India successfully test-fired nuclear weapons- capable Dhanush missile from a ship, off the Odisha coast on Thursday.

ನೌಕಾಧಾರಿತ ಅಣ್ವಸ್ತ್ರ ಕ್ಷಿಪಣಿ 'ಧನುಷ್': ಪರೀಕ್ಷೆ ಯಶಸ್ವಿ

ಒಡಿಷಾ: ಭಾರತದ ನೌಕಾಧಾರಿತ ಅಣ್ವಸ್ತ್ರ ಕ್ಷಿಪಣಿ 'ಧನುಷ್'ನ ಪರೀಕ್ಷಾರ್ಥ ಉಡ್ಡಯನ ಗುರುವಾರ ಒಡಿಷಾ ಕಡಲ ತೀರದ ನೌಕೆಯೊಂದರಲ್ಲಿ ನಡೆಯಿತು.

ನೌಕಾಧಾರಿತ ಅಣ್ವಸ್ತ್ರ ಕ್ಷಿಪಣಿ ಧನುಷ್ 500 ಕೆ.ಜಿ. ತೂಕದ ಅಣ್ವಸ್ತ್ರ ಕೊಂಡೊಯ್ಯುವ ಸಾಮರ್ಥ್ಯಹೊಂದಿದೆ. ಈ ಅಣ್ವಸ್ತ್ರ ಕ್ಷಿಪಣಿಯನ್ನು ಆಫ್​ಶೋರ್ ಪ್ಯಾಟ್ರೋಲಿಂಗ್ ವೆಸೆಲ್​ನ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ವಿಭಾಗದ ಸಿಬ್ಬಂದಿ ಗುರುವಾರ ಬೆಳಗ್ಗೆ 11. 02ಕ್ಕೆ ಪರೀಕ್ಷಾರ್ಥ ಉಡ್ಡಯನ ನಡೆಸಿದರು. ನಿಗದಿತ ಗುರಿಗೆ ಕರಾರುವಾಕ್ ಆಗಿ ಅಪ್ಪಳಿಸುವ ಮೂಲಕ ಇದೊಂದು ಪರಿಪೂರ್ಣ ಕ್ಷಿಪಣಿ ಎಂದು ಸಾಬೀತಾಗಿದೆ. ಕ್ಷಿಪಣಿ ಭೂಮಿ ಹಾಗೂ ಸಮುದ್ರ ಎರಡೂ ಕಡೆ ಇರುವ ಗುರಿಯ ಮೇಲೆ ಕಾರ್ಯನಿರ್ವಹಿಸಬಲ್ಲದು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್​ಡಿಒ) ರೂಪಿಸಿದ 5 ಪ್ರಮುಖ ಕ್ಷಿಪಣಿಗಳ ಪೈಕಿ ಧನುಷ್ ಕೂಡ ಒಂದು ಎಂದು ವಿಜ್ಞಾನಿಗಳು ತಿಳಿಸಿದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023