ಮೇ 12ರಂದು ಎಸೆಸೆಲ್ಸಿ ಫಲಿತಾಂಶ


ಶನಿವಾರ - ಮೇ -09-2015
ಬೆಂಗಳೂರು, ಮೇ 8: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2015ನೆ ಸಾಲಿನ ಎಸ್ಸೆಸೆಲ್ಸಿ ಪರೀಕ್ಷಾ ಫಲಿತಾಂಶ ಮೇ 12 ರಂದು ಪ್ರಕಟಗೊಳ್ಳಲಿದೆ. ಮೇ 12ರಂದು ಮಧ್ಯಾಹ್ನ 12 ಗಂಟೆಯ ಬಳಿಕ ವೆಬ್‌ಸೈಟ್‌ನಲ್ಲಿ ಫಲಿತಾಂಶ ದೊರೆಯಲಿದ್ದು, ಮೇ 13ರಂದು ರಾಜ್ಯದ ಎಲ್ಲ ಪ್ರೌಢಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.
ಶುಕ್ರವಾರ ನಡೆದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸೇರಿದಂತೆ ಅಧಿಕಾರಿಗಳು ಭಾಗವಹಿಸಿ ಫಲಿತಾಂಶ ಪ್ರಕಟನೆಯ ದಿನಾಂಕ ಅಂತಿಮಗೊಳಿಸಿದ್ದಾರೆ. ಮೇ 10ರಂದು ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣಾ ನೀತಿಸಂಹಿತೆ ಜಾರಿಯಾಗುವುದರಿಂದ, ಪ್ರಸಕ್ತ ವರ್ಷದ ಫಲಿತಾಂಶವನ್ನು ಶಿಕ್ಷಣ ಸಚಿವರು ಪ್ರಕಟಿಸುವುದಿಲ್ಲ, ಬದಲಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಕಟಿಸಲಿದ್ದಾರೆ.
2015ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಗೆ 8.57 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. 8.37 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದೇ ಮೊದಲ ಬಾರಿಗೆ ಜಾರಿಗೆ ತಂದ ನಿರಂತರ ಮತ್ತು ಸಮಗ್ರ ವೌಲ್ಯಮಾಪನ(ಸಿಸಿಇ)ಪದ್ಧತಿಯಲ್ಲಿ 7.88 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಹೀಗಾಗಿ ಈ ವಿದ್ಯಾರ್ಥಿಗಳು ಅಂಕಪಟ್ಟಿಯಲ್ಲಿ ಒಟ್ಟು ಅಂಕಗಳ ಜತೆಗೆ ಶ್ರೇಣಿಕೃತ ದರ್ಜೆ ಕೂಡ ಪಡೆಯಲಿದ್ದಾರೆ. ಈ ಪರೀಕ್ಷೆಯಲ್ಲಿ ಅನುತ್ತೀಣರಾದ ವಿದ್ಯಾರ್ಥಿಗಳಿಗೆ ಅವರ ಅಂಕಪಟ್ಟಿಯಲ್ಲಿ ‘ಪೂರ್ಣಗೊಳಿಸಿಲ್ಲ’ ಎಂದು ನಮೂದಿಸಿ ಅಂಕಪಟ್ಟಿ ನೀಡಲಾಗುತ್ತದೆ ಎಂದು ಮಂಡಳಿಯ ನಿರ್ದೇಶಕಿ ಯಶೋದಾ ಬೋಪಣ್ಣ ಸುದ್ದಿಗಾರರಿಗೆ ತಿಳಿಸಿದರು.
ಸಂದೇಶದ ಮೂಲಕ ಫಲಿತಾಂಶ
  ಅಲ್ಲದೆ ವಿದ್ಯಾರ್ಥಿಗಳು 58888 ಸಂಖ್ಯೆಗೆ ಕರೆ ಮಾಡುವ ಮೂಲಕ ತಮ್ಮ ಪರೀಕ್ಷಾ ನೋಂದಣಿ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬಹುದು. ನಂತರ ನಿಮ್ಮ ಮೊಬೈಲ್‌ಗೆ ಫಲಿತಾಂಶದ ಸಂದೇಶ ಬರಲಿದೆ. ಫಲಿತಾಂಶ ಪ್ರಕಟ ವೆಬ್‌ಸೈಟ್: .http://kseeb.kar.nic.in, http://karresults.nic.in, http://www.schools9.com

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023