No P.E.Teachers in 47,000 Govt Primary Schools in Karnataka.

 47 ಸಾವಿರ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲ..!

- ಎ. ಅಪ್ಪಾಜಿಗೌಡ

ಮುಳಬಾಗಿಲು: ವಿದ್ಯಾರ್ಥಿಗಳ ಶಾರೀರಿಕ, ಬೌದ್ಧಿಕ, ಸಾಮಾಜಿಕ, ನೈತಿಕ ವಿಕಸನ ಹಾಗೂ ಸರ್ವತೋಮá-ಖ ಅಭಿವೃದ್ಧಿಹಿನ್ನೆಲೆಯಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ರಾಜ್ಯಾದ್ಯಂತ ದೈಹಿಕ ಶಿಕ್ಷಣಪಠ್ಯಪುಸ್ತಕಗಳನ್ನು ಪೂರೈಸಿರುವ ಸರ್ಕಾರ, ಸುಮಾರು 47 ಸಾವಿರ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲು ಮೀನಮೇಷ ಎಣಿಸುತ್ತಿದೆ.

ರಾಜ್ಯ ಹಾಗೂ ರಾಷ್ಟ್ರೀಯ ಪಠ್ಯ ಚೌಕಟ್ಟಿನಲ್ಲಿ ದೈಹಿಕ ಶಿಕ್ಷಣ ಜಾರಿಗೆ ಸಂಬಂಧ ಹಲವು ಸಮಿತಿಗಳು ವರದಿ ಸಲ್ಲಿಸಿದ್ದವು. 2001-02ರಲ್ಲಿ ಕೆ.ಪಿ.ಸಿಂಗ್ ದೇವ್ ಸಮಿತಿ ಹೊಸ ರಾಷ್ಟ್ರೀಯ ನೀತಿ ಅನುಷ್ಠಾನಕ್ಕೆ ಶಿಫಾರಸು ಮಾಡಿತ್ತು. 2003-04ರಲ್ಲಿ ದೈಹಿಕ ಶಿಕ್ಷಣವನ್ನು ಎಲ್ಲ ಶಾಲೆಗಳಲ್ಲಿ ಕಡ್ಡಾಯ ವಿಷಯವನ್ನಾಗಿ ಪರಿಗಣಿಸಲಾಗಿತ್ತು. 2004-05ರಲ್ಲಿ ರಾಜ್ಯ ಸರ್ಕಾರ ತ್ರೖೆಮಾಸಿಕ ಶಿಕ್ಷಣ ಪದ್ಧತಿ ಜಾರಿಗೆ ತಂದು ದೈಹಿಕ ಶಿಕ್ಷಣವನ್ನು ಸಹಪಠ್ಯದಲ್ಲಿ ಸೇರಿಸಿ ಜೀವನ ವಿಜ್ಞಾನದ ಒಂದು ಅವಿಭಾಜ್ಯ ಅಂಗವಾಗಿ ಪರಿಗಣಿಸಿ ಯೋಗ ಶಿಕ್ಷಣಕ್ಕೆ ಮಹತ್ವ ನೀಡಿತ್ತು. 2005ರಲ್ಲಿ ರಾಷ್ಟ್ರೀಯ ಪಠ್ಯ ಚೌಕಟ್ಟು ಹಾಗೂ ಪ್ರೊ.ಎಲ್.ಆರ್.ವೈದ್ಯನಾಥನ್ ವರದಿ ಆಧರಿಸಿ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆ ರಚಿಸಿರುವ ಪಠ್ಯಪುಸ್ತಕವನ್ನು ಪರಿಶೀಲಿಸಿ ಈ ಪಠ್ಯಕ್ರಮಗಳನ್ನು 1-5ನೇ ತರಗತಿ ಮತ್ತು 6-7ನೇ ತರಗತಿ, 8-10ನೇ ತರಗತಿಗೆ ಅಳವಡಿಸಿಕೊಳ್ಳಲು ಆದೇಶ ನೀಡಲಾಗಿತ್ತು.

ಇದರನ್ವಯ ಸರ್ಕಾರ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಪಠ್ಯಪುಸ್ತಕಗಳನ್ನು ವಿತರಿಸಿದೆ. ಆದರೆ ದೈಹಿಕ ಶಿಕ್ಷಣ ಪಠ್ಯ ಬೋಧನೆಗೆ ಶಿಕ್ಷಕರೇ ಇಲ್ಲ. 7 ಸಾವಿರ ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿದ್ದರೆ, ಸುಮಾರು 47 ಸಾವಿರ ಸರ್ಕಾರಿ, ಅನá-ದಾನಿತ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರಿಲ್ಲ. ಹೀಗಾಗಿ ದೈಹಿಕ ಶಿಕ್ಷಣ ಪಠ್ಯ ಬೋಧನೆ ಇಲ್ಲದೆ ವಿದ್ಯಾರ್ಥಿಗಳು ಪರದಾಡá-ವಂತಾಗಿದೆ.

* ಸರ್ಕಾರದ ಆದೇಶದಂತೆ ಪ್ರೌಢಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ದೈಹಿಕ ಶಿಕ್ಷಣ ಪಠ್ಯಪುಸ್ತಕಗಳನ್ನುಪೂರೈಸಲಾಗಿದೆ. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇರುವ ಶಿಕ್ಷಕರೇ ದೈಹಿಕ ಶಿಕ್ಷಣ ಬೋಧಿಸಲು ಸೂಚಿಸಲಾಗಿದೆ.

- ಎನ್.ದೇವರಾಜ್ ಬಿಇಒ

* ದೈಹಿಕ ಶಿಕ್ಷಣ ಪಠ್ಯ ಬೋಧನೆಗೆ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಪ್ರೊ.ಎಲ್.ಆರ್.ವೈದ್ಯನಾಥನ್ ವರದಿಯಂತೆ ಸರ್ಕಾರ ಅಂಗೀಕರಿಸಿರುವ ಹಲವು ಮುಖ್ಯ ಬೇಡಿಕೆಗಳಲ್ಲಿ ಇನ್ನೂ 5 ಬೇಡಿಕೆಗಳನ್ನು ಈಡೇರಿಸಬೇಕಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಸಂಘದಿಂದ ವರದಿ ಸಲ್ಲಿಸಲಾಗುವುದು.

- ಇ.ಶ್ರೀನಿವಾಸಗೌಡ, ರಾಜ್ಯಾಧ್ಯಕ್ಷ, ದೈಹಿಕ ಶಿಕ್ಷಕರ ಸಂಘ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023