2 ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ


- 5844 ಗ್ರಾಮ ಪಂಚಾಯ್ತಿಗಳಿಗೆ 2 ಹಂತದಲ್ಲಿ ಚುನಾವಣೆ
- ಜೂನ್ 5 ರಂದು ಚುನಾವಣೆ ಫಲಿತಾಂಶ ಪ್ರಕಟ
ELECTION
ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯತ್‍ಗಳ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. 2 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 5ರಂದು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದರು.
6073 ಗ್ರಾಮ ಪಂಚಾಯ್ತಿಗಳಲ್ಲಿ 229 ಗ್ರಾಮ ಪಂಚಾಯ್ತಿ ಹೊರತುಪಡಿಸಿ ಉಳಿದ 5,844 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಚುನಾವಣೆ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂದ ಅವರು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶೇ. 50 ರಷ್ಟು ಮಹಿಳಾ ಮೀಸಲಾತಿ ಅನ್ವಯವಾಗಲಿದೆ ಎಂದರು.
ಚುನಾವಣೆ ವೇಳಾ ಪಟ್ಟಿ
ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯ್ತಿಗಳು – 5844
ಎರಡು ಹಂತದಲ್ಲಿ ನಡೆಯಲಿರುವ ಚುನಾವಣೆ
ಮೊದಲ ಹಂತದ ಚುನವಾಣೆ – ಮೇ 29
ಎರಡನೇ ಹಂತದ ಚುನಾವಣೆ – ಜೂನ್ 2
ಚುನಾವಣೆ ಫಲಿತಾಂಶ ಪ್ರಕಟ – ಜೂನ್ 5
ಅಗತ್ಯವಿದ್ದರೆ ಮರುಮತದಾನ – ಮೇ 31
———————
ಮೊದಲ ಹಂತದ ಚುನಾವಣೆ – ಮೇ 29
ಚುನಾವಣೆ ನೀತಿ ಸಂಹಿತೆ ಜಾರಿ – ಮೇ 10
ಅಧಿಸೂಚನೆ ಪ್ರಕಟ – ಮೇ 11
ನಾಮಪತ್ರ ಸಲ್ಲಿಕೆ ಕೊನೆ ದಿನ – ಮೇ 18
ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ – ಮೇ 21
———————
ಎರಡನೇ ಹಂತದ ಚುನಾವಣೆ – ಜೂನ್ 2
ಅಧಿಸೂಚನೆ ಪ್ರಕಟ – ಮೇ 15
ನಾಮಪತ್ರ ಸಲ್ಲಿಕೆ ಕೊನೆ ದಿನ – ಮೇ 22
ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ – ಮೇ 25
————
ಮೊದಲ ಹಂತದ ಚುನಾವಣೆ ಎಲ್ಲೆಲ್ಲಿ?
ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಉಡುಪಿ, ಬೆಳಗಾವಿ, ವಿಜಯಪುರ, ಹಾವೇರಿ, ಬಾಗಲಕೋಟೆ
ಉತ್ತರ ಕನ್ನಡ, ಧಾರವಾಡ, ಗದಗ
ಎರಡನೇ ಹಂತದ ಚುನಾವಣೆ ಎಲ್ಲೆಲ್ಲಿ?
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೀದರ್, ಬಳ್ಳಾರಿ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023