2, 3 ವರ್ಷಗಳ ಬಳಿಕ ಡಿಡಿಪಿಐ, ಬಿಇಒಗಳು ಮರಳಿ ಶಾಲೆಗೆ!

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇ ಶಕರು (ಡಿಡಿಪಿಐ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಓ) ಇನ್ನು ಅದೇ ಹುದ್ದೆಯಲ್ಲಿ ಠಿಕಾಣಿ ಹೂಡು ವಂತಿಲ್ಲ. ಹೌದು, ಇನ್ನು ಮುಂದೆ ಡಿಡಿಪಿಐಗಳು ಗರಿಷ್ಠ 2

ವರ್ಷ ಮತ್ತು ಬಿಇಓಗಳು ಗರಿಷ್ಠ 3 ವರ್ಷ ಮಾತ್ರ ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕು. ಬಳಿಕ ಬೋಧನಾ ವೃತ್ತಿಗೆ ಮರಳಬೇಕು.ಅಷ್ಟೇ ಅಲ್ಲ, ಡಿಡಿಪಿಐ ಹುದ್ದೆಯಲ್ಲಿ 2 ವರ್ಷ ಮತ್ತು ಬಿಇಓ ಹುದ್ದೆಯಲ್ಲಿ 3 ವರ್ಷಕ್ಕಿಂತ ಹೆಚ್ಚು ಅವಧಿಗೆ ಮುಂದು ವರಿಯಲು ಅವಕಾಶವೇ ಇಲ್ಲ. ಏಕೆಂದರೆ, ಹೊಸ ನಿಯಮಾ ವಳಿಯಲ್ಲಿ ನಿಗದಿಪಡಿಸಿದ ಗರಿಷ್ಠ ಅವಧಿ (ಡಿಡಿಪಿಐಗಳಿಗೆ 2 ವರ್ಷ ಮತ್ತು ಬಿಇಓಗಳಿಗೆ 3 ವರ್ಷ) ಮುಗಿಯುತ್ತಿದ್ದಂತೆ ಗಣಕೀಕೃತ ಕೌನ್ಸೆಲಿಂಗ್‌ ಮೂಲಕ ಅವರು ವರ್ಗಾವಣೆಗೊ ಳ್ಳುತ್ತಾರೆ. ಡಿಡಿಪಿಐ ಅಥವಾ ಬಿಇಓಗಳಾದ ಬಳಿಕ ಬೋಧ ನಾ ವೃತ್ತಿಯ ಸಹವಾಸವೇ ಬೇಡ ಎಂದು ಹೇಳಿ ಸಾಕಷ್ಟು ಕಸರತ್ತು ಮಾಡಿ ಅದೇ ಹುದ್ದೆಯಲ್ಲಿ ಮುಂದುವರಿಯುವ ಪ್ರವೃತ್ತಿಗೆ ಕಡಿವಾಣ ಹಾಕಲು ಮತ್ತು ಅರ್ಹ ಎಲ್ಲಾ ಬೋಧ ಕರಿಗೂ ಈ ಹುದ್ದೆಯಲ್ಲಿ ಅವಕಾಶ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರಡು ಅಧಿಸೂ ಚನೆ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಮೇ 15 ಆಕ್ಷೇಪಣೆ ಸಲ್ಲಿಸಲು ಕಡೆಯ ದಿನವಾಗಿದ್ದು, ಆಕ್ಷೇಪಣೆಗಳನ್ನು ಪರಿಗಣಿಸಿದ ಬಳಿಕ ನಿಗದಿತ ಅವಧಿ ಪೂರೈಸಿದ ಡಿಡಿಪಿಐ ಮತ್ತು ಬಿಇಓಗಳ ವರ್ಗಾವಣೆ ಕುರಿತು ಅಧಿಸೂಚನೆ ಹೊರಡಿಸಲಾಗುವುದು.

ಅದಕ್ಕಾಗಿ ಕರ್ನಾಟಕ ರಾಜ್ಯ ಸಿವಿಲ್‌ ಸರ್ವೀಸಸ್‌ (ಬಿಇಓ, ಡಿಡಿಪಿಐ ಮತ್ತಿತರ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ವರ್ಗಾವಣೆ ನಿಯಂತ್ರಣ) ನಿಯಮಗಳು-2015 ಎಂಬ ನೂತನ ವರ್ಗಾವಣೆ ನೀತಿ ಜಾರಿಗೊಳಿಸಲಾಗುವುದು ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಅದರಂತೆ ಡಿಡಿಪಿಐ ಆಗಿದ್ದವರು 2 ವರ್ಷದ ಸೇವೆ ಬಳಿಕ ಮತ್ತು ಬಿಇಓ ಆಗಿದ್ದವರನ್ನು ಮೂರು ವರ್ಷದ ಸೇವೇ ಬಳಿಕ ಆ ಹುದ್ದೆಗೆ ಸರಿಸಮನಾದ ಡಯಟ್‌ನ ಹಿರಿಯ ಉಪನ್ಯಾಸಕ, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಉಪನ್ಯಾಸಕ, ಡಯಟ್‌ ಪ್ರಾಂಶುಪಾಲ, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ರೀಡರ್‌ ಹುದ್ದೆಗೆ ವರ್ಗಾವಣೆ ಮಾಡಲಾಗುತ್ತದೆ. ಅದೇ ರೀತಿ ಉಪನ್ಯಾಸಕ, ಪ್ರಾಂಶುಪಾಲ ಅಥವಾ ರೀಡರ್‌ ಹುದ್ದೆಯಲ್ಲಿದ್ದವರನ್ನು ಅವರು ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ವರ್ಷ ಮತ್ತು ಹಿರಿತನ ಆಧರಿಸಿ ಡಿಡಿಪಿಐ ಅಥವಾ ಬಿಇಓ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ.

ಸೇವಾ ಹಿರಿತನದ ಆಧಾರದ ಮೇಲೆ ಗಣಕೀಕೃತ ಕೌನ್ಸೆಲಿಂಗ್‌ ಮೂಲಕ ಈ ಹುದ್ದೆಗಳ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ. ಈ ಸಂದರ್ಭದಲ್ಲಿ ಪತಿ-ಪತ್ನಿ ಪ್ರಕರಣ, ಆರೋಗ್ಯ ವಿಚಾರ ಸೇರಿದಂತೆ ವರ್ಗಾವಣೆ ಕುರಿತ ಇತರೆ ನೀತಿಗಳನ್ನು ಅನುಸರಿಸಲಾಗುತ್ತದೆ. ಒಂದು ಹುದ್ದೆಯಲ್ಲಿ ಹೆಚ್ಚು ವರ್ಷ ಸೇವೆ ಸಲ್ಲಿಸಿದವರಿಗೆ ವರ್ಗಾವಣೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ವರ್ಗಾವಣೆ ಪ್ರಾಧಿಕಾರವಾಗಿರುತ್ತಾರೆ.

ಹೊಸ ವರ್ಗಾವಣೆ ನೀತಿ ಏನು ಹೇಳುತ್ತದೆ?: ಬಿಇಓ ಅಥವಾ ಡಿಡಿಪಿಐ ತಮ್ಮ ಜಿಲ್ಲೆಯಲ್ಲೇ ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಾಹಕೇತರ (ಬೋಧಕ) ಹುದ್ದೆಯಲ್ಲಿ ಜ್ಯೇಷ್ಠತೆ ಹೊಂದಿದವರನ್ನು ಕಾರ್ಯನಿರ್ವಾಹಕ ಹುದ್ದೆಗೆ (ಬಿಇಓ ಅಥವಾ ಡಿಡಿಪಿಐ) ಹುದ್ದೆಗೆ ನೇಮಕ ಮಾಡಲಾಗುತ್ತದೆ. ಅದೇ ರೀತಿ ಕಾರ್ಯನಿರ್ವಾಹಕ ಹುದ್ದೆಯಲ್ಲಿ ಹೆಚ್ಚು ವರ್ಷ ಸೇವೆ ಸಲ್ಲಿಸಿದವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯ ನಿರ್ವಾಹಕೇತರ ಹುದ್ದೆಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ, ಶಿಕ್ಷಣ ಇಲಾಖೆಯಲ್ಲಿ ನಡೆಯುವ ಸಾಮೂಹಿಕ ವರ್ಗಾವಣೆ ಸಂದರ್ಭದಲ್ಲಿ ಒಟ್ಟು ಸಿಬ್ಬಂದಿಯ ಶೇ.5ಕ್ಕಿಂತ ಹೆಚ್ಚು ಸಿಬ್ಬಂದಿ ವರ್ಗಾವಣೆ ಮಾಡುವಂತಿಲ್ಲ.

ಶಿಸ್ತು ಕ್ರಮಕ್ಕೆ ಅವಕಾಶ

ಈ ವರ್ಗಾವಣೆ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಉದ್ದೇಶದಿಂದ ನಿಯಮಾವಳಿಯಲ್ಲಿ ಶಿಸ್ತು ಕ್ರಮದ ಅವಕಾಶವನ್ನೂ ಕಲ್ಪಿಸಲಾಗಿದೆ. ಯಾರಾದರೂ ನಿಯಮ ಉಲ್ಲಂ ಸಿ ಹುದ್ದೆಯಲ್ಲಿ ಮುಂದುವರಿದರೆ ಅದನ್ನು ದುರ್ನಡತೆ ಎಂದು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023