New Record of JAPAN BULLET TRAIN:-

ಹೊಸ ದಾಖಲೆ ಬರೆದ ಜಪಾನ್ 'ಬುಲೆಟ್ ಟ್ರೈನ್'

ಟೋಕಿಯೊ: ವಿಶ್ವದ ಅತ್ಯಂತ ವೇಗದ ಬುಲೆಟ್ ರೈಲನ್ನು ಇಂದು ಜಪಾನ್​ನಲ್ಲಿ ಮಂಗಳವಾರ ಪರೀಕ್ಷೆಗೆ ಒಳಪಡಿಸಲಾಗಿದ್ದು, ರೈಲು 600 ಕಿ.ಮೀ. (373 ಮೈಲು) ಪ್ರತಿ ಗಂಟೆ ವೇಗದಲ್ಲಿ ಸಂಚರಿಸಿ ದಾಖಲೆ ನಿರ್ಮಿಸಿದೆ.

ಮ್ಯಾಗ್ಲೆವ್ ರೈಲು (ಅಯಸ್ಕಾಂತ ಬಲದಿಂದ ಸಂಚರಿಸುವ ರೈಲು) ಪರೀಕ್ಷಾರ್ಥ ಸಂಚಾರದಲ್ಲಿ ಗರಿಷ್ಠ 603 ಕಿ.ಮೀ. ಪ್ರತಿ ಗಂಟೆ ವೇಗದಲ್ಲಿ ಸಂಚರಿಸಿತ್ತು ಮತ್ತು ಸುಮಾರು 11 ಸೆಕೆಂಡುಗಳ ಕಾಲ 600 ಕಿ.ಮೀ. ಪ್ರತಿ ಗಂಟೆ ವೇಗದಲ್ಲಿ ಸಂಚರಿಸುವ ಮೂಲಕ ನೂತನ ದಾಖಲೆ ಬರೆದಿದೆ ಎಂದು ಜಪಾನ್ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ರೈಲು ಒಂದು ವಾರದ ಹಿಂದೆ 590 ಕಿ.ಮೀ. ವೇಗದಲ್ಲಿ ಸಂಚರಿಸಿತ್ತು, ಈ ಮೂಲಕ 2003ರಲ್ಲಿ ನಿರ್ಮಿಸಿದ್ದ 581 ಕಿ.ಮೀ. ವೇಗದ ದಾಖಲೆಯನ್ನು ಅಳಿಸಿಹಾಕಿತ್ತು. ಮ್ಯಾಗ್ಲೆವ್ ರೈಲು ಹಳಿಯಿಂದ ಸುಮಾರು 4 ಇಂಚು ಎತ್ತರದಲ್ಲಿ ತೇಲುತ್ತಾ ಸಂಚರಿಸುತ್ತದೆ. ರೈಲಿಗೆ ವಿದ್ಯುತ್​ಚ್ಛಕ್ತಿ ಆಧರಿತ ಅಯಸ್ಕಾಂತಗಳು ಚಲನ ಶಕ್ತಿ ನೀಡುತ್ತವೆ. ಕಂಪನಿಯು 2027ರ ವೇಳೆಗೆ ಟೋಕಿಯೋ ಮತ್ತು ನಗೋಯ ನಗರಗಳ ನಡುವಿನ 286 ಕಿ.ಮೀ. ದೂರದ ಹಳಿ ನಿರ್ಮಿಸಿ ರೈಲು ಸಂಚಾರ ಆರಂಭಿಸುವ ಯೋಜನೆ ಹೊಂದಿದೆ. ಜತೆಗೆ ತಂತ್ರಜ್ಞಾನವನ್ನು ಹೊರದೇಶಗಳಿಗೆ ಮಾರಾಟ ಮಾಡಲೂ ಸಹ ಕಂಪನಿ ಚಿಂತಿಸುತ್ತಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023