Drop


Wednesday, May 13, 2015

4 ರಾಜ್ಯಗಳಿಗೆ ಹೊಸ ರಾಜ್ಯಪಾಲರು

4 ರಾಜ್ಯಗಳಿಗೆ ಹೊಸ ರಾಜ್ಯಪಾಲರು
ಪ್ರಜಾವಾಣಿ ವಾರ್ತೆ
Wed, 05/13/2015 - 01:00
ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಜಾರ್ಖಂಡ್, ಅರುಣಾಚಲಪ್ರದೇಶ, ತ್ರಿಪುರಾ ಮತ್ತು ಮೇಘಾಲಯಕ್ಕೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ

ಬುಡಕಟ್ಟು ಜನಾಂಗದ ನಾಯಕಿ ದ್ರೌಪದಿ ಮುರ್ಮು ಅವರನ್ನು  ಜಾರ್ಖಂಡ್, ಅಸ್ಸಾಂನ ಮಾಜಿ ಮುಖ್ಯ ಕಾರ್ಯದರ್ಶಿ  ಪಿ. ರಾಜ್‌ಖೋವಾ ಅವರನ್ನು ಅರುಣಾಚಲಪ್ರದೆಶ, ಬಿಜೆಪಿಯ ಮಾಜಿ ಕಾರ್ಯದರ್ಶಿ ತಥಾಗಥಾ ರಾಯ್ ಅವರನ್ನು ತ್ರಿಪುರಾ ಹಾಗೂ ವಿ.
ಷಣ್ಮಖನಾಥನ್ ಅವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.

ವರ್ಗಾವಣೆ: ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಅವರು ಅರುಣಾಚಲಪ್ರದೇಶ ರಾಜ್ಯಪಾಲ ಲೆ.ಜ. ನಿರ್ಭಯ್ ಶರ್ಮಾ ಅವರನ್ನು ಮಿಜೋರಾಂಗೆ ಮತ್ತು ಜಾರ್ಖಂಡ್ ರಾಜ್ಯಪಾಲ ಡಾ. ಸೈಯದ್ ಅಹಮದ್ ಅವರನ್ನು ಮಣಿಪುರಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಇಬ್ಬರನ್ನು ಹಿಂದಿನ ಎನ್‌ಡಿಎ ಸರ್ಕಾರದ ಕಾಲದಲ್ಲಿ ನೇಮಕ ಮಾಡಲಾಗಿತ್ತು.

ನಾಲ್ಕು ರಾಜ್ಯಗಳಿಗೆ ರಾಜ್ಯಪಾಲರ ನೇಮಕವಾದರೂ ಬಿಹಾರ ಮತ್ತು ಅಸ್ಸಾಂ ರಾಜ್ಯಪಾಲರ ನೇಮಕವಾಗಿಲ್ಲ. ಈ ಎರಡೂ ರಾಜ್ಯಗಳಿಗೆ ಶೀಘ್ರ ರಾಜ್ಯಪಾಲರ ನೇಮಕವಾಗುವ ನಿರೀಕ್ಷೆ ಇದೆ.