ರದ (Security Exchange Board of India -SEBI) ಮಾರ್ಗಸೂಚಿಯನ್ವಯ ಮ್ಯೂಚುಯಲ್ ಫಂಡ್ ಗಳನ್ನು ಅವುಗಳು ಹೊಂದಿರುವ 'ರಿಸ್ಕ್'ಗಳಿಗೆ ಅನುಗುಣವಾಗಿ ಬಾಂಡ್ ಗಳಿಗೆ ಈ ಕೆಳಗಿನ ಬಣ್ಣಗಳನ್ನು ನೀಡಿದೆ, ಇವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗದಿರುವುದು ಯಾವುದು?
A. ನೀಲಿ ಬಣ್ಣ- ಕಡಿಮೆ ರಿಸ್ಕ್ ಸಂಕೇತ
B. ಹಳದಿ ಬಣ್ಣ- ಮಧ್ಯಮ ರಿಸ್ಕ್ ಸಂಕೇತ
C. ಕೆಂಪು ಬಣ್ಣ- ರಿಸ್ಕ್ ರಹಿತ ಸಂಕೇತ■■■
D. ಕಂದು ಬಣ್ಣ- ಅತಿ ಹೆಚ್ಚು ರಿಸ್ಕ್ ಸಂಕೇತ

02. ಪ್ರತಿಷ್ಠಿತ ಆಸ್ಕರ್ ಮತ್ತು ಬೂಕರ್ ಪ್ರಶಸ್ತಿ ಪಡೆದ ಪ್ರಪಂಚದ ಏಕೈಕ ಪ್ರತಿಭೆ ಯಾರು
A. ಅಮೆರಿಕಾದ ಸ್ಟೀವನ್ ಸ್ಪೀಲ್ ಬರ್ಗ್
B. ಜಪಾನಿನ ಲಾ-ನಿ-ಟು
C. ಲಂಡನ್ನಿನ ರಿಕಿ ಕೇಜ್
D. ಜರ್ಮನಿಯ ರುಥ್ ಪ್ರಾವರ್ ಝಬ್ ವಾಲ■■■

03. ಸದ್ಯ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ "ಡೆಂಗ್ಯೂ" ಜ್ವರದ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ
   1 ಡೆಂಗ್ಯೂ ಜ್ವರ ವೈರಸ್ ನಿಂದ ಬರುವಂತ ಖಾಯಿಲೆಯಾಗಿದೆ
    2 ಈಡಿಸ್ ಎಂಬ ಸೊಳ್ಳೆ ಈ ಖಾಯಿಲೆಯನ್ನು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ
    3 ಡೆಂಗ್ಯೂ ಜ್ವರಕ್ಕೆ ಯಾವುದೇ ಔಷಧವಿಲ್ಲ
   4 ಪರಂಗಿ ಮರದ ಎಲೆಯ ರಸ ಮತ್ತು ಗ್ಯಾಂಬೂಸಿಯಾ ಮೀನು ರೋಗ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆಈ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ
A. 1 ಮತ್ತು 2
B. 1, 2 ಮತ್ತು 3
C. 2, 3 ಮತ್ತು 4
D. ಮೇಲಿನ ಎಲ್ಲವೂ■■■

04. ಕಂಪ್ಯೂಟರ್ ಗೆ ಸಂಬಂಧಿಸಿದಂತೆ "VIRUS" ಎಂಬುದರ ವಿಸ್ತೃತ ರೂಪ
A. Various Informative Resource Under Sedge
B. Vital Information Resource Under Seige
C. Vital Investigative Roots Under Seige■■■
D. Various Illegal Resource Under Security

05. ನೀರನ್ನು ಕುಡಿಯಲು ಯೋಗ್ಯವಲ್ಲದ್ದು ಎಂದು ಈ ಕೆಳಗಿನ ಯಾವ ಅಂಶಗಳು ನೀರಿನಲ್ಲಿ ಪತ್ತೆ ಹಚ್ಚುವ ಮೂಲಕ ನಿರ್ಧರಿಸುತ್ತಾರೆ
    1ಸೋಡಿಯಂ
    2ಫ್ಲೋರೈಡ್
    3ನೈಟ್ರೇಟ್
    4ಕಾರ್ಬನ್
    5ಅರ್ಸೆನಿಕ್ಉತ್ತರಗಳು:-
A. 1, 3 ಮತ್ತು 5
B. 2, 3 ಮತ್ತು 4
C. 2, 3 ಮತ್ತು 5■■■
D. 1, 4 ಮತ್ತು 5

06. ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದಿರುವ ವಸ್ತುಗಳು ಯಾವುವು?
    1ಧಾರವಾಡ ಪೇಡ
    2ನಂಜನಗೂಡು ರಸಬಾಳೆ
    3ಸಾಗರದ ಅಪ್ಪೆಮಿಡಿ ಮಾವು
    4ಮದ್ದೂರು ವಡೆ
    5ಮೈಸೂರು ಮಲ್ಲಿಗೆ
ಉತ್ತರಗಳು:-
A. 1, 2, 4 ಮತ್ತು 5
B. 2, 3 ಮತ್ತು 5■■■
C. 1, 2 ಮತ್ತು 4
D. ಮೇಲಿನ ಎಲ್ಲವೂ

07.ಕರ್ನಾಟಕದ ಕೊಡಗು ಜಿಲ್ಲೆಯ ಭಾಗಮಂಡಲದ ಸಂಗಮದಲ್ಲಿ ಯಾವ ನದಿಗಳು ಸೇರುತ್ತವೆ
A. ಕಾವೇರಿ-ಕಪಿಲ-ಕನ್ನಿಕೆ
B. ಕಾವೇರಿ-ನೇತ್ರಾವತಿ-ಕಪಿಲ
C. ಕಾವೇರಿ-ಸುಜ್ಯೋತಿ-ಕಪಿಲ
D. ಕಾವೇರಿ-ಸುಜ್ಯೋತಿ-ಕನ್ನಿಕೆ■■■

08. ಭಾರತದಲ್ಲಿ ಪವಿತ್ರ "ಚಾರ್ ದಾಮ್" ಯಾತ್ರೆ ಈ ಕೆಳಗಿನ ಯಾವ ಕ್ಷೇತ್ರಗಳ ತೀರ್ಥಯಾತ್ರೆಗೆ ಸಂಬಂಧಿಸಿದೆ?
    1ಅಮರನಾಥ
    2ಬದರಿನಾಥ
    3ಗಂಗೋತ್ರಿ
    4ಯಮುನೋತ್ರಿ
    5ವೈಷ್ಣೋದೇವಿ
    6ಕೇದಾರನಾಥ
ಉತ್ತರಗಳು:-
A. 1, 2, 4 ಮತ್ತು 5
B. 2, 3, 4 ಮತ್ತು 6■■■
C. 1, 2, 3, ಮತ್ತು 6
D. 2, 3, 4 ಮತ್ತು 5

09. ಜಗತ್ತಿನ ಅತ್ಯಾಧುನಿಕ ಮತ್ತು ಅತೀ ದೊಡ್ಡ ಇಂದನ ಮತ್ತು ಭಾರಿ ಪ್ರಮಾಣದ ಸೇನಾ ಸರಕುಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಹೆಲಿಕ್ಯಾಪ್ಟರ್ ಇತ್ತೀಚೆಗೆ ಭಾರತೀಯ ರಕ್ಷಣಾ ಪಡೆಗಳು ಉತ್ತರಖಂಡದ ಪ್ರವಾಹದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ಬಳಸಲಾಯಿತು, ಅದು ಯಾವುದು
A. ಸಾರಂಗ್
B. ಡ್ರೀಮ್ ಲೈನರ್
C. ಮಿಗ್-29
D. ಎಮ್.ಐ-26■■■

10. ರಕ್ತದಲ್ಲಿರುವ ಪ್ಲೇಟಿಲೆಟ್ಸ್ ಗಳ ಕುರಿತಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
    1ಪ್ಲೇಟಿಲೆಟ್ಸ್ ಗಳ ಜೀವಿತಾವಧಿ 5-9 ದಿನಗಳು ಮಾತ್ರ
    2ಪ್ಲೇಟಿಲೆಟ್ಸ್ ಗಳು ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ
   3 ಪ್ರತಿ 450 ml ರಕ್ತದಲ್ಲಿ 5% ಪ್ಲೇಟಿಲೆಟ್ಸ್ ಗಳು ಇರುತ್ತವೆ
    4ಆರೋಗ್ಯವಂತ ಮನುಷ್ಯನಲ್ಲಿ ಸಾಮಾನ್ಯವಾಗಿ 2.5 ಲಕ್ಷಕ್ಕೂ ಹೆಚ್ಚು ಪ್ಲೇಟಿಲೆಟ್ಸ್ ಗಳಿರುತ್ತವೆ
ಇವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ:
A. 1, 3 ಮತ್ತು 4
B. 2, 3 ಮತ್ತು 4
C. 1, 2 ಮತ್ತು 3
D. ಮೇಲಿನ ಎಲ್ಲವೂ■■■

11). ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ಯಾರನ್ನು ನೇಮಿಸಲಾಗಿದೆ.?

a) ಎಚ್.ಎಸ್. ಕಪಾಡಿಯಾ
b) ಎನ್.ಎಸ್.ಶ್ರೀಕಂಠನ್
c) ನಸೀಂ ಜೈದಿ■■
d) ಯಾರೂ ಅಲ್ಲ

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023