Drop


Wednesday, April 1, 2015

New Governor of Mizoram will be KESARI NATH TRIPATHI (Apr 4 onwards)

ಮಿಜೋರಂ: ನೂತನ ರಾಜ್ಯಪಾಲ ಪ್ರಮಾಣ ಏ.4ಕ್ಕೆ

ಐಜ್ವಾಲ್: ಪಶ್ಚಿಮ ಬಂಗಾಳದ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರಿಗೆ ಮಿಜೋರಂ ರಾಜ್ಯದ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದ್ದು, ಏಪ್ರಿಲ್ 4ರಂದು ಅವರು ಮಿಜೋರಂ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಏಪ್ರಿಲ್ 4ರಂದು ಐಜ್ವಾಲ್ ಸಮೀಪದ ಲೆಂಗ್​ಪುಯಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ತ್ರಿಪಾಠಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗುವುದು ಮತ್ತು ಅದೇ ದಿನ ಸಂಜೆ 4 ಗಂಟೆಗೆ ರಾಜಭವನದಲ್ಲಿ ಅವರ ಪ್ರಮಾಣವಚನ ನಡೆಯುವುದು ಎಂದು ರಾಜ್ಯ ಶಿಷ್ಟಾಚಾರ ಅಧಿಕಾರಿ ಡೇವಿಡ್ ಎಲ್ ಪಚಾವು ಹೇಳಿದರು.

ಕೇಂದ್ರದಿಂದ ವಜಾಗೊಂಡಿರುವ ಮಾಜಿ ರಾಜ್ಯಪಾಲ ಅಜೀಜ್ ಖುರೇಷಿ ಅವರು ಶನಿವಾರವೇ ಐಜ್ವಾಲ್ ಬಿಡಲಿದ್ದಾರೆ.