Drop


Friday, May 15, 2015

24 Agreements Signed India and China | 24 ಮಹತ್ವದ ಒಡಂಬಡಿಕೆಗೆ ಸಹಿ ಹಾಕಿದ ಭಾರತ-ಚೀನಾ | Kannadaprabha.com

bit.ly/1HgZ7bt

24 ಮಹತ್ವದ ಒಪ್ಪಂದಗಳಿಗೆ ಭಾರತ-ಚೀನಾ ಸಹಿ
Published: 15 May 2015 10:05 AM IST | Updated:
15 May 2015 10:22 AM IST
ಉಭಯ ರಾಷ್ಟ್ರಗಳ ನಾಯಕರ ಮಾತುಕತೆ
ಬೀಜಿಂಗ್: ಮೂರು ದಿನಗಳ ಚೀನಾ
ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ
ಮೋದಿ ಹಾಗೂ ಚೀನಾ ಪ್ರಧಾನಿ
ಕೆಖಿಯಾಂಗ್ ಅವರೊಂದಿಗೆ 10 ಬಿಲಿಯನ್ ಡಾಲರ್
ಮೌಲ್ಯದ ಮಹತ್ವದ 24 ಒಪ್ಪಂದಗಳಿಗೆ ಸಹಿ
ಹಾಕಿದ್ದಾರೆ.
ಚೀನಾ ಪ್ರಧಾನಿ ಲಿ ಕೆಖಿಯಾಂಗ್ ಅವರೊಂದಿಗೆ
ಪ್ರಧಾನಿ ಮೋದಿ 50 ನಿಮಿಷಗಳ ಕಾಲ ಮಹತ್ವದ
ಮಾತುಕತೆ ನಡೆಸಿದ ಬಳಿಕ ಉಭಯ ನಾಯಕರು 24
ಒಡಂಬಡಿಕೆಗಳಿಗೆ ಸಹಿ ಹಾಕಿದ್ದಾರೆ.
ಪ್ರಮುಖ ಒಡಂಬಡಿಕೆಗಳ ಪಟ್ಟಿ
ಕೌಶಲ್ಯಾಭಿವೃದ್ಧಿ, ವ್ಯಾಪಾರದಲ್ಲಿ ಪರಸ್ಪರ
ಸಹಕಾರ, ಶಿಕ್ಷಣ ವಲಯದಲ್ಲಿ ಹೊಂದಾಣಿಕೆ,
ವಿಜ್ಞಾನ-ತಂತ್ರಜ್ಞಾನದಲ್ಲಿ ಮಾಹಿತಿ ಹಂಚಿಕೆ,
ರೇಲ್ವೆ ವಲಯದಲ್ಲಿ ತಂತ್ರಜ್ಞಾನ ಹಂಚಿಕೆ,
ರೇಲ್ವೆ ವಲಯದಲ್ಲಿ ಪರಸ್ಪರ ಸಹಕಾರ
ಒಡಂಬಡಿಕೆಗಳಿಗೆ ಭಾರತ-ಚೀನಾ ಸಹಿ ಹಾಕಿವೆ.
ಚೆಂಗ್ಡು, ಚೆನ್ನೈ ನಗರಗಳ ಅಭಿವೃದ್ಧಿಗೆ ವಿಶೇಷ
ಒಡಂಬಡಿಕೆ, ಸಿಸಿಟಿವಿ, ದೂರದರ್ಶನ ಚಾನೆಲ್ ನಲ್ಲಿ
ಸುದ್ದಿ ಬಿತ್ತರ, ಉಭಯ ದೇಶಗಳ ಸುದ್ದಿ ಬಿತ್ತರಿಸುವ
ಸಂಬಂಧ ಒಡಂಬಡಿಕೆ, ಪ್ರವಾಸೋದ್ಯಮ
ವಲಯದಲ್ಲಿ ಪರಸ್ಪರ ಸಹಕಾರ, ಭೂವಿಜ್ಞಾನ
ತಂತ್ರಜ್ಞಾನ, ಚೀನಾ ದೇಶದ ಅಭಿವೃದ್ಧಿ
ಸಂಶೋಧನಾ ಕೇಂದ್ರ ಸೇರಿದಂತೆ
ಭಾರತದ ನೀತಿ ಆಯೋಗದ ನಡುವೆ ಮಹತ್ವದ
ಒಡಂಬಡಿಕೆ ಸಹಿ ಹಾಕಲಾಗಿದೆ.