Drop


Thursday, May 28, 2015

9999- ನಂ.1 ಫ್ಯಾನ್ಸಿ ನಂಬರ್ ಆಗಿ ಘೋಷಣೆ:-RTO


Posted by: Mahesh
| Thu, May 28, 2015, 13:40 [IST]
ಬೆಂಗಳೂರು, ಮೇ.28: ವಾಹನಗಳಿಗೆ ಫ್ಯಾನ್ಸಿ
ನಂಬರ್ ಪಡೆದುಕೊಳ್ಳುವ ಹುಚ್ಚು ಹಲವು
ವಾಹನ ಮಾಲೀಕರಿಗಿರುತ್ತದೆ. ಅದರೆ, ಫ್ಯಾನ್ಸಿ
ನಂಬರ್ ಬೇಕೆಂದರೆ ಬಿಡ್ಡಿಂಗ್ ನಲ್ಲಿ
ಪಾಲ್ಗೊಳ್ಳಬೇಕು. ಈ ರೀತಿ ಬಿಡ್ಡಿಂಗ್
ನಡೆದು '9999' ಸಂಖ್ಯೆಗೆ ಅತಿ ಹೆಚ್ಚಿನ ಬಿಡ್ಡಿಂಗ್,
ಬೇಡಿಕೆ ಬಂದಿದೆ ಎಂದು ಆರ್ ಟಿಒ ಪ್ರಕಟಿಸಿದೆ.
ಸುಮಾರು 22 ಜನ ಬಿಡ್ಡರ್ ಗಳು ಸುಮಾರು
50ಕ್ಕೂ ಅಧಿಕ ಫ್ಯಾನ್ಸಿ ನಂಬರ್ ಗಳ ಮೇಲೆ ಬಿಡ್
ಮಾಡಿದ್ದರು. ಡಲ್ ಹೊಡೆಯುತ್ತಿದ್ದ ಬಿಡ್
ಪ್ರಕ್ರಿಯೆಗೆ ಸಕತ್ ಕಿಕ್ ಸಿಕ್ಕಿದ್ದು ಮಾತ್ರ 9999 ಎಂಬ
ಸಂಖ್ಯೆ ಬಿಡ್ಡಿಂಗ್ ಗೆ ಬಂದಾಗ ಮಾತ್ರ.

ಬಿಡ್ಡಿಂಗ್ ಕೊನೆಗೆ 1.30 ಲಕ್ಷರು ಪ್ಲಸ್ 75,000 ರು
(ಕನಿಷ್ಠ ಬಿಡ್ ಮೊತ್ತ) ನೀಡಿ ತಮ್ಮ ವಾಹನಕ್ಕೆ
ನೋಂದಣಿ ಸಂಖ್ಯೆ ( '9999' ಸಂಖ್ಯೆ
ಪಡೆದುಕೊಂಡಿದ್ದಾರೆ. ಐಷಾರಾಮಿ ಎಸ್ ಯುವಿ
ವಾಹನಕ್ಕೆ ಈ ಸಂಖ್ಯೆಯನ್ನು ಇಡುವುದಾಗಿ
ಸಂಖ್ಯೆ ಗೆದ್ದ ನಟರಾಜ್ ನಗರಹಳ್ಳಿ ಹೇಳಿದ್ದಾರೆ.
ಇಂದಿರಾನಗರ ಪ್ರಾದೇಶಿಕ ವಾಹನ
ನೋಂದಣಿ ಕಚೇರಿಯಲ್ಲಿ ಅತಿ ಹೆಚ್ಚು ಬೆಲೆ
ಮಾರಾಟವಾದ ಸಂಖ್ಯೆ (KA 03 9999)
ಒಟ್ಟಾರೆ 11 ಫ್ಯಾನ್ಸಿ ಸಂಖ್ಯೆಗಳು 1.80 ಲಕ್ಷ
ರು ಮೌಲ್ಯಕ್ಕೆ ಮಾರಾಟವಾಗಿದೆ. ಕನಿಷ್ಠ ಬಿಡ್ಡಿಂಗ್
ಬೆಲೆ 75,000 ರು ಪಾವತಿಸಿ ಬಿಡ್ಡಿಂಗ್ ಕೂಗುವ
ಅವಕಾಶ ನೀಡಲಾಗಿತ್ತು. ಹರಾಜಿನ ನಂತರ
ಸರ್ಕಾರಕ್ಕೆ ಸುಮಾರು 10.05 ಲಕ್ಷ ರು ಆದಾಯ
ಬಂದಿದೆ.
ಇದಲ್ಲದೆ, '0999', '0045', '0099', '0007', '5555,
'0666' ಮುಂತಾದ ಸಂಖ್ಯೆಗಳು 1,000 ರು
ಪ್ಲಸ್ ಬಿಡ್ಡಿಂಗ್ ಕನಿಷ್ಠ ಮೊತ್ತ 75,000 ರು
ಮೊತ್ತಕ್ಕೆ ಹರಾಜಾಗಿದೆ. 0001 ಸಂಖ್ಯೆ 41,000+
75,000 ರು ಗೆ ಹೋಗಿದೆ. ಮುಂದಿನ ಹರಾಜು
ನಡೆಸಲು ಇನ್ನೂ ಆರು ತಿಂಗಳು
ಕಾಯಬೇಕು. 0001 ರಿಂದ 9999 ತನಕದ
ಸಂಖ್ಯೆಗಳು ಲಭ್ಯವಿರುತ್ತದೆ.