Drop


Thursday, April 16, 2015

Indian Origin RajRajeshwari appointed as Justice of NewYork Criminal Court( Its 1st time)..

ನ್ಯೂಯಾರ್ಕ್ ನ್ಯಾಯಾಧೀಶರಾಗಿ ಭಾರತ
ಮೂಲದ ಮಹಿಳೆ
Thu , 04 /16/2015 - 14 : 29
ವಾಷಿಂಗ್ಟನ್ ( ಐಎಎನ್ಎಸ್ ) : ಭಾರತ ಮೂಲದ ರಾಜರಾಜೇಶ್ವರಿ
ಅವರು ನ್ಯೂಯಾರ್ಕ್ ಕ್ರಿಮಿನಲ್ ನ್ಯಾಯಾಲಯದ
ನ್ಯಾಯಾಧೀಶರಾಗಿ
ನೇಮಕಗೊಂಡಿದ್ದಾರೆ . ಭಾರತ
ಮೂಲದವರೊಬ್ಬರು ನ್ಯೂಯಾರ್ಕ್ನ
ನ್ಯಾಯಾಲಯದ ನ್ಯಾಯಾಧೀಶರಾಗಿ
ನೇಮಕಗೊಂಡಿರುವುದು ಇದೇ
ಮೊದಲು .
43 ವರ್ಷದ ರಾಜರಾಜೇಶ್ವರಿ ಅವರು ಚೆನ್ನೈನಲ್ಲಿ ಜನಿಸಿದವರು . 16
ವರ್ಷದವರಿದ್ದಾಗ ಅಮೆರಿಕ ಸೇರಿದ ರಾಜರಾಜೇಶ್ವರಿ , ರಿಚ್ಮಂಡ್
ಕೌಂಟಿಯ ಜಿಲ್ಲಾ ಅಟಾರ್ನಿ ಕಚೇರಿಯಲ್ಲಿ ಸಹಾಯಕ ಜಿಲ್ಲಾ
ಅಟಾರ್ನಿಯಾಗಿ ಕಾರ್ಯನಿರ್ವಹಿಸಿದ್ದಾರೆ.
' ಈ ನೇಮಕದಿಂದ ಹೆಚ್ಚು ಸಂತೋಷವಾಗಿದೆ .
ಅನಿವಾಸಿಯೊಬ್ಬರಿಗೆ ಇಂಥ ಗಳಿಗೆಗಳು ಹೆಚ್ಚು
ಸ್ಮರಣೀಯ . ಈ ನೇಮಕ ನನ್ನಂಥ ಅನೇಕರಿಗೆ
ಪ್ರೇರಣೆ ' ಎಂದು ರಾಜರಾಜೇಶ್ವರಿ ಹೇಳಿದ್ದಾರೆ.
ಭರತನಾಟ್ಯ ಮತ್ತು ಕೂಚುಪುಡಿ ನೃತ್ಯಪಟುವೂ ಆಗಿರುವ ರಾಜರಾಜೇಶ್ವರಿ
ಅವರು ಅಮೆರಿಕದಲ್ಲಿ ನಡೆಯುವ ಅನಿವಾಸಿ ಭಾರತೀಯರ
ಸಮಾರಂಭಗಳಲ್ಲಿ ನೃತ್ಯ ಪ್ರದರ್ಶನವನ್ನೂ
ನೀಡಿದ್ದಾರೆ .