Drop


Thursday, May 14, 2015

Achal Kumar Jyoti takes over as new Election Commissioner (tenure 3 yrs)

ನೂತನ ಚುನಾವಣಾ ಆಯುಕ್ತರಾಗಿ ಜ್ಯೋತಿ

ನವದೆಹಲಿ: ಗುಜರಾತಿನ ಮಾಜಿ ಮುಖ್ಯ ಕಾರ್ಯದರ್ಶಿ ಅಚಲ್ ಕುಮಾರ್ ಜ್ಯೋತಿ ಅವರು ನೂತನ ಚುನಾವಣಾ ಆಯುಕ್ತರಾಗಿ ಬುಧವಾರ ಅಧಿಕಾರ ವಹಿಸಿಕೊಂಡರು. ಇದರೊಂದಿಗೆ ತ್ರಿಸದಸ್ಯ ಚುನಾವಣಾ ಆಯೋಗದಲ್ಲಿ ಖಾಲಿಬಿದ್ದಿದ್ದ ಆಯುಕ್ತರ ಎರಡು ಹುದ್ದೆಗಳ ಪೈಕಿ ಒಂದು ಭರ್ತಿಯಾದಂತಾಗಿದೆ.

ಜ್ಯೋತಿ ಅವರು ಚುನಾವಣಾ ಆಯೋಗದಲ್ಲಿ ಈದಿನ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

1975ರ ತಂಡದ ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್) ಅಧಿಕಾರಿಯಾಗಿರುವ ಜ್ಯೋತಿ 2013ರ ಜನವರಿಯಲ್ಲಿ ಗುಜರಾತಿನ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಅತ್ಯುನ್ನತ ಅಧಿಕಾರಿಯ ಹುದ್ದೆಯಲ್ಲಿ ಅವರು ಸೇವೆ ಸಲ್ಲಿಸಿದ್ದರು. ರಾಜ್ಯ ಜಾಗೃತಾ ಕಮೀಷನರ್ ಆಗಿ ಸೇವೆ ಸೇವೆ ಸಲ್ಲಿಸಿದ್ದ ಜ್ಯೋತಿ 1999ರಿಂದ 2004ರವರೆಗೆ ಕಾಂಡ್ಲಾ ಬಂದರು ಟ್ರಸ್ಟ್ ನ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಸರ್ದಾರ್ ಸರೋವರ ನರ್ಮದಾ ನಿಗಮ ಲಿಮಿಟೆಡ್ ನ ಆಡಳಿತ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.