World's oldest person Misao Okava died at Tokyo. She was 117 years old.

ಟೋಕಿಯೊ: ವಿಶ್ವದ ಹಿರಿಯಜ್ಜಿ 117 ವರ್ಷದ ಮಿಸಾವೋ ಒಕಾವಾ ನಿಧನ

ಉದಯವಾಣಿ, Apr 01, 2015, 12:34 PM IST

image: http://www.udayavani.com/sites/default/files/styles/article_image/public/images/articles/2015/04/1/Osaka-Pj.jpg?itok=MTNyJ45M

ಟೋಕಿಯೊ: ಇತ್ತೀಚೆಗಷ್ಟೇ 117ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಜಗತ್ತಿನ ಹಿರಿಯಜ್ಜಿ ಎಂಬ ದಾಖಲೆಗೆ ಪಾತ್ರರಾಗಿದ್ದ ಜಪಾನ್ ನ ಮಿಸಾವೋ ಒಕಾವಾ ಬುಧವಾರ ನಸುಕಿನ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಒಸಾಕಾದ ಕಿಮೋನೊ ವರ್ತಕರ ಪೀಳಿಗೆಯಾದ ಮಿಸಾವೋ 1898ರ ಮಾರ್ಚ್ 5ರಂದು ಒಸಾಕಾದಲ್ಲಿ ಜನಿಸಿದ್ದರು. ಮಿಸಾವೋ ಒಕಾವಾ ಅವರು ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಗಿನ್ನೆಸ್‌ ದಾಖಲೆಗೆ 2013ರಲ್ಲಿ ಪಾತ್ರರಾಗಿದ್ದಾರೆ.

ಕಳೆದ 10 ದಿನಗಳಿಂದ ಆಹಾರ ಸೇವನೆಯನ್ನು ಒಸಾಕಾ ತ್ಯಜಿಸಿದ್ದರು ಎಂದು ಆಕೆಯನ್ನು ನೋಡಿಕೊಳ್ಳುತ್ತಿದ್ದ ನರ್ಸಿಂಗ್ ಹೋಮ್ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂದರ್ಭದಲ್ಲಿ ಅಜ್ಜಿಯ ಮೊಮ್ಮಗ ಹಾಗೂ ನರ್ಸಿಂಗ್ ಹೋಮ್ ಅಧಿಕಾರಿಗಳು ಹಾಜರಿದ್ದರು.

ಮಿಸಾವೋ ಒಕಾವಾ 1919ರಲ್ಲಿ ಯೂಕಿಯೋ ಅವರನ್ನು ವಿವಾಹವಾಗಿದ್ದರು. ದಂಪತಿಗಳಿಗೆ ಇಬ್ಬರು ಹೆಣ್ಣು ಮತ್ತು ಓರ್ವ ಗಂಡು ಮಗ. 1931ರಲ್ಲಿ ಒಕಾವಾ ಪತಿ ನಿಧನರಾಗಿದ್ದರು

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023