ಇಂದು ಶತಮಾನದ ಬಾಕ್ಸಿಂಗ್ ಕದನ ಗೆದ್ದವರಿಗೆ 900 ಕೋಟಿ ಬಹುಮಾನ, ಸೋತವರಿಗೂ 600 ಕೋಟಿ ಬಹುಮಾನ..!

ಲಾಸ್‌ ವೇಗಾಸ್‌: ಶತಮಾನದ ಬಾಕ್ಸಿಂಗ್ ಕದನವೆಂದೇ ಬಿಂಬಿಸಲಾಗುತ್ತಿರುವ ಮ್ಯಾನಿ ಪ್ಯಾಕ್ವಿಯೋ ಮತ್ತು ಫ್ಲಾಯ್ಡ ಮೇವೆದರ್‌ ನಡುವಿನ ಬಾಕ್ಸಿಂಗ್ ಕದನ ಶನಿವಾರ ತಡ ರಾತ್ರಿಯಲ್ಲಿ ಆರಂಭಗೊಳ್ಳಲಿದೆ.Published: 02 May 2015 08:25 PM ISTಮ್ಯಾನಿ ಪ್ಯಾಕ್ವಿಯೋ vs ಫ್ಲಾಯ್ಡ ಮೇವೆದರ್‌ (ಸಂಗ್ರಹ ಚಿತ್ರ)



ಎಲ್ಲ ಕ್ರೀಡೆಗಳಂತೆಯೇ ಈ ಬಾಕ್ಸಿಂಗ್ ಪಂದ್ಯ ಕೂಡ ಎಂದು ನೀವು ಎಣಿಸಿದರೆ ನಿಮ್ಮ ಊಹೆ ತಪ್ಪು. ಇದು ಶತಮಾನದ ಬಾಕ್ಸಿಂಗ್ ಕದನ. ಇಲ್ಲಿ ಗೆದ್ದವರಿಗೆ ಬರೊಬ್ಬರಿ 900 ಕೋಟಿ ರು. ಮೌಲ್ಯದ ಬಹುಮಾನ ದೊರೆಯಲಿದೆ. ಇನ್ನೊಂದು ಅಚ್ಚರಿಯ ವಿಷಯವೆಂದರೆ ಈ ಪಂದ್ಯದಲ್ಲಿ ಸೋತವರಿಗೂ ಬಂಪರ್ ಬಹುಮಾನವಿದ್ದು, ಸೋತವರಿಗೆ 600 ಕೋಟಿ ಮೌಲ್ಯದ ಬಹುಮಾನವನ್ನು ವಿತರಿಸಲಾಗುತ್ತದೆ.

ಭಾರತೀಯ ಕಾಲಮಾನ ಶನಿವಾರ ಮಧ್ಯರಾತ್ರಿ 2.30ಕ್ಕೆ ಆರಂಭವಾಗಲಿದ್ದು, ಅಂತಿಮ ಫ‌ಲಿತಾಂಶ ಬರುವಾಗ ಭಾನುವಾರ ಬೆಳಗ್ಗೆ 4 ಗಂಟೆಯಾಗಿರುತ್ತದೆ. ವಿಶ್ವಾದ್ಯಂತ ಈ ಹೋರಾಟವನ್ನು ಸ್ಕೈಸ್ಪೋರ್ಟ್ಸ್ ನೇರಪ್ರಸಾರ ಮಾಡಲಿದೆ. ಈ ಶತಮಾನದ ಶ್ರೇಷ್ಠ ಬಾಕ್ಸರ್‌ ಅನ್ನು ಈ ಸ್ಪರ್ಧೆ ಮೂಲಕ ನಿರ್ಧರಿಸಲಾಗುತ್ತಿದ್ದು, ಈಗಾಗಲೇ ಲಕ್ಷಾಂತರ ಅಭಿಮಾನಿ ಗಳು ಟಿಕೆಟ್‌ ಖರೀದಿಸಿ ಸ್ಪರ್ಧೆ ನೋಡಲು ಕಾದು ಕುಳಿತಿದ್ದಾರೆ.

ವಿಶ್ವಾದ್ಯಂತ ಟಿವಿಯಲ್ಲೂ ಸ್ಪರ್ಧೆ ನೋಡಲು ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ಇನ್ನು ಬೆಟ್ಟಿಂಗ್ ನಲ್ಲಿಯೂ ಕದನ ಇತಿಹಾಸ ಬರೆದಿದ್ದು, ಮೂಲಗಳ ಪ್ರಕಾರ ಇದೊಂದು ಸ್ಪರ್ಧೆ ಮೇಲೆ ವಿಶ್ವಾದ್ಯಂತ ಸುಮಾರು 1400 ಕೋಟಿ ರುಪಾಯಿಗಳ ಬೆಟ್ಟಿಂಗ್ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಒಟ್ಟಾರೆ ಈ ಶತಮಾನದ ಶ್ರೇಷ್ಠ ಬಾಕ್ಸರ್ ಯಾರು ಎಂಬುದು ಇನ್ನೇನು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.

ಶತಮಾನದ ಬಾಕ್ಸಿಂಗ್ ಕದನದ ವಿಶೇಷತೆಗಳು
ಬಾಕ್ಸಿಂಗ್‌ ಕದನದಲ್ಲಿ ಒಟ್ಟು 12 ಸುತ್ತುಗಳಿರುತ್ತವೆ.
ಮೊದಲ ಬಹುಮಾನದ ಮೊತ್ತ- „ 900 ಕೋಟಿ ರು.
ದ್ವಿತೀಯ ಬಹುಮಾನದ ಮೊತ್ತ „ 600 ಕೋಟಿ ರು.
ಸ್ಪರ್ಧೆಯಿಂದ ಒಟ್ಟು ಆದಾಯದ ನಿರೀಕ್ಷೆ „ 2400 ಕೋಟಿ ರು.
ಸ್ಪರ್ಧೆ ನಡೆಯುವ ಸ್ಥಳದಲ್ಲಿ ಪಂದ್ಯ ವೀಕ್ಷಿಸಲು ಆಸನವೊಂದರ ಗರಿಷ್ಠ ಬೆಲೆ „ 6 ಲಕ್ಷ ರು.
ಸ್ಪರ್ಧೆ ನಡೆಯುವ ಸ್ಥಳದಲ್ಲಿ ಪಂದ್ಯ ವೀಕ್ಷಿಸಲು ಆಸನವೊಂದರ ಕನಿಷ್ಠ ಬೆಲೆ „ 90 ಸಾವಿರ ರು.
ಮೇವೆದರ್‌ ಗೆದ್ದ ಬಾಕ್ಸಿಂಗ್‌ ಪಂದ್ಯಗಳ ಸಂಖ್ಯೆ „47
ಪ್ಯಾಕ್ವಿಯೋ ಗೆದ್ದ ಬಾಕ್ಸಿಂಗ್‌ ಪಂದ್ಯಗಳ ಸಂಖ್ಯೆ „ 57
ವಿಜೇತರಿಗೆ ಕಾಯುತ್ತಿರುವ ಪ್ರಶಸ್ತಿ ಸಂಖ್ಯೆ „3
(ಡಬ್ಲ್ಯುಬಿಎ, ಡಬ್ಲ್ಯುಬಿಸಿ, ಡಬ್ಲ್ಯುಬಿಒ)
ಸ್ಕೈನ್ಪೋರ್ಟ್ಸ್ ನಲ್ಲಿ „ ನೇರಪ್ರಸಾರ
„ಸಮಯ: ಭಾರತೀಯ ಕಾಲಮಾನ ಶನಿವಾರ ತಡರಾತ್ರಿ 2.30ಕ್ಕೆ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023