Drop


Friday, April 3, 2015

Sir Richard Hadlee medal awarded to Brendon McCullum

ಮೆಕ್ಕಲಂಗೆ ರಿಚರ್ಡ್ ಹ್ಯಾಡ್ಲಿ ಪುರಸ್ಕಾರ
ಆಕ್ಲೆಂಡ್: ನ್ಯೂಜಿಲೆಂಡ್ ತಂಡದ ನಾಯಕ,
ಆಕರ್ಷಕ ಬ್ಯಾಟಿಂಗ್ ಶೈಲಿಯ ಆಟಗಾರ ಬ್ರೆಂಡನ್
ಮೆಕ್ಕಲಂ ಪ್ರತಿಷ್ಠಿತ 'ಸರ್ ರಿಚರ್ಡ್ ಹ್ಯಾಡ್ಲಿ' ಪದಕ
ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತೋರಿದ
ಕ್ರೀಡಾಸ್ಪೂರ್ತಿ ಮತ್ತು ವಿಶ್ವಕಪ್ ಟೂರ್ನಿಯಲ್ಲಿ
ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಕ್ಕಾಗಿ
ಮೆಕ್ಕಲಂರನ್ನು ಈ ಪುರಸ್ಕಾರಕ್ಕೆ ಪರಿಗಣಿಸಲಾಗಿದೆ.
33 ವರ್ಷದ ಮೆಕ್ಕಲಂ ನೇತೃತ್ವದಲ್ಲೇ
ನ್ಯೂಜಿಲೆಂಡ್ ತಂಡ ಮೊಟ್ಟಮೊದಲ
ಬಾರಿಗೆ ವಿಶ್ವಕಪ್ ಕ್ರಿಕೆಟ್​ನಲ್ಲಿ ಫೈನಲ್ ಪ್ರವೇಶಿಸಿ
ಸೋಲನುಭವಿಸಿತ್ತು. ವಿಶ್ವಕಪ್​ನಲ್ಲಿ ಮೆಕ್ಕಲಂ
ಆಡಿದ 9 ಪಂದ್ಯಗಳಲ್ಲಿ 188.50 ಸರಾಸರಿಯಂತೆ
328ರನ್ ಬಾರಿಸಿದ್ದಾರೆ.
ಇದಲ್ಲದೇ ಕೇನ್ ವಿಲಿಯಮ್ಸನ್ ಹಾಗೂ ಟ್ರೆಂಟ್
ಬೌಲ್ಟ್ ಕ್ರಮವಾಗಿ ರೆಡ್​ಪಾತ್ ಕಪ್ ಹಾಗೂ ವಿನ್ಸರ್ ಕಪ್
ಪುಸ್ಕಾರಕ್ಕೆ ಭಾಜನರಾಗಿದ್ದಾರೆ.