ಕನ್ನಡ ಸರ್ಟಿಫಿಕೇಟ್ ಕೋರ್ಸ ಮೇಘಾ ಭಟ್‌ ಪ್ರಥಮ ಸ್ಥಾನ

   

ಉದಯವಾಣಿ, May 01, 2015,



ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿದ್ದ 2014-2015 ನೇ ಶೈಕ್ಷಣಿಕ ಸಾಲಿನ ಕನ್ನಡ ಸರ್ಟಿಫಿಕೇಟ್‌ ಕೋರ್ಸ್‌ ಪರೀಕ್ಷೆಯಲ್ಲಿ ಮೇಘಾ ಭಟ್‌ ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರತಿವರ್ಷ ಮುಂಬಯಿಯಲ್ಲಿ ಹುಟ್ಟಿ ಬೆಳೆದ ಕನ್ನಡಿಗರಿಗೆ ಮತ್ತು ಕನ್ನಡೇತರರಿಗೆ ಕನ್ನಡ ಸರ್ಟಿಫಿಕೇಟ್‌ ಕೋರ್ಸ್‌ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗವು ನಡೆಸುತ್ತಾ ಬಂದಿದೆ. ಈ ವರ್ಷ ಸರ್ಟಿಫಿಕೇಟ್‌ ಕೋರ್ಸ್‌ನಲ್ಲಿ ಮುಂಬಯಿಯ ವಿವಿಧ ಶಾಖೆಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ಪರೀಕ್ಷೆಯಲ್ಲಿ ಪನ್ವೇಲ್‌ ವಿಭಾಗದ ಮೇಘಾ ಭಟ್‌ ಅತೀ ಹೆಚ್ಚು ಅಂಕಗಳನ್ನು ಪಡೆದು ಪ್ರಥಮ ಸ್ಥಾನಗಳಿಸಿದ್ದಾರೆ.

ಮೇಘಾ ಭಟ್‌ ಅವರು ಪ್ರದೀಪ್‌ ಕುಮಾರ್‌ ಭಟ್‌ ಮತ್ತು ವಾಣಿ ಸರಸ್ವತಿ ದಂಪತಿಯ ಪುತ್ರಿ. ಅವರು ಸಂಗೀತ ಮತ್ತು ನೃತ್ಯದಲ್ಲೂ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿರುವ ಅವರು ಕನ್ನಡ ಭಾಷೆಯ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿದ್ದಾರೆ. ಪನ್ವೇಲ್‌ ಕನ್ನಡ ಕಲಿಕಾ ಕೇಂದ್ರವನ್ನು ಸಂಗೀತ ವಿದುಷಿ ಶ್ಯಾಮಲಾ ಪ್ರಕಾಶ್‌ ಅವರು ನಡೆಸುತ್ತಿದ್ದಾರೆ. ಮೇಘಾ ಭಟ್‌ ಅವರ ಸಾಧನೆಯನ್ನು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಅಭಿನಂದಿಸಿದೆ.
 

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023