​ಬ್ರಿಟನ್ ಎಲೆಕ್ಷನ್;20 ವರ್ಷದ ವಿದ್ಯಾರ್ಥಿನಿ (ಮೇರಿ ಬ್ಲ್ಯಾಕ್)ಈಗ ಬ್ರಿಟನ್ ಯುವ ಸಂಸದೆ


ಲಂಡನ್: ಬ್ರಿಟನ್ ಸಂಸತ್ ನ 650 ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದಿದ್ದು,ಶುಕ್ರವಾರ ಮತಎಣಿಕೆ ಕಾರ್ಯ ನಡೆಯುತ್ತಿದ್ದು, ಡೇವಿಡ್ ಕ್ಯಾಮರಾನ್ ನೇತೃತ್ವದ ಆಡಳಿತಾರೂಢ ಕರ್ನ್ಸವೇಟಿವ್ ಮತ್ತು ಲೇಬರ್ ಪಕ್ಷದ ನಡುವೆ ಜಿದ್ದಾಜಿದ್ದಿನ ಹಣಾಹಣಿ ನಡೆದಿದೆ. ಫಲಿತಾಂಶದಲ್ಲಿ ಸ್ಕಾಟಿಶ್ ನ್ಯಾಷನಲ್ ಪಾರ್ಟಿಯಿಂದ ಸ್ಪರ್ಧಿಸಿದ್ದ 20ರ ಹರೆಯದ ವಿದ್ಯಾರ್ಥಿನಿ ಜಯಭೇರಿ ಗಳಿಸುವ ಮೂಲಕ 300 ವರ್ಷಗಳ ನಂತರ ಬ್ರಿಟನ್ ಅತಿ ಕಿರಿಯ ಸಂಸದೆಯನ್ನು ಆಯ್ಕೆ ಮಾಡಿದಂತಾಗಿದೆ.
ಸ್ಕಾಟಿಶ್ ನ್ಯಾಷನಲ್ ಪಾರ್ಟಿ(ಎಸ್ ಎನ್ ಪಿ)ಯಿಂದ ಸ್ಪರ್ಧಿಸಿದ್ದ  ಮೈರಿ ಬ್ಲ್ಯಾಕ್ (20ವರ್ಷ) ತನ್ನ ಪ್ರತಿಸ್ಪರ್ಧಿ ಲೇಬರ್ ಪಕ್ಷದ ಡೋಗ್ಲಾಸ್ ಅಲೆಗ್ಸಾಂಡರ್ ಅವರನ್ನು ಸೋಲಿಸಿದ್ದಾರೆ. ಡೋಗ್ಲಾಸ್ ಅವರನ್ನು ಬ್ಲ್ಯಾಕ್ 6 ಸಾವಿರ ಮತಗಳ ಅಂತರದಿಂದ ಪರಾಜಯಗೊಳಿಸಿದ್ದಾರೆ.
ಲೇಬರ್ ಪಕ್ಷದ ಅತ್ಯಂತ ಹಿರಿಯ ಮುಖಂಡ, ಪಕ್ಷದ ಪ್ರಚಾರ ಸಮಿತಿ ಮುಖ್ಯಸ್ಥ ಡೋಗ್ಲಾಸ್ ಕಿರಿಯ ವಯಸ್ಸಿನ ವಿದ್ಯಾರ್ಥಿ ಎದುರು ಸೋಲನ್ನನುಭವಿಸಿರುವುದು ತೀವ್ರ ಮುಖಭಂಗ ಅನುಭವಿಸುವಂತಾಗಿದೆ.
ಮಿಸ್ ಬ್ಲ್ಯಾಕ್ ಇದೀಗ ಬ್ರಿಟನ್ ನ ಅತ್ಯಂತ ಕಿರಿಯ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1667ರಲ್ಲಿ 13 ವರ್ಷದ ಕ್ರಿಸ್ಟೋಪರ್ ಮೋಕ್ಟನ್ ನಲ್ಲಿ ಜಯಗಳಿಸಿದ್ದರು. ಇದೀಗ 300 ವರ್ಷಗಳ ಬಳಿಕ ಬ್ರಿಟನ್ ಸಂಸತ್ ಕಿರಿಯ ಸಂಸದೆಯನ್ನು ಪಡೆದಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023