Drop


Wednesday, April 22, 2015

NATIONAL AWARD TO SHEEGEEHALLI GRAM PANCHAYAT

ಶೀಗೇಹಳ್ಳಿ ಗ್ರಾಮ ಪಂಚಾಯಿತಿಗೆ ರಾಷ್ಟ್ರ ಪ್ರಶಸ್ತಿ

ಮಹದೇವಪುರ, ಏ.21- ಕ್ಷೇತ್ರದ ಶೀಗೇಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸರ್ಕಾರ ವಿತರಿಸುವ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರಕ್ಕೆ ಪ್ರಸಕ್ತ ಸಾಲಿನಲ್ಲಿ ಆಯ್ಕೆಯಾಗುವ ಮೂಲಕ ಇತರೆ ಗ್ರಾಪಂಗಳಿಗೆ ಮಾದರಿಯಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಮೂಲಕ ಶೀಗೇಹಳ್ಳಿ ಗ್ರಾಮ ಪಂಚಾಯಿತಿ ಇತರೆ ಪಂಚಾಯಿತಿಗಳಿಗೆ ಮಾದರಿ ಯನ್ನಾಗಿ ಮಾಡಿದ್ದಾರೆ ಇಲ್ಲಿನ ಗ್ರಾಪಂ ಅಧ್ಯಕ್ಷ ವೆಂಕಟೇಶ್(ಮಧು).  ನೈರ್ಮಲ್ಯ, ಮಹಿಳಾ ಸಬಲೀ ಕರಣ ಸೇರಿದಂತೆ ಗ್ರಾಮದಲ್ಲಿ ಹಮ್ಮಿಕೊಂಡಿರುವ ಉತ್ತಮ ಕೆಲಸಗಳನ್ನು ಗುರುತಿಸಿ ಇತ್ತೀಚೆಗೆ ಕೇಂದ್ರದ ತಂಡ ಶೀಗೇಹಳ್ಳಿ ಗ್ರಾಪಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದೇ 24ರಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ

ನರೇಂದ್ರ ಮೋದಿಯವರಿಂದ ಪಂಚಾಯ್ತಿ ಅಧ್ಯಕ್ಷ ವೆಂಕಟೇಶ್ ಮತ್ತು ಪಿಡಿಒ ಅಂಬರೀಶ್ ಅವರು  ಪುರಸ್ಕಾರ ಸ್ವೀಕರಿಸಲಿದ್ದಾರೆ.

ಅಂತರ್ಜಲ ಕಾಪಾಡಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಪಕ್ಕದ ಹೊಸಕೋಟೆ ಕೆರೆಗೆ ಹಾದುಹೋಗುವ ನೀರನ್ನು ಇಲ್ಲಿ ಶೇಖರಿಸಿರುವುದರಿಂದ ಅಂತರ್ಜಲ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗಿದೆ.   ಗ್ರಾಪಂ ವ್ಯಾಪ್ತಿಯ ದೊಮ್ಮಸಂದ್ರದಲ್ಲಿ 100 ಮನೆಗಳಿದ್ದು, 50ಕ್ಕೂ ಹೆಚ್ಚು ಮನೆಗಳಿಗೆ ಕೇಂದ್ರ ಸರ್ಕಾರದ ಶೇ.22 ರಷ್ಟು ಯೋಜನೆಯಲ್ಲಿ ಉಚಿತವಾಗಿ ಸೋಲಾರ್ ಸಂಪರ್ಕ ಕಲ್ಪಿಸುವ ಮೂಲಕ ವಿದ್ಯುತ್ ಸಮಸ್ಯೆಯನ್ನು ನಿವಾರಿಸಲಾಗಿದೆ. ಮೂರು ತಿಂಗಳಿಗೊಮ್ಮೆ ಆರೋಗ್ಯ ಶಿಬಿರ ನಡೆಸಲಾ ಗುತ್ತದೆ. ಪ್ರತಿ ಮನೆಗೂ ಶೌಚಾಲಯ ಸೇರಿದಂತೆ ಇಲ್ಲಿನ ದಲಿತ ಕಾಲೋನಿಗಳ ಸಂಪೂರ್ಣ ಚಿತ್ರಣವೇ ಬದಲಿಸಿರುವುದಾಗಿ ಅಧ್ಯಕ್ಷ ವೆಂಕಟೇಶ್ ಳಿಸಿದ್ದಾರೆ.  ಬ್ಯೂಟೀಷಿಯನ್ ತರಬೇತಿ, ಟೈಲರಿಂಗ್ ತರಬೇತಿ, ನಿರುದ್ಯೋಗಿಗೆ ಹಲವು ಯೋಜನೆಗಳು, ರೈತರು ಮಹಿಳೆಯರ ಸಭೆ ನಡೆಸಿ ಅವರ ಸಮಸ್ಯೆ ಚರ್ಚಿಸಿ ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯಶಸ್ಸು ಕಂಡಿರುವುದಾಗಿ ತಿಳಿಸಿದರು.

 
ಈ ಯಶಸ್ಸು  ಪರಿಗಣಿಸಿರುವ ರಾಜ್ಯ ಸರ್ಕಾರ 2012-13ರಲ್ಲಿ ಅತ್ಯುತ್ತಮ ನೈರ್ಮಲ್ಯ ಪ್ರಶಸ್ತಿ, 2014-15ರಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಗ್ರಾಮ ಪುರಸ್ಕಾರ ನೀಡಿ  ಗೌರವಿಸಿತ್ತು. ಗ್ರಾಪಂಗೆ ಸಿಗುವ ಅಲ್ಪಸ್ವಲ್ಪ ಅನುದಾನ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ  ಸಂಪೂರ್ಣ ಅಭಿವೃದ್ಧಿ ಮಾಡುವಲ್ಲಿ ಯಶಸ್ವಿಯಾಗಿದೆ. ಒಟ್ಟಿನಲ್ಲಿ ಶೀಗೇಹಳ್ಳಿ ಗ್ರಾಮ ಪಂಚಾಯಿತಿಯನ್ನು ನೋಡಿ ಇತರೆ ಗ್ರಾಪಂಗಳು ಅಭಿವೃದ್ಧಿ ಕಂಡರೇ ದೇಶ ಅಭಿವೃದ್ಧಿಯ ಮುಂಚೂಣಿಗೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ.