Tennis Doubles : Sania and Martina Hingis got first RANK(WTA)

ಟೆನಿಸ್‌: ಡಬಲ್ಸ್‌ ರ್‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ

ಸಾನಿಯಾ ಚಾರಿತ್ರಿಕ ಸಾಧನೆ

Mon, 04/13/2015 - 01:07

ಚಾರ್ಲ್ಸ್‌ಟನ್‌, ಅಮೆರಿಕ (ಪಿಟಿಐ): ಸಾನಿಯಾ ಮಿರ್ಜಾ ಅವರು ಡಬ್ಲ್ಯುಟಿಎ ಡಬಲ್ಸ್‌ ವಿಶ್ವ ರ್‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎಂಬ ಗೌರವ ಅವರಿಗೆ ಒಲಿದಿದೆ.

ಸಾನಿಯಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಜೋಡಿ ಭಾನುವಾರ ಇಲ್ಲಿ ಕೊನೆಗೊಂಡ ಫ್ಯಾಮಿಲಿ ಸರ್ಕಲ್‌ ಕಪ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಯಿತು. ಭಾರತ–ಸ್ವಿಸ್‌ ಜೋಡಿ ಫೈನಲ್‌ನಲ್ಲಿ 6–0, 6–4 ರಲ್ಲಿ ಕ್ಯಾಸೆ ಡೆಲಾಕ್ವ ಮತ್ತು ಡರಿಜಾ ಜುರಾಕ್‌ ವಿರುದ್ಧ ಗೆಲುವು ಪಡೆಯಿತು. ಶಿಸ್ತಿನ ಆಟವಾಡಿದ ಸಾನಿಯಾ– ಹಿಂಗಿಸ್‌ 57 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು.

ಇಲ್ಲಿ ಪ್ರಶಸ್ತಿ ಗೆದ್ದ ಕಾರಣ ಸಾನಿಯಾಗೆ 470 ಪಾಯಿಂಟ್‌ಗಳು ಲಭಿಸಿದವು. ಈ ಮೂಲಕ ತಮ್ಮ ಒಟ್ಟು ಪಾಯಿಂಟ್‌ಗಳನ್ನು 7965ಕ್ಕೆ ಹೆಚ್ಚಿಸಿಕೊಂಡು ರ್‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಈ  ಹಿಂದಿನ ಪಟ್ಟಿಯಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದರು. ಇದೀಗ ಸಾರಾ ಎರಾನಿ (7640) ಮತ್ತು ರಾಬರ್ಟಾ ವಿನ್ಸಿ (764) ಅವರನ್ನು ಹಿಂದಿಕ್ಕಿದರು. ಅಧಿಕೃತ ರ್‍್ಯಾಂಕಿಂಗ್‌ ಪಟ್ಟಿ ಸೋಮವಾರ ಪ್ರಕಟವಾಗಲಿದೆ.

ಹಿಂಗಿಸ್‌ ಮತ್ತು ಸಾನಿಯಾ ಗೆದ್ದ ಸತತ ಮೂರನೇ ಪ್ರಶಸ್ತಿ ಇದು. ಹೋದ ವಾರ ಮಿಯಾಮಿ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಅವರು ಅದಕ್ಕೂ ಮುನ್ನ ಇಂಡಿಯಾನಾವೆಲ್ಸ್‌ ಟೂರ್ನಿ ಯಲ್ಲಿ ಕಿರೀಟ ಮುಡಿಗೇರಿಸಿ ಕೊಂಡಿದ್ದರು. ಸಾನಿಯಾ– ಹಿಂಗಿಸ್‌ ಶನಿವಾರ ನಡೆದ ಸೆಮಿಫೈನಲ್‌ ಹೋರಾಟದಲ್ಲಿ  6–4, 1–6, 10–7ರಲ್ಲಿ ರಷ್ಯಾದ ಅಲ್ಲಾ ಕುದ್ರಯತ್ಸೇವಾ ಮತ್ತು ಅನಸ್ತೇಷಿಯಾ ಪವ್‌ಲ್ಯೂಚೆಂಕೊವಾ ಅವರನ್ನು ಪರಾಭವಗೊಳಿಸಿದ್ದರು.

ಎರಡು ಸೆಟ್‌ಗಳ ಬಳಿಕ ಸಮಬಲ ಕಂಡುಬಂದ ಕಾರಣ ಪಂದ್ಯ 'ಟೈ ಬ್ರೇಕರ್‌'ಗೆ ಸಾಗಿತ್ತು. ರಷ್ಯಾದ ಆಟಗಾರ್ತಿಯರು  4–2 ರ ಮುನ್ನಡೆ ಗಳಿಸಿ ಸುಲಭವಾಗಿ ಪಂದ್ಯ ಗೆಲ್ಲುವ ಸೂಚನೆ ನೀಡಿದ್ದರು. ಬಳಿಕ ಲಯಕ್ಕೆ ಮರಳಿದ ಸಾನಿಯಾ–ಹಿಂಗಿಸ್‌ ಬಲಿಷ್ಠ ಸ್ಮ್ಯಾಷ್‌ ಮತ್ತು ರಿಟರ್ನ್‌ಗಳನ್ನು ಸಿಡಿಸಿ ಜಯ ತಮ್ಮದಾಗಿಸಿಕೊಂಡಿದ್ದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023