ಭಾರತ - ಚೀನಾ ನಡುವೆ 10 ಶತಕೋಟಿ ಡಾಲರ್ ಮೌಲ್ಯದ 24 ಒಪ್ಪಂದ.....................:

ಭಾರತ - ಚೀನಾ ನಡುವೆ 10 ಶತಕೋಟಿ ಡಾಲರ್ ಮೌಲ್ಯದ 24 ಒಪ್ಪಂದ  (PSGadyal Teacher)

India - China
ಚೀನಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಜತೆಗೆ ಬರೋಬ್ಬರಿ 1000 ಕೋಟಿ  ಡಾಲರ್​ಗಳಿಗೂ ಹೆಚ್ಚು ಮೌಲ್ಯದ 24 ಒಪ್ಪಂದಗಳಿಗೆ ಸಹಿ ಹಾಕಿದ್ದು ಉಭಯ ದೇಶಗಳ ಸಂಬಂಧಕ್ಕೆ ಭದ್ರ ಬುನಾದಿ ಹಾಕಿದ್ದಾರೆ.

ಭಾರತ ಮತ್ತು ಚೀನಾ ನಡುವೆ ನಡೆದ ಒಪ್ಪಂದಗಳು

# ಚೆಂಗ್ಡು ಮತ್ತು ಚೆನ್ನೈಯಲ್ಲಿ ರಾಜತಾಂತ್ರಿಕ ಕಚೇರಿಗಳ ಸ್ಥಾಪನೆಗೆ ಪ್ರೊಟೊಕಾಲ್.

# ವೃತ್ತಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಸಹಕಾರ ಮತ್ತು ಭಾರತದಲ್ಲಿ ಮಹಾತ್ಮಾ ಗಾಂಧಿ ಕೌಶಲ್ಯಅಭಿವೃದ್ಧಿ ಸಂಸ್ಥೆ ಸ್ಥಾಪನೆ.

# ವಿದೇಶಾಂಗ ಸಚಿವಾಲಯ ಮತ್ತು ಕಮ್ಯೂನಿಸ್ಟ್ ಪಾರ್ಟಿ ಆಫ್ ಚೈನಾ (ಸಿಸಿಸಿಪಿಸಿ) ಮಧ್ಯೆ ಸಹಕಾರ.

# ಚೀನಾ ಮತ್ತು ಭಾರತ ರೈಲ್ವೇಯ ರಾಷ್ಟ್ರೀಯ ರೈಲ್ವೇ ಆಡಳಿತ ಮಧ್ಯೆ ಕಾರ್ಯಯೋಜನೆ.

# ವ್ಯಾಪಾರ ಮಾತುಕತೆಗಳಲ್ಲಿ ಸಹಕಾರಕ್ಕೆ ಸಂಬಂಧಿಸಿದಂತೆ ಸಲಹಾ ವ್ಯವಸ್ಥೆ.

# ಶಿಕ್ಷಣ ವಿನಿಮಯ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ತಿಳಿವಳಿಕೆ ಪತ್ರ.

# ಗಣಿಗಾರಿಕೆ ಮತ್ತು ಖನಿಜಗಳ ಕ್ಷೇತ್ರದಲ್ಲಿ ಸಹಕಾರ.

# ಬಾಹ್ಯಾಕಾಶ ಸಹಕಾರ ರೂಪುರೇಷೆ.

# ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರ ಒಪ್ಪಂದ.

# ಸಮುದ್ರ ವಿಜ್ಞಾನ, ಪರಿಸರ ಬದಲಾವಣೆ ಮತ್ತು ಕ್ರಯೋಸ್ಪಿಯರ್ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ತಿಳಿವಳಿಕೆ ಪತ್ರ.

# ಭಾರತೀಯ ರೇಪ್ಸೀಡ್ ಊಟ ಆಮದು ಕುರಿತು ಸುರಕ್ಷತಾ ನಿಯಂತ್ರಣಗಳು.

# ಸಿಸಿಟಿವಿ ಮತ್ತು ದೂರದರ್ಶನ್ ಮಧ್ಯೆ ಪ್ರಸಾರ ಒಪ್ಪಂದ.

# ಭಾರತ- ಚೀನಾ 'ಥಿಂಕ್ ಟ್ಯಾಂಕ್' ವೇದಿಕೆಗಳ ರಚನೆಗೆ ತಿಳಿವಳಿಕೆ ಪತ್ರ.

# ನೀತಿ ಆಯೋಗ ಮತ್ತು ಅಭಿವೃದ್ಧಿ ಸಂಶೋಧನಾ ಕೇಂದ್ರ ನಡುವೆ ತಿಳಿವಳಿಕೆ ಪತ್ರ.

# ಭೂಕಂಪ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಹಕಾರ ತಿಳಿವಳಿಕೆ ಪತ್ರ.

# ಭೂಗರ್ಭ ವಿಜ್ಞಾನದಲ್ಲಿ ಸಹಕಾರ ಕುರಿತು ತಿಳಿವಳಿಕೆ ಪತ್ರ.

#  ರಾಜ್ಯಗಳು ಮತ್ತು ನಗರಸಭೆಗಳ ಮಧ್ಯೆ ಸಹಕಾರ- ಭಾರತ- ಚೀನಾ ರಾಜ್ಯ ನಾಯಕರ ವೇದಿಕೆ ರಚನೆ.

# ರಾಜ್ಯಗಳು/ ಪ್ರಾಂತೀಯ ನಾಯಕರ ವೇದಿಕೆ ರಚನೆ ಕುರಿತು ತಿಳಿವಳಿಕೆ ಪತ್ರ.

# ಸಿಚುವಾನ್ ಮತ್ತು ಕರ್ನಾಟಕದ ಸಹೋದರಿ ರಾಜ್ಯಗಳ ಸ್ಥಾಪನೆಗೆ ಒಪ್ಪಂದ.

# ಚೆನ್ನೈ ಮತ್ತು ಚೊಂಗ್​ಖಿಂಗ್ ಮಧ್ಯೆ ಸಹೋದರಿ ನಗರಗಳ ಸ್ಥಾಪನೆಗೆ ಒಪ್ಪಂದ.

# ಮಹಾತ್ಮಾ ಗಾಂಧಿ ಅಧ್ಯಯನ ಕೇಂದ್ರ ಸ್ಥಾಪನೆಗಾಗಿ ಐಸಿಸಿಆರ್ ಮತ್ತು ಫುಡಾನ್ ಯುನಿರ್ವಸಿಟಿ ಮಧ್ಯೆ ತಿಳಿವಳಿಕೆ ಪತ್ರ.

# ಹೈದರಾಬಾದ್ ಮತ್ತು ಗಿಂಗ್ಡಾವೊ ಮತ್ತು ಸಹೋದರಿ ನಗರಗಳ ಸ್ಥಾಪನೆಗೆ ಒಪ್ಪಂದ.

# ಔರಂಗಾಬಾದ್ ಮತ್ತು ಡುನಹುವಾಂಗ್ ಸಹೋದರಿ ನಗರಗಳ ಸ್ಥಾಪನೆಗೆ ಒಪ್ಪಂದ.

#  ಕುಮ್ನಿಂಗ್​ನಲ್ಲಿ ಯೋಗ ಕಾಲೇಜ್ ಸ್ಥಾಪನೆಗೆ ತಿಳಿವಳಿಕೆ ಪತ್ರ.

ಹೀಗೆ ಈ 24  ಒಪ್ಪಂದಗಳಿಗೆ ಉಭಯ ದೇಶಗಳ ನಾಯಕರು ಸಹಿ ಹಾಕಿದ್ದು ಭವಿಷ್ಯದಲ್ಲಿ ಭಾರತ ಹಾಗೂ ಚೀನಾ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲು ಪ್ರಧಾನಿ ಮೋದಿ ಮಹತ್ವದ ಹೆಜ್ಜೆ ಇರಿಸಿದ್ದಾರೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023