Drop


Sunday, April 19, 2015

Growing trees very fast technology succeeded :

ವೇಗವಾಗಿ ಮರ ಬೆಳೆಸುವ ಸಂಶೋಧನೆ ಯಶಸ್ವಿ

ಲಂಡನ್: ಮರಗಿಡಗಳು ವೇಗವಾಗಿ ಮತ್ತು ದೊಡ್ಡದಾಗಿ ಬೆಳೆಯಲು ಅನುಕೂಲವಾಗುವಂತಹ ತಂತ್ರಜ್ಞಾನವನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ.

ಲಂಡನ್​ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ಪಾಪ್ಲರ್ ಎಂಬ ಜಾತಿಯ ಮರಗಳ 2 ಜೀನ್​ಗಳಲ್ಲಿ ಸ್ವಲ್ಪ ಬದಲಾವಣೆ ಮಾಡುವ ಮೂಲಕ, ಮರಗಳು ಸಾಮಾನ್ಯಕ್ಕಿಂತ ಹೆಚ್ಚು ವೇಗವಾಗಿ, ದೊಡ್ಡದಾಗಿ ಬೆಳೆಯುತ್ತವೆ ಎಂಬುದನ್ನು ಕಂಡು ಕೊಂಡಿದ್ದಾರೆ. ಸಂಶೋಧಕರು ಗಿಡಗಳು ಬೆಳೆಯಲು ಸಹಕರಿಸುವ ಜೀನಗಳನ್ನು ಪತ್ತೆ ಹಚ್ಚಿ, ಅದರಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದ್ದಾರೆ. ಅದರಿಂದಾಗಿ ಗಿಡಗಳು ಹೆಚ್ಚು ವೇಗವಾಗಿ ಬೆಳೆಯುತ್ತವೆ. ಪ್ರಾಯೋಗಿಕವಾಗಿ ಈ ವಿಧಾನವು ಯಶಸ್ವಿಯಾಗಿದ್ದು ಹೊರಗಿನ ವಾತಾವರಣದಲ್ಲಿ ಇದನ್ನು ಪರೀಕ್ಷಿಸಬೇಕಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಹವಾಮಾನ ವೈಪರೀತ್ಯದಿಂದಾಗಿ ದಿನೇ ದಿನೇ ಭೂಮಿಯ ತಾಪಮಾನ ಏರುತ್ತಿದೆ ಮತ್ತು ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತಿದೆ. ಹಾಗಾಗಿ ಹೆಚ್ಚು ವೇಗವಾಗಿ ಮತ್ತು ದೊಡ್ಡದಾಗಿ ಮರಗಳನ್ನು ಬೆಳೆಸುವಂತಾದರೆ ವಾತಾವರಣದ ಸಮತೋಲನ ಕಾಪಾಡಲು ಅನುಕೂಲವಾಗುತ್ತದೆ. ಜತೆಗೆ ಇಂಧನ ಮೂಲವಾಗಿ ಈ ಮರಗಳನ್ನು ಬಳಕೆ ಮಾಡಬಹುದು ಎಂದು ಸಂಶೋಧಕರು ತಿಳಿಸುತ್ತಾರೆ.