Drop


Monday, May 18, 2015

42 ವರ್ಷಗಳಿಂದ ಕೋಮಾದಲ್ಲಿದ್ದ ನರ್ಸ್‌ ಅರುಣಾ ಶಾನ್‌ಬಾಗ್‌ ಸಾವು

42 ವರ್ಷಗಳಿಂದ ಕೋಮಾದಲ್ಲಿದ್ದ ನರ್ಸ್‌ ಅರುಣಾ ಶಾನ್‌ಬಾಗ್‌ ಸಾವು
ಸೋಮವಾರ - ಮೇ -18-2015
ಮುಂಬೈ, ಮೇ 18: ಕಳೆದ 1973ರಲ್ಲಿ ಆಸ್ಪತ್ರೆಯ ಸಿಬ್ಬಂದಿಯಿಂದ ಅತ್ಯಾಚಾರಕ್ಕೊಳಗಾಗಿ 42 ವರ್ಷಗಳಿಂದ ಕೋಮಸ್ಥಿತಿಯಲ್ಲಿದ್ದ ನರ್ಸ್‌ ಅರುಣಾ ಶಾನ್‌ಬಾಗ್‌ ಇಂದು ಬೆಳಗ್ಗಿನ ಜಾವ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕರ್ನಾಟಕದ ಹೊನ್ನಾವರ ಮೂಲದ 68 ವರ್ಷ ವಯಸ್ಸಿನ ಶಾನಭಾಗ್‌ಳನ್ನು 42 ವರ್ಷಗಳ ಹಿಂದೆ ಆಸ್ಪತ್ರೆಯಲ್ಲಿ ವಾರ್ಡ್‌ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸೋಹನ್‌ಲಾಲ್ ಭಾರ್ತಾ ವಾಲ್ಮಿಕಿ ಎಂಬಾತ ಈಕೆಯ ಕೊರಳಿಗೆ ನಾಯಿಗೆ ಹಾಕುವ ಚೈನ್‌ನ್ನು ಹಾಕಿ ಅತ್ಯಾಚಾರವೆಸಗಿದ್ದರಿಂದ ಆಕೆ ಆಘಾತಗೊಂಡು ಕೋಮಾಕ್ಕೆ ಜಾರಿದ್ದಳು.

ಜೀವನ್ಮರಣ ಹೋರಾಟದಲ್ಲಿದ್ದ ಈಕೆಯನ್ನು ಚಿಕಿತ್ಸೆಗಾಗಿ ಮುಂಬೈನ ಕೆಇಎಂ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿಡಲಾಗಿದ್ದು, ಇಂದು ಬೆಳಗ್ಗಿನ ಜಾವ ಅರುಣಾ ಶಾನ್‌ಬಾಗ್‌ ಸಾವನ್ನಪ್ಪಿದ್ದಾರೆ.